ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IND vs ENG: ಮೊದಲ ಟೆಸ್ಟ್‌ ಪಂದ್ಯಕ್ಕೆ ವಿವಿಎಸ್ ಲಕ್ಷ್ಮಣ್‌ಗೆ ಕೋಚಿಂಗ್ ಜವಾಬ್ದಾರಿ?

ಮಾಜಿ ಕ್ರಿಕೆಟಿಗ, ಎನ್‌ಸಿಎ ಮುಖ್ಯಸ್ಥರೂ ಆಗಿರುವ ವಿವಿಎಸ್‌ ಲಕ್ಷ್ಮಣ್‌ ಈ ಹಿಂದೆ ರಾಹುಲ್‌ ದ್ರಾವಿಡ್‌ ಅವರ ಅನುಪಸ್ಥಿತಿಯಲ್ಲಿ ಹಲವು ಸರಣಿಗಳಲ್ಲಿ ತಂಡದ ಕೋಚಿಂಗ್‌ ನಿರ್ವಹಿಸಿದ್ದರು. ಜತೆಗೆ ಅಂಡರ್‌-19 ವಿಶ್ವಕಪ್‌ನಲ್ಲಿಯೂ ಕೋಚಿಂಗ್‌ ಮಾಡಿದ್ದರು. ಹೀಗಾಗಿ ಅವರಿಗೆ ಕೋಚಿಂಗ್‌ ಕ್ಷೇತ್ರ ಹೊಸದಲ್ಲ.

ಬೆಕೆನ್​ಹ್ಯಾಮ್​: ತಾಯಿಯ ತುರ್ತು ವೈದ್ಯಕಿಯ ಪರಿಸ್ಥಿತಿಯಿಂದಾಗಿ ಇಂಗ್ಲೆಂಡ್​ನಿಂದ ತವರಿಗೆ ಮರಳಿದ್ದ ಭಾರತ ತಂಡದ ಮುಖ್ಯ ಕೋಚ್​ ಗೌತಮ್​ ಗಂಭೀರ್​ ಮತ್ತೆ ಭಾರತ ತಂಡ ಸೇರುವುದು ಕೊಂಚ ತಡವಾಗಲಿದೆ ಎಂದು ತಿಳಿದು ಬಂದಿದೆ. ಹೀಗಾಗಿ ಜೂನ್‌ 20 ರಂದು ಆರಂಭಗೊಳ್ಳುವ ಮೊದಲ ಪಂದ್ಯದಲ್ಲಿ ಗಂಭೀರ್​ ಅನುಪಸ್ಥಿತಿಯಲ್ಲಿ ಹಂಗಾಮಿ ಕೋಚ್‌ ಆಗಿ ವಿವಿಎಸ್ ಲಕ್ಷ್ಮಣ್ ಅವರು ತಂಡದ ಜವಾಬ್ದಾರಿಯನ್ನು ವಹಿಸಿಕೊಳ್ಳುವ ಸಾಧ್ಯತೆಯಿದೆ ಎನ್ನಲಾಗಿದೆ. ಲಕ್ಷ್ಮಣ್ ಕೂಡ ಲಂಡನ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

ಗಂಭೀರ್‌ ತಾಯಿಗೆ ಹೃದಯಾಘಾತವಾಗಿ ನವದೆಹಲಿಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅದರಿಂದಾಗಿ ಗಂಭೀರ್ ಅವರು ಜೂನ್‌ ಜೂನ್‌ 12 ರಂದು ಲಂಡನ್‌ನಿಂದ ದೆಹಲಿಗೆ ಆಗಮಿಸಿದ್ದರು. ಭಾರತ ಹಾಗೂ ಭಾರತ ಎ ತಂಡಗಳು ಆಂತರಿಕ ಅಭ್ಯಾಸ ಪಂದ್ಯದಲ್ಲಿ ಸಹಾಯಕ ಕೋಚ್​ ರ್ಯಾನ್​ ಟೆನ್​ ಡೋಶೆಟ್​ ಭಾರತ ತಂಡಕ್ಕೆ ಮಾರ್ಗದರ್ಶನ ನೀಡಿದ್ದರು. ಇದೀಗ ಲಕ್ಷಣ್‌ ಅವರು ಕೂಡ ಭಾರತ ಹಾಗೂ ಭಾರತ ಎ ತಂಡಗಳ ಅಭ್ಯಾಸ ಪಂದ್ಯಕ್ಕೆ ಹಾಜಾರಾಗಿದ್ದು ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್‌ ಅಗರ್ಕರ್‌ ಜತೆ ಪಂದ್ಯವನ್ನು ವೀಕ್ಷಿಸಿದ್ದಾರೆ. ಹೀಗಾಗಿ ಅವರು ಮೊದಲ ಪಂದ್ಯದ ವೇಳೆ ತಂಡಕ್ಕೆ ಕೋಚಿಂಗ್‌ ನಡೆಸುವುದು ಖಚಿತ ಎನ್ನಲಾಗಿದೆ.



ಮಾಜಿ ಕ್ರಿಕೆಟಿಗ, ಎನ್‌ಸಿಎ ಮುಖ್ಯಸ್ಥರೂ ಆಗಿರುವ ವಿವಿಎಸ್‌ ಲಕ್ಷ್ಮಣ್‌ ಈ ಹಿಂದೆ ರಾಹುಲ್‌ ದ್ರಾವಿಡ್‌ ಅವರ ಅನುಪಸ್ಥಿತಿಯಲ್ಲಿ ಹಲವು ಸರಣಿಗಳಲ್ಲಿ ತಂಡದ ಕೋಚಿಂಗ್‌ ನಿರ್ವಹಿಸಿದ್ದರು. ಜತೆಗೆ ಅಂಡರ್‌-19 ವಿಶ್ವಕಪ್‌ನಲ್ಲಿಯೂ ಕೋಚಿಂಗ್‌ ಮಾಡಿದ್ದರು. ಹೀಗಾಗಿ ಅವರಿಗೆ ಕೋಚಿಂಗ್‌ ಕ್ಷೇತ್ರ ಹೊಸದಲ್ಲ.

ಇದನ್ನೂ ಓದಿ IND vs ENG: ಕೆಎಲ್‌ ರಾಹುಲ್‌ ಬೇಡ, ಶುಭಮನ್ ಗಿಲ್ ಇನಿಂಗ್ಸ್ ಆರಂಭಿಸಲಿ ಎಂದ ಬ್ರಾಡ್ ಹಾಗ್!

ಕೆಂಟ್ ಕೌಂಟಿ ಮೈದಾನದಲ್ಲಿ ನಡೆಯುತ್ತಿರುವ ಇಂಟ್ರಾ-ಸ್ಕ್ವಾಡ್ ಪಂದ್ಯದ 2ನೇ ದಿನವಾದ ಶನಿವಾರ ಸರ್ಫರಾಜ್ ಖಾನ್ ಕೇವಲ 76 ಎಸೆತಗಳಲ್ಲಿ 15 ಬೌಂಡರಿ ಮತ್ತು ಎರಡು ಸಿಕ್ಸರ್‌ಗಳೊಂದಿಗೆ 101 ರನ್ ಗಳಿಸಿದರು. ಐದು ಪಂದ್ಯಗಳ ಸರಣಿಗೆ ಭಾರತದ ಅಧಿಕೃತ ತಂಡದಲ್ಲಿ ಹೆಸರಿಸದಿದ್ದರೂ ಅವರ ಬ್ಯಾಟಿಂಗ್‌ ಪ್ರದರ್ಶನ ಗಮನಸೆಳೆದಿದೆ.