400 ಮೀಟರ್ ಓಟದಲ್ಲಿ ರಾಷ್ಟ್ರೀಯ ದಾಖಲೆಯನ್ನು ಮುರಿದ ವಿಶಾಲ್ ಟಿಕೆ!
ರಾಷ್ಟ್ರೀಯ ಅಂತಾರಾಜ್ಯ ಹಿರಿಯರ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಪುರುಷರ 400 ಮೀಟರ್ ಓಟದಲ್ಲಿ ತಮಿಳುನಾಡಿನ ವಿಶಾಲ್ ಟಿಕೆ 45.12 ಸೆಕೆಂಡುಗಳಲ್ಲಿ ಗುರಿ ತಲುಪುವ ಮೂಲಕ ರಾಷ್ಟ್ರೀಯ ದಾಖಲೆಯನ್ನು ಮುರಿದಿದ್ದಾರೆ. ಅಲ್ಲದೆ, ವಿಶಾಲ್ ಈ ಋತುವಿನ ನಾಲ್ಕನೇ ವೇಗದ ಏಷ್ಯನ್ 400 ಮೀಟರ್ ಓಟಗಾರ ಎನಿಸಿಕೊಂಡರು.

400 ಮೀಟರ್ ಓಟದಲ್ಲಿ ರಾಷ್ಟ್ರೀಯ ದಾಖಲೆ ಬರೆದ ವಿಶಾಲ್ ಟಿಕೆ.

ಚೆನ್ನೈ: ರಾಷ್ಟ್ರೀಯ ಅಂತರ-ರಾಜ್ಯ ಸೀನಿಯರ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನ ( Inter state Athletics Championships) ಪುರುಷರ 400 ಮೀಟರ್ ಓಟದಲ್ಲಿ ತಮಿಳುನಾಡಿನ ವಿಶಾಲ್ ಟಿಕೆ (Vishal TK) 45.12 ಸೆಕೆಂಡುಗಳ ಸಮಯದೊಂದಿಗೆ ರಾಷ್ಟ್ರೀಯ ದಾಖಲೆಯನ್ನು ಸ್ಥಾಪಿಸಿದ್ದಾರೆ. 21ರ ವಯಸ್ಸಿನ ವಿಶಾಲ್ ತಮ್ಮ ಸ್ಪರ್ಧಿಗಳನ್ನು ದೊಡ್ಡ ಅಂತರ ಕಾಯ್ದುಕೊಂಡು ದೇಶದ ಅತ್ಯುತ್ತಮ 400 ಮೀಟರ್ ಓಟಗಾರ ಎಂಬ ನೂತನ ಮೈಲುಗಲ್ಲು ತಲುಪಿದ್ದಾರೆ. 2019 ರಲ್ಲಿ ಮೊಹಮ್ಮದ್ ಅನಸ್ ಸ್ಥಾಪಿಸಿದ್ದ 45.21 ಸೆಕೆಂಡುಗಳ ಹಿಂದಿನ ರಾಷ್ಟ್ರೀಯ ದಾಖಲೆಯನ್ನು ಅವರು ಮುರಿದಿದ್ದಾರೆ.
ಗುರುವಾರ 64ನೇ ರಾಷ್ಟ್ರೀಯ ಅಂತರ-ರಾಜ್ಯ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನ ಎರಡನೇ ದಿನ. ದೇಶದ ಅತಿದೊಡ್ಡ ರಾಷ್ಟ್ರೀಯ ಟ್ರ್ಯಾಕ್ ಮತ್ತು ಫೀಲ್ಡ್ ಸ್ಪರ್ಧೆಯನ್ನು ಚೆನ್ನೈನ ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ಆಯೋಜಿಸಲಾಗುತ್ತಿದೆ. ತಮಿಳುನಾಡಿನ ಅನುಭವಿ ರಾಜೇಶ್ ರಮೇಶ್ 46.04ರ ಸೆಕೆಂಡುಗಳ ಸಮಯದೊಂದಿಗೆ ಎರಡನೇ ಸ್ಥಾನ ಪಡೆದರೆ, ಹರಿಯಾಣದ ವಿಕ್ರಾಂತ್ ಪಾಂಚಲ್ 46.17 ಸೆಕೆಂಡುಗಳ ಸಮಯದೊಂದಿಗೆ ಮೂರನೇ ಸ್ಥಾನ ಪಡೆದರು.
Women’s Hockey Asia Cup 2025: ಮಹಿಳಾ ಹಾಕಿ ಏಷ್ಯಾಕಪ್‌ಗೆ ಭಾರತ ತಂಡ ಪ್ರಕಟ
ಅಂದ ಹಾಗೆ 45.12ರ ಸೆಕೆಂಡುಗಳ ಓಟದೊಂದಿಗೆ, ವಿಶಾಲ್ ಈ ಋತುವಿನ ನಾಲ್ಕನೇ ವೇಗದ ಏಷ್ಯನ್ 400 ಮೀಟರ್ ಓಟಗಾರ ಎನಿಸಿಕೊಂಡರು. ಜಪಾನ್‌ನ ಯೂಕಿ ಜೋಸೆಫ್ ನಕಾಜಿಮಾ (44.84 ಸೆಕೆಂಡುಗಳು), ಖತಾರ್‌ನ ಅಮ್ಮರ್ ಇಸ್ಮಾಯಿಲ್ ಇಬ್ರಾಹಿಂ (44.90 ಸೆಕೆಂಡುಗಳು) ಮತ್ತು ಚೀನಾದ ಲಿಯುಕೈ ಲಿಯು (45.06 ಸೆಕೆಂಡುಗಳು) ಅವರು ಮುಂದಿದ್ದಾರೆ.
VISHAL TK BREAKS NATIONAL RECORD 🔥🔥
— nnis Sports (@nnis_sports) August 21, 2025
The 400m sensation Vishal TK won the Gold 🥇 medal in the men's 400m with a timing of 45.12s at the Inter State Athletics Championships in Chennai
This Boy Is Unstoppable 🔥🔥
He broke the previous National record 45.21s, which was set by… pic.twitter.com/ye2Rji7rCS
ಇದಕ್ಕೂ ಮುನ್ನ ವಿಶಾಲ್ ಟಿಕೆ ಅವರ ಅತ್ಯುತ್ತಮ ಪ್ರದರ್ಶನ 45.57ರ ಸೆಕೆಂಡುಗಳಾಗಿತ್ತು, ಮೇ ತಿಂಗಳಲ್ಲಿ ದಕ್ಷಿಣ ಕೊರಿಯಾದಲ್ಲಿ ನಡೆದ 2025ರ ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ನಾಲ್ಕನೇ ಸ್ಥಾನ ಪಡೆದಾಗ ಅವರು ಈ ಸಾಧನೆ ಮಾಡಿದರು. ಅವರು ಕೇವಲ 0.02 ಸೆಕೆಂಡುಗಳ ಅಂತರದಿಂದ ಕಂಚಿನ ಪದಕ ಗೆಲ್ಲುವಲ್ಲಿ ವಿಫಲರಾಗಿದ್ದರು. ಇದು ಅವರನ್ನು ತುಂಬಾ ನಿರಾಶೆಗೊಳಿಸಿತ್ತು. ಕೆಲವು ಗಂಟೆಗಳ ನಂತರ, ಅವರು ರಿಲೇ ಓಟದಲ್ಲಿ ಭಾಗವಹಿಸಿ ದೇಶಕ್ಕಾಗಿ ಚಿನ್ನದ ಪದಕ ಗೆದ್ದರು. ಆದಾಗ್ಯೂ, ವಿಶಾಲ್ ವಿಶ್ವ ಚಾಂಪಿಯನ್‌ಶಿಪ್‌ಗಾಗಿ ಸ್ವಯಂಚಾಲಿತ ಅರ್ಹತಾ ಸಮಯ 44.85 ಸೆಕೆಂಡುಗಳನ್ನು ತಪ್ಪಿಸಿಕೊಂಡರು.