ಬೆಂಗಳೂರು, ಡಿ.24: ಟೀಮ್ ಇಂಡಿಯಾದ ದಿಗ್ಗಜ ಆಟಗಾರರಾದ ವಿರಾಟ್ ಕೊಹ್ಲಿ(Virat Kohli) ಮತ್ತು ರೋಹಿತ್ ಶರ್ಮ(Rohit Sharma) ಹಲವು ವರ್ಷಗಳ ಬಳಿಕ ದೇಶೀಯ ಏಕದಿನ ಕ್ರಿಕೆಟ್ ಟೂರ್ನಿಯಾದ ವಿಜಯ್ ಹಜಾರೆ(Vijay Hazare Trophy) ಪಂದ್ಯದಲ್ಲಿ ಆಡಲಿಳಿದರು. ಕೊಹ್ಲಿ 15 ವರ್ಷಗಳ ಬಳಿಕ ಡೆಲ್ಲಿ ತಂಡ ಪ್ರತಿನಿಧಿಸಿದರೆ, ರೋಹಿತ್ ಮುಂಬೈ ಪರ ಕಣಕ್ಕಿಳಿದರು.
ಡೆಲ್ಲಿ ತಂಡ ಆಂಧ್ರಪ್ರದೇಶ ವಿರುದ್ಧ ಮತ್ತು ಮುಂಬೈ ತಂಡ ಅಸ್ಸಾಂ ವಿರುದ್ದ ಪಂದ್ಯ ಆಡುತ್ತಿದೆ. ಸುರಕ್ಷತೆಯ ಕಾರಣದಿಂದಾಗಿ ಪಂದ್ಯವು ನಗರದ ಹೊರವಲಯದಲ್ಲಿರುವ ಬಿಸಿಸಿಐ ಶ್ರೇಷ್ಠತಾ ಕೇಂದ್ರದ ಕ್ರೀಡಾಂಗಣಕ್ಕೆ ಸ್ಥಳಾಂತರಗೊಂಡಿದೆ. ಅಲ್ಲಿ ಪ್ರೇಕ್ಷಕರಿಗೆ ಪ್ರವೇಶವಿಲ್ಲ.
ಬಿಸಿಸಿಐ ಇತ್ತೀಚೆಗೆ ಮಾಡಿರುವ ನಿಯಮದ ಅನ್ವಯ ಅಂತರರಾಷ್ಟ್ರೀಯ ಪಂದ್ಯಗಳಿಂದ ಬಿಡುವು ಸಿಕ್ಕಾಗ ದೇಶಿ ಟೂರ್ನಿಗಳಲ್ಲಿ ಖ್ಯಾತನಾಮ ಆಟಗಾರರು ಆಡುವುದು ಕಡ್ಡಾಯ. ಟೂರ್ನಿಯಲ್ಲಿ ಕನಿಷ್ಠ ಎರಡು ಪಂದ್ಯಗಳನ್ನಾದರೂ ಆಡಲೇ ಬೇಕು. ಟೆಸ್ಟ್ ಮತ್ತು ಟಿ20 ಮಾದರಿಗಳಿಂದ ನಿವೃತ್ತರಾಗಿರುವ ಕೊಹ್ಲಿ ಏಕದಿನ ತಂಡದಲ್ಲಿದ್ದಾರೆ. ಆದ್ದರಿಂದ ವಿಜಯ್ ಹಜಾರೆ ಟ್ರೋಫಿ ಟೂರ್ನಿಯಲ್ಲಿ ಆಡುತ್ತಿದ್ದಾರೆ.
ಇದನ್ನೂ ಓದಿ ಭಾರತ ವಿರುದ್ಧದ ಏಕದಿನ, ಟಿ20 ಸರಣಿಗೆ ಬಲಿಷ್ಠ ತಂಡ ಪ್ರಕಟಿಸಿದ ನ್ಯೂಜಿಲ್ಯಾಂಡ್
ಕೆ.ಎಲ್ ರಾಹುಲ್ ಕರ್ನಾಟಕ ತಂಡದಲ್ಲಿ ಸ್ಥಾನ ಪಡೆದಿದ್ದರೂ ಇಂದಿನ ಜಾರ್ಖಂಡ್ ಎದುರಿನ ಪಂದ್ಯದಿಂದ ಹೊರಗುಳಿದರು. ಮುಂದಿನ ಪಂದ್ಯದಲ್ಲಿ ಕಣಕ್ಕಿಳಿಯುವ ಸಾಧ್ಯತೆ ಇದೆ.
ದೆಹಲಿ (ಪ್ಲೇಯಿಂಗ್ XI): ಅರ್ಪಿತ್ ರಾಣಾ, ಪ್ರಿಯಾಂಶ್ ಆರ್ಯ, ವಿರಾಟ್ ಕೊಹ್ಲಿ, ನಿತೀಶ್ ರಾಣಾ, ರಿಷಬ್ ಪಂತ್(w/c), ಆಯುಷ್ ಬಡೋನಿ, ಸಿಮರ್ಜೀತ್ ಸಿಂಗ್, ಹರ್ಷ್ ತ್ಯಾಗಿ, ಇಶಾಂತ್ ಶರ್ಮಾ, ಪ್ರಿನ್ಸ್ ಯಾದವ್, ನವದೀಪ್ ಸೈನಿ.
ಆಂಧ್ರ (ಪ್ಲೇಯಿಂಗ್ XI): ಶ್ರೀಕರ್ ಭರತ್(ವಿ.ಕೀ.), ಅಶ್ವಿನ್ ಹೆಬ್ಬಾರ್, ಶೇಕ್ ರಶೀದ್, ರಿಕಿ ಭುಯಿ, ನಿತೀಶ್ ಕುಮಾರ್ ರೆಡ್ಡಿ(ನಾಯಕ), ಸೌರಭ್ ಕುಮಾರ್, ಮರಂರೆಡ್ಡಿ ಹೇಮಂತ್ ರೆಡ್ಡಿ, ಕೆ ಎಸ್ ನರಸಿಂಹರಾಜು, ತ್ರಿಪುರಾಣ ವಿಜಯ್, ಸತ್ಯನಾರಾಯಣ ರಾಜು, ಎಸ್‌ಡಿಎನ್‌ವಿ ಪ್ರಸಾದ್.
ಸಿಕ್ಕಿಂ (ಪ್ಲೇಯಿಂಗ್ XI): ಲೀ ಯೋಂಗ್ ಲೆಪ್ಚಾ(ನಾಯಕ), ಆಶಿಶ್ ಥಾಪಾ(ವಿ.ಕೀ.), ಅಮಿತ್ ರಾಜೇರಾ, ರಾಬಿನ್ ಲಿಂಬೂ, ಗುರಿಂದರ್ ಸಿಂಗ್, ಕ್ರಾಂತಿ ಕುಮಾರ್, ಪಲ್ಜೋರ್ ತಮಾಂಗ್, ಅಂಕುರ್ ಮಲಿಕ್, ಕೆ ಸಾಯಿ ಸಾತ್ವಿಕ್, ಎಂಡಿ ಸಪ್ತುಲ್ಲಾ, ಅಭಿಷೇಕ್ ಕೆಆರ್ ಶಾ.
ಮುಂಬೈ (ಪ್ಲೇಯಿಂಗ್ XI): ರೋಹಿತ್ ಶರ್ಮಾ, ಆಂಗ್ಕ್ರಿಶ್ ರಘುವಂಶಿ, ಸರ್ಫರಾಜ್ ಖಾನ್, ಸಿದ್ಧೇಶ್ ಲಾಡ್, ಮುಶೀರ್ ಖಾನ್, ಹಾರ್ದಿಕ್ ತಮೋರ್(ವಿ.ಕೀ.), ಶಾಮ್ಸ್ ಮುಲಾನಿ, ತನುಷ್ ಕೋಟ್ಯಾನ್, ಶಾರ್ದೂಲ್ ಠಾಕೂರ್(ನಾಯಕ), ತುಷಾರ್ ದೇಶಪಾಂಡೆ, ಸಿಲ್ವೆಸ್ಟರ್ ಡಿಸೋಜಾ.