ನವದೆಹಲಿ, ನ.12: ಭಾರತದ ಮಾಜಿ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್ ಅವರ ಪುತ್ರ ಆರ್ಯವೀರ್ ಸೆಹ್ವಾಗ್, ಕ್ರಿಕೆಟ್ ವಲಯದಲ್ಲಿ ಭಾರಿ ಸದ್ದು ಮಾಡುತ್ತಿದ್ದಾರೆ. ಬಲಗೈ ಬ್ಯಾಟರ್ ಆಗಿರುವ ಇವರು, ಇತ್ತೀಚೆಗೆ 'ಅಂಡರ್-19 ಏಷ್ಯಾ ಕಪ್'ನಲ್ಲಿ 160 ರನ್ಗಳನ್ನು ಗಳಿಸುವ ಮೂಲಕ ಗಮನಸೆಳೆದಿದ್ದರು. ಇದೀಗ ಅವರು ಬಾಲ್ಯದಲ್ಲಿ ವಿರಾಟ್ ಕೊಹ್ಲಿಯನ್ನು ಸಂದರ್ಶನ ನಡೆಸಿದ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ಬಾರೀ ವೈರಲ್ ಆಗುತ್ತಿದೆ.
ವೈರಲ್ ವಿಡಿಯೊ ತುಣುಕಿನಲ್ಲಿ, ಆರ್ಯವೀರ್, ಕೊಹ್ಲಿ ಅವರನ್ನು ಸಂದರ್ಶಿಸುತ್ತಿರುವುದನ್ನು ಕಾಣಬಹುದು. ಈ ಸಂದರ್ಭದಲ್ಲಿ ಕೊಹ್ಲಿ ಆರ್ಯವೀರ್ಗೆ ಅತ್ಯಂತ ಮಹತ್ವದ ಸಲಹೆಯೊಂದನ್ನು ನೀಡುತ್ತಾರೆ. ಆರ್ಯವೀರ್ ಅವರು, ಕೊಹ್ಲಿ ಅವರಿಗೆ 14 ಅಥವಾ 15 ವರ್ಷ ವಯಸ್ಸಿನಲ್ಲಿದ್ದಾಗ ಆಶಿಶ್ ನೆಹ್ರಾ ಅವರಿಂದ ಪ್ರಶಸ್ತಿಯೊಂದು ಸಿಕ್ಕಿದ್ದನ್ನು ಪ್ರಸ್ತಾಪಿಸಿದರು. ನಂತರದ ದಿನಗಳಲ್ಲಿ ನೆಹ್ರಾ ಅವರು ಕೊಹ್ಲಿ ಅವರ ನಾಯಕತ್ವದಲ್ಲಿ ಆಡಿದಾಗ, ಕೊಹ್ಲಿಗೆ ಹೇಗನಿಸಿತು ಎಂದು ಪ್ರಶ್ನಿಸಿದರು.
ಡೆಲ್ಲಿ ಕ್ಯಾಪಿಟಲ್ಸ್ ನಾಯಕತ್ವ ತೊರೆಯಲು ಅಕ್ಷರ್ ಪಟೇಲ್ ಚಿಂತನೆ
ಈ ಪ್ರಶ್ನೆಗೆ ಉತ್ತರಿಸಿದ ಕೊಹ್ಲಿ, "ಯಾವಾಗಲೂ ನನ್ನಿಂದ ಇದನ್ನು ಮಾಡಲು ಸಾಧ್ಯ ಎಂದು ಯೋಚಿಸಿ," ಎಂದು ಹೇಳಿದರು.
ಸಂವಾದದ ವೇಳೆ, ಆರ್ಯವೀರ್ ಅವರು ವಿರೇಂದ್ರ ಸೆಹ್ವಾಗ್ ಅವರೊಂದಿಗಿನ ತಮ್ಮ ಮೊದಲ ಭೇಟಿಯ ಬಗ್ಗೆ ಕೊಹ್ಲಿಯನ್ನು ಕೇಳಿದರು. ಇಬ್ಬರು ಕ್ರಿಕೆಟಿಗರಿಗೂ ಪರಿಚಯವಿದ್ದ ರಾಜ್ಯ ಮಟ್ಟದ ತರಬೇತುದಾರರೊಬ್ಬರ ಮೂಲಕ, ದೆಹಲಿಯಲ್ಲಿ ಭಾರತದ ಮಾಜಿ ಆರಂಭಿಕ ಆಟಗಾರನನ್ನು ಭೇಟಿಯಾಗಿದ್ದನ್ನು ಕೊಹ್ಲಿ ನೆನಪಿಸಿಕೊಂಡರು. ಅಂಡರ್-17 ಕ್ರಿಕೆಟ್ನಲ್ಲಿ ಕೊಹ್ಲಿ ತಮ್ಮ ಮೊದಲ ದ್ವಿಶತಕವನ್ನು ಗಳಿಸಿದ ನಂತರ ಈ ಭೇಟಿ ನಡೆದಿತ್ತು.
ಯುಎಇ ವಿರುದ್ಧದ ಪಂದ್ಯದಲ್ಲಿ ಆರ್ಯವೀರ್ ತಮ್ಮ ಚೊಚ್ಚಲ ಯೂತ್ ಏಕದಿನ ಶತಕವನ್ನು ದಾಖಲಿಸಿದರು. ಈ ಟೂರ್ನಿಯಲ್ಲಿ ಅವರು ಇದಕ್ಕೂ ಮುನ್ನ ನೇಪಾಳದ ವಿರುದ್ಧ ಅಜೇಯ 72 ರನ್ ಗಳಿಸುವ ಮೂಲಕ ಗಮನ ಸೆಳೆದಿದ್ದರು.