ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Virat Kohli: ಜೈಸ್ವಾಲ್ ಕೇಶವಿನ್ಯಾಸ ನೋಡಿ 'ಲಗನ್ ಲಗಿ' ನೃತ್ಯದ ಮೂಲಕ ಕೆಣಕಿದ ಕೊಹ್ಲಿ

viral video: ಪಂದ್ಯದಲ್ಲಿ ಭಾರತ ಟಾಸ್‌ ಸೋತು ಬ್ಯಾಟಿಂಗ್‌ಗೆ ಆಹ್ವಾನಿಸಲ್ಪಟ್ಟಿತು. ಕೊಹ್ಲಿ ಶತಕ, ರೋಹಿತ್‌ ಶರ್ಮಾ ಹಾಗೂ ರಾಹುಲ್‌ ತಲಾ ಅರ್ಧಶತಕದ ನೆರವಿನಿಂದ ಭಾರತ 8 ವಿಕೆಟ್‌ಗೆ 349 ರನ್‌ ಕಲೆಹಾಕಿತು. ಈ ಮೊತ್ತವನ್ನು ದ.ಆಫ್ರಿಕಾ ಬ್ಯಾಟರ್‌ಗಳು ಯಶಸ್ವಿಯಾಗಿ ಬೆನ್ನಟ್ಟದಿದ್ದರೂ ಸುಲಭದಲ್ಲಿ ಸೋಲೊಪ್ಪಲಿಲ್ಲ. ಉತ್ತಮ ಹೋರಾಟದ ಹೊರತಾಗಿಯೂ ತಂಡ 49.2 ಓವರ್‌ಗಳಲ್ಲಿ 332 ರನ್‌ಗೆ ಆಲೌಟಾಯಿತು.

Kohli teases Jaiswal

ರಾಂಚಿ, ಡಿ.1: ದಕ್ಷಿಣ ಆಫ್ರಿಕಾ(IND vs SA 1st ODI) ವಿರುದ್ಧ ಭಾನುವಾರ ನಡೆದಿದ್ದ ಮೊದಲ ಏಕದಿನ ಪಂದ್ಯದಲ್ಲಿ ವಿರಾಟ್‌ ಕೊಹ್ಲಿ(Virat Kohli) ಅತ್ಯುತ್ತಮ ಬ್ಯಾಟಿಂಗ್‌ ಪ್ರದರ್ಶನ ತೋರುವ ಮೂಲಕ ಶತಕ ಬಾರಿಸಿ ಮಿಂಚಿದ್ದರು. ಈ ಮಧ್ಯೆ ಪಂದ್ಯದ ವೇಳೆ ಯುವ ಆಟಗಾರ ಯಶಸ್ವಿ ಜೈಸ್ವಾಲ್‌ಗೆ ಕಿಂಗ್ ಕೊಹ್ಲಿ (Virat Kohli) ಕೀಟಲೆ ಮಾಡಿರುವ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ತಮ್ಮ ಅಂತರರಾಷ್ಟ್ರೀಯ ವೃತ್ತಿಜೀವನದ ಕೊನೆಯ ಹಂತವನ್ನು ಆನಂದಿಸುತ್ತಿರುವಂತೆ ಕಾಣುತ್ತಿರುವ ಕೊಹ್ಲಿ, ಪಂದ್ಯ ಪ್ರಾರಂಭವಾಗುವ ಮೊದಲು ತಂಡಗಳು ರಾಷ್ಟ್ರಗೀತೆಗಾಗಿ ಸಾಲುಗಟ್ಟಿ ನಿಂತಿದ್ದಾಗ ಜೈಸ್ವಾಲ್‌ ಜತೆ ಸ್ವಲ್ಪ ಮೋಜು ಮಾಡಲು ಪ್ರಯತ್ನಿಸಿದರು.

ಜೈಸ್ವಾಲ್ ಅವರ ಕೇಶವಿನ್ಯಾಸವನ್ನು 'ತೇರೆ ನಾಮ್' ಚಿತ್ರದಲ್ಲಿ ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ಅವರ ಕೇಶವಿನ್ಯಾಸದೊಂದಿಗೆ ಹೋಲಿಸಿದ ಕೊಹ್ಲಿ ಜೈಸ್ವಾಲ್ ಮುಂದೆ 'ಲಗನ್ ಲಗಿ' ನೃತ್ಯದಂತೆ ಹೆಜ್ಜೆ ಹಾಕಿದರು. ಕೊಹ್ಲಿ ಈ ನೃತ್ಯ ಕಂಡ ಜೈಸ್ವಾಲ್‌ ಸೇರಿ ಸಹ ಆಟಗಾರರು ನಗುವಿನ ಅಲೆಯಲ್ಲಿ ತೇಲಾಡಿದರು.



ಪಂದ್ಯದಲ್ಲಿ ಭಾರತ ಟಾಸ್‌ ಸೋತು ಬ್ಯಾಟಿಂಗ್‌ಗೆ ಆಹ್ವಾನಿಸಲ್ಪಟ್ಟಿತು. ಕೊಹ್ಲಿ ಶತಕ, ರೋಹಿತ್‌ ಶರ್ಮಾ ಹಾಗೂ ರಾಹುಲ್‌ ತಲಾ ಅರ್ಧಶತಕದ ನೆರವಿನಿಂದ ಭಾರತ 8 ವಿಕೆಟ್‌ಗೆ 349 ರನ್‌ ಕಲೆಹಾಕಿತು. ಈ ಮೊತ್ತವನ್ನು ದ.ಆಫ್ರಿಕಾ ಬ್ಯಾಟರ್‌ಗಳು ಯಶಸ್ವಿಯಾಗಿ ಬೆನ್ನಟ್ಟದಿದ್ದರೂ ಸುಲಭದಲ್ಲಿ ಸೋಲೊಪ್ಪಲಿಲ್ಲ. ಉತ್ತಮ ಹೋರಾಟದ ಹೊರತಾಗಿಯೂ ತಂಡ 49.2 ಓವರ್‌ಗಳಲ್ಲಿ 332 ರನ್‌ಗೆ ಆಲೌಟಾಯಿತು.

ಇದನ್ನೂ ಓದಿ IND vs SA: ಭಾರತ-ದಕ್ಷಿಣ ಆಫ್ರಿಕಾ ದ್ವಿತೀಯ ಏಕದಿನ ಪಂದ್ಯ ಯಾವಾಗ?

2ನೇ ವಿಕೆಟ್‌ಗೆ ರೋಹಿತ್‌-ಕೊಹ್ಲಿ ಜೋಡಿ 136 ರನ್‌ ಜೊತೆಯಾಟವಾಡಿ ನೆರೆದಿದ್ದ ಅಭಿಮಾನಿಗಳನ್ನು ಮನರಂಜಿಸಿತು. ರೋಹಿತ್‌ 57ಕ್ಕೆ ವಿಕೆಟ್‌ ಒಪ್ಪಿಸಿದರೆ, 120 ಎಸೆತಕ್ಕೆ 135 ರನ್‌ ಗಳಿಸಿ ಔಟಾದರು. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 83ನೇ ಶತಕ ಪೂರೈಸಿದ ಕೊಹ್ಲಿ ಏಕದಿನದಲ್ಲಿ ಸೆಂಚುರಿ ಸಂಖ್ಯೆಯನ್ನು 52ಕ್ಕೇರಿಸಿದರು. ಉಳಿದಂತೆ ಟೆಸ್ಟ್‌ ಕ್ರಿಕೆಟ್‌ನಲ್ಲಿ 30, ಅಂತಾರಾಷ್ಟ್ರೀಯ ಟಿ20ಯಲ್ಲಿ 1 ಶತಕ ಬಾರಿಸಿದ್ದಾರೆ.

ಕೊಹ್ಲಿ ಶತಕ ಪೂರ್ತಿಗೊಳ್ಳುತ್ತಿದ್ದಂತೆ ಅಭಿಮಾನಿಯೊಬ್ಬ ಭದ್ರತಾ ಸಿಬ್ಬಂದಿ ಕಣ್ತಪ್ಪಿಸಿ ಕೊಹ್ಲಿ ಕಾಲಿಗೆ ಎರಗಿದ್ದ ಘಟನೆಯೂ ನಡೆದಿತ್ತು. ಪಾದ ಮುಟ್ಟಿ ನಮಸ್ಕರಿಸಿ ಕೊಹ್ಲಿಗೆ ಶುಭಾಶಯ ತಿಳಿಸಿದ್ದಾನೆ. ಈ ವೇಳೆ ಭದ್ರತಾ ಸಿಬ್ಬಂದಿಗಳು ಅಭಿಮಾನಿಯನ್ನು ಬಂಧಿಸಿ ಮೈದಾನದಿಂದ ಹೊರಕ್ಕೆ ಕರೆದುಕೊಂಡು ಹೋಗಿದ್ದಾರೆ. ಈ ವಿಡಿಯೊ ಕೂಡ ವೈರಲ್‌ ಆಗಿತ್ತು.