IPL 2026 Mini Auction: ಪಂಜಾಬ್ ಕಿಂಗ್ಸ್ ಟಾರ್ಗೆಟ್ ಮಾಡಬಲ್ಲ ಐವರು ಆಟಗಾರರು!
2026ರ ಇಂಡಿಯನ್ ಪ್ರೀಮಿಯರ್ ಟೂರ್ನಿಯ ಮಿನಿ ಹರಾಜು ಡಿಸೆಂಬರ್ 16 ರಂದು ನಡೆಯಲಿದೆ. ಈ ಪಂಜಾಬ್ ಕಿಂಗ್ಸ್ ತಂಡ ಯಾವೆಲ್ಲಾ ಆಟಗಾರರನ್ನು ಖರೀದಿಸಬೇಕೆಂದು ತಂತ್ರವನ್ನು ರೂಪಿಸುತ್ತಿದೆ. ಅಂದಹಾಗೆ ಮಿನಿ ಹರಾಜಿನಲ್ಲಿ ಪಂಜಾಬ್ ಕಿಂಗ್ಸ್ ತಂಡ ಐವರು ಆಟಗಾರರನ್ನು ಖರೀದಿಸಲು ಕಣ್ಣಿಟ್ಟಿದೆ. ಈ ಆಟಗಾರರ ಬಗ್ಗೆ ಇಲ್ಲಿ ವಿವರಿಸಲಾಗಿದೆ.
ಮಿನಿ ಹರಾಜಿನಲ್ಲಿ ಪಂಜಾಬ್ ಕಣ್ಣಿಟ್ಟಿರುವ ಐವರು ಆಟಗಾರರು. -
ನವದೆಹಲಿ: ಬಹುನಿರೀಕ್ಷಿತ 2026 ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಟೂರ್ನಿಯ ಮಿನಿ ಹರಾಜು ಡಿಸೆಂಬರ್ 16 ರಂದು ಅಬುಧಾಬಿಯಲ್ಲಿ ನಡೆಯಲಿದೆ. ಒಟ್ಟು 359 ಆಟಗಾರರು ಬಿಡ್‌ಗೆ ಅರ್ಜಿ ಸಲ್ಲಿಸಲಿದ್ದಾರೆ. ಕಳೆದ ಸೀಸನ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಸೋಲು ಅನುಭವಿಸಿ ರನ್ನರ್ ಅಪ್ ಆಗಿದ್ದ ಪಂಜಾಬ್ ಕಿಂಗ್ಸ್ ಬಗ್ಗೆ ಇದೀಗ ಚರ್ಚಿಸೋಣ. 2025ರ ಟೂರ್ನಿಯಲ್ಲಿ ಪಂಜಾಬ್ ಕಿಂಗ್ಸ್ (Punjab Kings) ಅದ್ಭುತ ಪ್ರದರ್ಶನವನ್ನು ತೋರಿತ್ತು ಹಾಗೂ ಅತ್ಯುತ್ತಮ ಕ್ರಿಕೆಟ್ ಆಡುತ್ತಾ ಫೈನಲ್ ತಲುಪಿತ್ತು. ಇದೀಗ, ಈ ವರ್ಷದ ಮಿನಿ ಹರಾಜಿನಲ್ಲಿ ಪಂಜಾಬ್ ಕಿಂಗ್ಸ್ ಟಾರ್ಗೆಟ್ ಮಾಡಬಹುದಾದ ಐವರು ಆಟಗಾರರ ಬಗ್ಗೆ ಇಲ್ಲಿ ವಿವರಿಸಲಾಗಿದೆ.
ಪಂಜಾಬ್ ಕಿಂಗ್ಸ್ ಉಳಿಸಿಕೊಂಡಿರುವ ಆಟಗಾರರು: ಪ್ರಭಾಸಿಮ್ರಾನ್ ಸಿಂಗ್, ಪ್ರಿಯಾಂಶ್ ಆರ್ಯ, ಶ್ರೇಯಸ್ ಅಯ್ಯರ್, ಶಶಾಂಕ್ ಸಿಂಗ್, ನೆಹಾಲ್ ವಧೇರಾ, ಮಾರ್ಕಸ್ ಸ್ಟೊಯ್ನಿಸ್, ಅಜ್ಮತ್‌ವುಲ್ಲಾ ಒಮರ್ಜಾಯ್, ಮಾರ್ಕೊ ಯೆನ್ಸೆನ್, ಹರ್‌ಪ್ರೀತ್ ಬ್ರಾರ್, ಯುಜ್ವೇಂದ್ರ ಚಹಲ್, ಅರ್ಷದೀಪ್ ಸಿಂಗ್, ಮುಶೀರ್ ಖಾನ್, ಲಾಕಿ ಫರ್ಗ್ಯೂಸನ್, ವೈಶಾಕ್ ವಿಜಯ್‌ಕುಮಾರ್, ಯಶ್ ಠಾಕೂರ್, ವಿಷ್ಣು ವಿನೋದ್, ಕ್ಸಿವಿಯರ್ ಬಾರ್ಲೆಟ್, ಪೈಲಾ ಅವಿನಾಶ್, ಸರ್ಯಾಂಶ್ ಶಡ್ಜೆ, ಹರ್ನೂರ್ ಸಿಂಗ್.
IPL 2026 Auction: ಗ್ಲೆನ್ ಮ್ಯಾಕ್ಸ್‌ವೆಲ್‌ಗೆ ಕೊಕ್ ನೀಡಲು ಬಲವಾದ ಕಾರಣ ತಿಳಿಸಿದ ರಿಕಿ ಪಾಂಟಿಂಗ್!
ಪಂಜಾಬ್ ಕಿಂಗ್ಸ್ ಹರಾಜಿನಲ್ಲಿ ಕಣ್ಣಿಟ್ಟಿರುವ ಆಟಗಾರರು
1.ಸ್ಟೀವ್ ಸ್ಮಿತ್
ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ 2026ರ ಐಪಿಎಲ್ ಮಿನಿ ಹರಾಜಿನಲ್ಲಿ ತಮ್ಮ ಹೆಸರನ್ನು ನಮೂದಿಸಿದ್ದಾರೆ. ಅವರ ಮೂಲ ಬೆಲೆ 2 ಕೋಟಿ ರು ಆಗಿದೆ. ಪಂಜಾಬ್ ತಂಡ ಸ್ಮಿತ್ ಅವರನ್ನು ಗುರಿಯಾಗಿಸಿಕೊಳ್ಳಬಹುದು. ಅವರು ಅಗ್ರ ಕ್ರಮಾಂಕದಲ್ಲಿ ಆಂಕರ್ ಪಾತ್ರವನ್ನು ವಹಿಸಬಹುದು. ಸ್ಮಿತ್‌ಗೆ ಐಪಿಎಲ್ ಆಡಿದ ಅನುಭವವೂ ಇದೆ.
2.ಜಾನಿ ಬೈರ್‌ಸ್ಟೋವ್
ಇಂಗ್ಲೆಂಡ್ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಜಾನಿ ಬೈರ್‌ಸ್ಟೋವ್ ಅವರ ಮೇಲೂ ಪಂಜಾಬ್ ಕಿಂಗ್ಸ್ ಗುರಿ ಇಡಬಹುದು. ಅವರು ತಂಡದಲ್ಲಿ ಜಾಶ್ ಇಂಗ್ಲಿಸ್ ಬದಲು ಇಂಗ್ಲೆಂಡ್ ಆಟಗಾರನನ್ನು ಬಳಸಿಕೊಳ್ಳಬಹುದು. ಅಗ್ರ ಕ್ರಮಾಂಕದಲ್ಲಿ ಜಾನಿ ಆಕ್ರಮಣಕಾರಿಯಾಗಿ ಬ್ಯಾಟ್ ಮಾಡುತ್ತಾರೆ.
IPL 2026: ಮಿನಿ ಹರಾಜಿನಲ್ಲಿ ಮುಂಬೈ ಇಂಡಿಯನ್ಸ್ ಕಣ್ಣಿಟ್ಟಿರುವ ಐವರು ಆಟಗಾರರು!
3.ವಿಷ್ಣು ವಿನೋದ್
ಪಂಜಾಬ್ ಕಿಂಗ್ಸ್ ತಂಡವು ವಿಷ್ಣು ವಿನೋದ್ ಅವರನ್ನು ಭಾರತೀಯ ವಿಕೆಟ್ ಕೀಪರ್ ಆಗಿಯೂ ಪರಿಗಣಿಸಬಹುದು. ವಿಷ್ಣು ವಿನೋದ್ ತಮ್ಮ ಸ್ಫೋಟಕ ಬ್ಯಾಟಿಂಗ್‌ಗೆ ಹೆಸರುವಾಸಿಯಾಗಿದ್ದಾರೆ. ವಿಷ್ಣು ದೇಶಿ ಕ್ರಿಕೆಟ್‌ನಲ್ಲಿ 72 ಟಿ20 ಪಂದ್ಯಗಳನ್ನು ಆಡಿದ್ದು 1757 ರನ್ ಗಳಿಸಿದ್ದಾರೆ.
4.ರವಿ ಬಿಷ್ಣೋಯ್
ಪಂಜಾಬ್ ಕಿಂಗ್ಸ್ ಭಾರತದ ಲೆಗ್ ಸ್ಪಿನ್ನರ್ ರವಿ ಬಿಷ್ಣೋಯ್ ಅವರನ್ನು ಸಹ ಟಾರ್ಗೆಟ್ ಮಾಡಬಹುದು. ಬಿಷ್ಣೋಯ್ ಆಗಮನವು ಪಂಜಾಬ್‌ಗೆ ಯುಜ್ವೇಂದ್ರ ಚಹಲ್ ಜೊತೆ ಸ್ಪಿನ್ ವಿಭಾಗಕ್ಕೆ ಬಲವನ್ನು ತಂದುಕೊಡುತ್ತದೆ. ಇಬ್ಬರೂ ಪಂದ್ಯ ಗೆಲ್ಲುವ ಸ್ಪಿನ್ನರ್‌ಗಳು.
IND vs SA: ಎರಡನೇ ಟಿ20ಐ ಸೋಲಿಗೆ ಕಾರಣ ತಿಳಿಸಿದ ಸೂರ್ಯಕುಮಾರ್ ಯಾದವ್!
5.ಕೂಪರ್ ಕಾನೋಲಿ
ಈ ವರ್ಷದ ಐಪಿಎಲ್ ಹರಾಜಿನಲ್ಲಿ 22ರ ವಯಸ್ಸಿನ ಆಸ್ಟ್ರೇಲಿಯಾದ ಆಟಗಾರ ಕೂಪರ್ ಕೊನೊಲಿ ಕೂಡ ತಮ್ಮ ಹೆಸರನ್ನು ದಾಖಲಿಸಿದ್ದಾರೆ. ಕೊನೊಲಿ ಪಂಜಾಬ್ ಕಿಂಗ್ಸ್ ಪರ ಗ್ಲೆನ್ ಮ್ಯಾಕ್ಸ್‌ವೆಲ್ ಪಾತ್ರವನ್ನು ನಿರ್ವಹಿಸಬಹುದು. ಅವರು ಬ್ಯಾಟಿಂಗ್ ಜೊತೆಗೆ ಬೌಲಿಂಗ್ ಕೂಡ ಮಾಡುತ್ತಾರೆ.