ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಭಾರತ ವಿರುದ್ಧ ಬೃಹತ್‌ ಮೊತ್ತ ಚೇಸಿಂಗ್‌ ನಡೆಸಿ ದಾಖಲೆ ಬರೆದ ವಿಂಡೀಸ್‌

India vs West Indies 2nd T20I: ಭಾರತದ ಪರವಾಗಿ ವೇಗದ ಬೌಲರ್ ಮಯಾಂಕ್ ಯಾದವ್ ಪವರ್‌ಪ್ಲೇನಲ್ಲಿ ಮೂರು ವಿಕೆಟ್‌ಗಳನ್ನು ಪಡೆದರೆ, ಕುಲದೀಪ್ ಯಾದವ್ ರುದರ್‌ಫೋರ್ಡ್ ಅವರನ್ನು ಔಟ್ ಮಾಡಿದರು. ಇದೀಗ ಕುಲದೀಪ್ ಭಾರತಕ್ಕಾಗಿ ಆಡಿದ 56 ಟಿ20 ಅಂತಾರಾಷ್ಟ್ರೀಯ (T20I) ಪಂದ್ಯಗಳಲ್ಲಿ ಒಟ್ಟು 98 ವಿಕೆಟ್‌ಗಳನ್ನು ತಮ್ಮ ಖಾತೆಯಲ್ಲಿ ಹೊಂದಿದ್ದಾರೆ.

Roston Chase

ರಾಂಚಿ, ಅ.10: ಭಾರತ ವಿರುದ್ಧ ಶುಕ್ರವಾರ ನಡೆದಿದ್ದ ಎರಡನೇ ಟಿ20 ಪಂದ್ಯದಲ್ಲಿ ಬೃಹತ್‌ ಮೊತ್ತವನ್ನು ಬೆನ್ನಟ್ಟಿ ಗೆದ್ದ ವೆಸ್ಟ್ ಇಂಡೀಸ್ ತಂಡವು ದಾಖಲೆಯೊಂದನ್ನು ನಿರ್ಮಿಸಿದೆ. 250 ರನ್‌ಗಳ ಗುರಿಯನ್ನು ಬೆನ್ನಟ್ಟಿ ಸಾಧಿಸಿದ ಗೆಲುವು, ಭಾರತದ ವಿರುದ್ಧದ ಟಿ20 ಅಂತಾರಾಷ್ಟ್ರೀಯ (T20I) ಪಂದ್ಯವೊಂದರಲ್ಲಿ ಅತ್ಯಧಿಕ ರನ್ ಬೆನ್ನಟ್ಟುವಿಕೆಯ ಮೂಲಕ ದಾಖಲಾದ ಯಶಸ್ವಿ ಗೆಲುವಾಗಿದೆ. ಇದಕ್ಕೂ ಮೊದಲು, ಭಾರತದ ವಿರುದ್ಧ ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಅತ್ಯಧಿಕ ರನ್ ಬೆನ್ನಟ್ಟುವಿಕೆಯ ಮೂಲಕ ದಾಖಲಾದ ಯಶಸ್ವಿ ಗೆಲುವು ಆಸ್ಟ್ರೇಲಿಯಾದ ಹೆಸರಿನಲ್ಲಿತ್ತು. ಆಸೀಸ್‌ 2023ರಲ್ಲಿ 223 ರನ್‌ಗಳ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟಿತ್ತು.

ರಾಂಚಿಯಲ್ಲಿ ನಡೆದ ಎರಡನೇ ಟಿ20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡವು ಯಶಸ್ವಿಯಾಗಿ ಗುರಿಯನ್ನು ಬೆನ್ನಟ್ಟಿದ್ದು, 20 ಓವರ್‌ಗಳ ಮಾದರಿಯಲ್ಲಿ ಆ ತಂಡದ ಅತ್ಯಧಿಕ ಯಶಸ್ವಿ ರನ್ ಚೇಸ್ (ಗುರಿ ಬೆನ್ನಟ್ಟುವಿಕೆ) ಆಗಿದೆ. ಇದಕ್ಕೂ ಮುನ್ನ, 2015ರ ಜನವರಿ 11ರಂದು ಜೋಹಾನ್ಸ್‌ಬರ್ಗ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 232 ರನ್‌ಗಳ ಗುರಿಯನ್ನು ಅವರು ಯಶಸ್ವಿಯಾಗಿ ಬೆನ್ನಟ್ಟಿದ್ದರು.

IND vs WI: ಶೇಯ್‌ ಹೋಪ್‌ ಅಬ್ಬರದಿಂದ ಗೆದ್ದು ಭಾರತಕ್ಕೆ ತಿರುಗೇಟು ನೀಡಿದ ವೆಸ್ಟ್‌ ಇಂಡೀಸ್‌!

ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಯಶಸ್ವಿಯಾಗಿ ಅತಿ ಹೆಚ್ಚು ರನ್ ಗುರಿಯನ್ನು ಬೆನ್ನಟ್ಟಿದ ದಾಖಲೆಯು ದಕ್ಷಿಣ ಆಫ್ರಿಕಾದ ಹೆಸರಿನಲ್ಲಿದೆ. 2023ರ ಮಾರ್ಚ್ 26ರಂದು ಸೆಂಚೂರಿಯನ್‌ನಲ್ಲಿ ನಡೆದ ಪಂದ್ಯದಲ್ಲಿ, ವೆಸ್ಟ್ ಇಂಡೀಸ್ ನೀಡಿದ್ದ 259 ರನ್‌ಗಳ ಗುರಿಯನ್ನು ದಕ್ಷಿಣ ಆಫ್ರಿಕಾ ತಂಡ ಯಶಸ್ವಿಯಾಗಿ ಬೆನ್ನಟ್ಟಿತು.

ಭಾರತದ ಪರವಾಗಿ ವೇಗದ ಬೌಲರ್ ಮಯಾಂಕ್ ಯಾದವ್ ಪವರ್‌ಪ್ಲೇನಲ್ಲಿ ಮೂರು ವಿಕೆಟ್‌ಗಳನ್ನು ಪಡೆದರೆ, ಕುಲದೀಪ್ ಯಾದವ್ ರುದರ್‌ಫೋರ್ಡ್ ಅವರನ್ನು ಔಟ್ ಮಾಡಿದರು. ಇದೀಗ ಕುಲದೀಪ್ ಭಾರತಕ್ಕಾಗಿ ಆಡಿದ 56 ಟಿ20 ಅಂತಾರಾಷ್ಟ್ರೀಯ (T20I) ಪಂದ್ಯಗಳಲ್ಲಿ ಒಟ್ಟು 98 ವಿಕೆಟ್‌ಗಳನ್ನು ತಮ್ಮ ಖಾತೆಯಲ್ಲಿ ಹೊಂದಿದ್ದಾರೆ.

ವೆಸ್ಟ್ ಇಂಡೀಸ್ ಗಳಿಸಿದ 252 ರನ್‌ಗಳು, ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಟಿ20 ಅಂತಾರಾಷ್ಟ್ರೀಯ ಪಂದ್ಯವೊಂದರಲ್ಲಿ ತಂಡವೊಂದು ಗಳಿಸಿದ ಗರಿಷ್ಠ ಮೊತ್ತವಾಗಿದೆ.