ಧರ್ಮಶಾಲಾ, ಜೂ.14: ಅಫ್ಘಾನಿಸ್ತಾನ(IND vs AFG) ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ರೋಹಿತ್ ಶರ್ಮಾ ಜೊತೆಗಿನ ಗೊಂದಲದಿಂದಾಗಿ ರನೌಟ್ ಆದ ಬಗ್ಗೆ ಭಾರತದ ನಾಯಕ ಶುಭಮನ್ ಗಿಲ್(Shubman Gill) ಪ್ರತಿಕ್ರಿಯೆ ನೀಡಿದ್ದು, ತಪ್ಪು ತಿಳುವಳಿಕೆಯಿಂದಾಗಿ ಅವರು ಔಟ್ ಆದರು ಎಂದರು.
ಅಲ್ಲಾಹ್ ಗಜನ್‌ಫರ್ ಎಸೆತವನ್ನು ಮಿಡ್-ಆನ್ ಕಡೆಗೆ ತಳ್ಳಿದ ನಂತರ ರೋಹಿತ್ ಸಿಂಗಲ್ ತೆಗೆಯುವ ಪ್ರಯತ್ನದಲ್ಲಿ ರನೌಟ್ ಆದರು. ಔಟ್ ಆಗುತ್ತಿದ್ದಂತೆ ರೋಹಿತ್ ಸಿಟ್ಟಿನಲ್ಲಿ ಶುಭಮನ್ ಗಿಲ್ ವಿರುದ್ಧ ಆಕ್ರೋಶಗೊಂಡರು. ಸಂವಹನದ ಕೊರತೆಯಿಂದಾಗಿ ರೋಹಿತ್ ಇನ್ನಿಂಗ್ಸ್ ಮೊಟಕುಗೊಂಡಿದ್ದರಿಂದ ಅವರ ನಿರಾಶೆ ಸ್ಪಷ್ಟವಾಗಿತ್ತು. ಆದಾಗ್ಯೂ, ಗಿಲ್ ಗಮನ ಕೇಂದ್ರೀಕರಿಸಿ ಪಂದ್ಯ ಗೆಲ್ಲುವ ಆಟವಾಡಿದರು. ಭಾರತವು 195 ರನ್‌ಗಳ ಗುರಿಯನ್ನು ಆರಾಮವಾಗಿ ಬೆನ್ನಟ್ಟಿ, 13 ಎಸೆತಗಳು ಬಾಕಿ ಇರುವಾಗಲೇ ಏಳು ವಿಕೆಟ್‌ಗಳಿಂದ ಜಯಗಳಿಸಿತು.
ಮೊರೊಕ್ಕೊ ವಿರುದ್ಧ ಡ್ರಾ ಸಾಧಿಸಿದ ಬ್ರೆಜಿಲ್, ಟರ್ಕಿಯನ್ನು ಮಣಿಸಿದ ಆಸ್ಟ್ರೇಲಿಯಾ
ಗಿಲ್ ಅಜೇಯ 84 ರನ್ ಗಳಿಸಿದರು ಮತ್ತು ಆರಂಭಿಕ ಹಿನ್ನಡೆ ತಂಡದ ಚೇಸಿಂಗ್ ಮೇಲೆ ಪರಿಣಾಮ ಬೀರದಂತೆ ನೋಡಿಕೊಂಡರು. ಪಂದ್ಯದ ನಂತರ, ರೋಹಿತ್ ಜೊತೆ ರನೌಟ್ ಬಗ್ಗೆ ಮಾತನಾಡಿದ್ದೀರಾ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಗಿಲ್, ತಪ್ಪು ನನ್ನದೆ ಎಂದು ರೋಹಿತ್ ಹೇಳಿದ್ದಾಗಿ ಗಿಲ್ ಹೇಳಿದರು. ಅಫ್ಘಾನಿಸ್ತಾನದ ವಿರುದ್ಧ ಆಡಿದ ಕೊನೆಯ ಟಿ20 ಪಂದ್ಯದಲ್ಲೂ ರೋಹಿತ್ ಸಂವಹನ ಕೊರತೆಯಿಂದ ರನೌಟ್ ಆಗಿದ್ದರು.
ದಾಖಲೆ ಬರೆದ ರೋಹಿತ್
ಭಾರತದ ಪರ ಆರಂಭಿಕ ಬ್ಯಾಟ್ಸ್‌ಮನ್ ಆಗಿ 16,000 ಅಂತರರಾಷ್ಟ್ರೀಯ ರನ್ ಗಳಿಸಿದ ಮೊದಲ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗುವ ಮೂಲಕ ರೋಹಿತ್ ಶರ್ಮಾ ಇತಿಹಾಸ ಪುಸ್ತಕಗಳಲ್ಲಿ ತಮ್ಮ ಹೆಸರನ್ನು ಬರೆದಿದ್ದಾರೆ. ಧರ್ಮಶಾಲಾದಲ್ಲಿ ಅಫ್ಘಾನಿಸ್ತಾನ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಈ ಮೈಲಿಗಲ್ಲು ತಲುಪಲು 39 ವರ್ಷದ ಮುಂಬೈನ ಬಲಗೈ ಬ್ಯಾಟ್ಸ್‌ಮನ್ ಆರು ರನ್ ಗಳಿಸುವ ಅಗತ್ಯವಿತ್ತು. ಮೂರನೇ ಓವರ್‌ನ ಮೂರನೇ ಎಸೆತದಲ್ಲಿ ಅಜ್ಮತುಲ್ಲಾ ಒಮರ್‌ಜೈ ಎಸೆತವನ್ನು ಸಿಕ್ಸರ್‌ಗೆ ಸಿಡಿಸುವ ಮೂಲಕ ಈ ಸಾಧನೆ ಮಾಡಿದರು.
ಸರಣಿಯ ಆರಂಭಿಕ ಪಂದ್ಯದಲ್ಲಿ 16 ಎಸೆತಗಳಲ್ಲಿ 16 ರನ್ ಗಳಿಸಿದ್ದ ರೋಹಿತ್, ಈಗ ಭಾರತದ ಪರ ಆರಂಭಿಕ ಆಟಗಾರನಾಗಿ 359 ಪಂದ್ಯಗಳಲ್ಲಿ 384 ಇನ್ನಿಂಗ್ಸ್‌ಗಳಲ್ಲಿ 16,010 ರನ್ ಗಳಿಸಿದ್ದಾರೆ. ಭಾರತ ಪರ ಆರಂಭಿಕನಾಗಿ ಅತಿ ಹೆಚ್ಚು ಅಂತರರಾಷ್ಟ್ರೀಯ ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ, ರೋಹಿತ್ ನಂತರ ವೀರೇಂದ್ರ ಸೆಹ್ವಾಗ್ ಮತ್ತು ಸಚಿನ್ ತೆಂಡೂಲ್ಕರ್ ಇದ್ದಾರೆ. ಭಾರತದ ಪರ ಆರಂಭಿಕನಾಗಿ ಸೆಹ್ವಾಗ್ 321 ಪಂದ್ಯಗಳ 388 ಇನ್ನಿಂಗ್ಸ್‌ಗಳಲ್ಲಿ 15,758 ರನ್ ಗಳಿಸಿದ್ದಾರೆ, ಸಚಿನ್ 346 ಪಂದ್ಯಗಳಲ್ಲಿ 342 ಇನ್ನಿಂಗ್ಸ್‌ಗಳಲ್ಲಿ 15,335 ರನ್ ಗಳಿಸಿದ್ದಾರೆ.