ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಅಜಿಂಕ್ಯ ರಹಾನೆಗೆ ಹೃದಯಸ್ಪರ್ಶಿ ಸಂದೇಶ ಕಳುಹಿಸಿದ ರೋಹಿತ್ ಶರ್ಮಾ

Ajinkya Rahane retired: ರಹಾನೆ ಅವರ ಕ್ರಿಕೆಟ್ ವೃತ್ತಿ ಜೀವನದಲ್ಲಿ ತಾಳ್ಮೆ, ಒತ್ತಡದ ಸಂದರ್ಭದಲ್ಲಿ ಸಂಯಮ, ತಮ್ಮ ನಾಯಕತ್ವ ಗುಣ ಮತ್ತು ನಿಸ್ವಾರ್ಥ ಆಟದ ಮೂಲಕ ರಹಾನೆ ಭಾರತೀಯ ಕ್ರಿಕೆಟ್‌ನಲ್ಲಿ ಅಳಿಸಲಾಗದ ಛಾಪನ್ನು ಮೂಡಿಸಿದ್ದಾರೆ.

ajinkya rahane and rohit sharma

ಮುಂಬಯಿ, ಜು.31: ಭಾರತೀಯ ಕ್ರಿಕೆಟ್ ಕಂಡ ಅತ್ಯಂತ ಪ್ರಮುಖ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾದ ಅಜಿಂಕ್ಯ ರಹಾನೆ ಗುರುವಾರ ಭಾವನಾತ್ಮಕ ವಿಡಿಯೊ ಹಂಚಿಕೊಂಡು ಎಲ್ಲಾ ಮಾದರಿಯ ಕ್ರಿಕೆಟ್‌ಗೆ ಅಧಿಕೃತವಾಗಿ ನಿವೃತ್ತಿ ಘೋಷಿಸಿದ್ದರು. ಸಹ ಆಟಗಾರನ ನಿವೃತ್ತಿ ಬಗ್ಗೆ ರೋಹಿತ್‌ ಶರ್ಮಾ ಶುಕ್ರವಾರ ಟ್ವೀಟ್‌ ಮಾಡಿ ಶುಭ ಹಾರೈಸಿದ್ದಾರೆ.

"ನಾವು ಹಲವು ವರ್ಷಗಳಿಂದ ಡ್ರೆಸ್ಸಿಂಗ್ ರೂಮ್ ಅನ್ನು ಹಂಚಿಕೊಂಡಿದ್ದೇವೆ, ಮತ್ತು ನೀವು ಸಾಧಿಸಿದ ಎಲ್ಲದಕ್ಕೂ ಎಷ್ಟು ಕಠಿಣ ಪರಿಶ್ರಮ ಬೇಕಾಯಿತು ಎಂದು ನನಗೆ ತಿಳಿದಿದೆ. ನಿಮ್ಮ ಬದ್ಧತೆ ಮತ್ತು ವೃತ್ತಿಪರತೆ ಯಾವಾಗಲೂ ನಿಮ್ಮನ್ನು ಪ್ರತ್ಯೇಕಿಸುತ್ತದೆ. ಅದ್ಭುತ ವೃತ್ತಿಜೀವನಕ್ಕೆ ಅಭಿನಂದನೆಗಳು. ಶುಭಾಶಯಗಳು!" ಎಂದು ರೋಹಿತ್ ಪೋಸ್ಟ್ ಮಾಡಿದ್ದಾರೆ.

ಇದಕ್ಕೂ ಮೊದಲು ಕೊಹ್ಲಿ ರಹಾನೆ ಅವರನ್ನು "ನನ್ನ ನೆಚ್ಚಿನ ಟೆಸ್ಟ್ ಬ್ಯಾಟಿಂಗ್ ಜತೆಗಾರ" ಎಂದು ಕರೆದಿದ್ದರು. "ಜಿಂಕ್ಸ್‌, ನಿಮ್ಮ ಅದ್ಭುತ ವೃತ್ತಿಜೀವನಕ್ಕೆ ಅಭಿನಂದನೆಗಳು, ಗೆಳೆಯ. ನೀವು ಭಾರತೀಯ ಕ್ರಿಕೆಟ್‌ಗೆ ಅದ್ಭುತಗಳನ್ನು ಮಾಡಿದ್ದೀರಿ, ಮತ್ತು ನಿಮ್ಮ ಪ್ರಯಾಣದ ಬಗ್ಗೆ ನೀವು ತುಂಬಾ ಹೆಮ್ಮೆಪಡಬಹುದು. ಸ್ಲಿಪ್‌ಗಳಲ್ಲಿ ಅತ್ಯಂತ ಸುರಕ್ಷಿತ ಜೋಡಿ ಕೈಗಳು ಮತ್ತು ನನ್ನ ನೆಚ್ಚಿನ ಟೆಸ್ಟ್ ಬ್ಯಾಟಿಂಗ್ ಸಂಗಾತಿ. ನಿಮಗೆ ಯಾವಾಗಲೂ ಶುಭ ಹಾರೈಸುತ್ತೇನೆ. ದೇವರು ಆಶೀರ್ವದಿಸಲಿ" ಎಂದು ಹಾರೈಸಿದ್ದರು.



ಒಂದು ದಶಕ ಟೀಮ್ ಇಂಡಿಯಾವನ್ನು ಪ್ರತಿನಿಧಿಸಿದ್ದ ರಹಾನೆ, ತಮ್ಮ ಬ್ಯಾಟಿಂಗ್ ತಂತ್ರ, ಮೈದಾನದಲ್ಲಿ ಸಂಯಮ ಮತ್ತು ವಿದೇಶಿ ನೆಲದಲ್ಲಿ ಉತ್ತಮ ಪ್ರದರ್ಶನದಿಂದ ಗಮನ ಸೆಳೆದಿದ್ದರು. ಭಾರತದ ಪರ 85 ಟೆಸ್ಟ್, 90 ಏಕದಿನ ಮತ್ತು 20 ಟಿ–20 ಪಂದ್ಯಗಳನ್ನು ಆಡಿರುವ ಅವರು, ಎಲ್ಲಾ ಮಾದರಿಗಳಿಂದ ಒಟ್ಟು 8,000ಕ್ಕೂ ಅಧಿಕ ರನ್‌ಗಳನ್ನು ಕಲೆಹಾಕಿದ್ದಾರೆ.

ಫುಟ್ಬಾಲ್‌ ವಿಶ್ವಕಪ್‌ ಬಹಿಷ್ಕಾರ: ಸ್ಪೇನ್‌ ಸೇರಿ 55 ದೇಶ ಎಚ್ಚರಿಕೆ!

ರಹಾನೆ ಸ್ಮರಣೀಯ ಕ್ಷಣವೆಂದರೆ 2020-21ರ ಆಸ್ಟ್ರೇಲಿಯಾ ಪ್ರವಾಸದ ಬಾರ್ಡರ್-ಗವಾಸ್ಕರ್ ಟ್ರೋಫಿ. ಪ್ರಮುಖ ಆಟಗಾರರ ಗಾಯದ ಸಮಸ್ಯೆಯಿಂದ ಕಂಗೆಟ್ಟಿದ್ದ ಯುವ ಭಾರತೀಯ ತಂಡವನ್ನು ಮುನ್ನಡೆಸಿದ ರಹಾನೆ, ಅಲ್ಲಿ ಶತಕ ಸಿಡಿಸುವುದರೊಂದಿಗೆ ತಂಡವನ್ನು ಐತಿಹಾಸಿಕ ಟೆಸ್ಟ್ ಸರಣಿ ಗೆಲುವಿನತ್ತ ಮುನ್ನಡೆಸಿದ್ದರು.

ರಹಾನೆ ಅವರ ಕ್ರಿಕೆಟ್ ವೃತ್ತಿ ಜೀವನದಲ್ಲಿ ತಾಳ್ಮೆ, ಒತ್ತಡದ ಸಂದರ್ಭದಲ್ಲಿ ಸಂಯಮ, ತಮ್ಮ ನಾಯಕತ್ವ ಗುಣ ಮತ್ತು ನಿಸ್ವಾರ್ಥ ಆಟದ ಮೂಲಕ ರಹಾನೆ ಭಾರತೀಯ ಕ್ರಿಕೆಟ್‌ನಲ್ಲಿ ಅಳಿಸಲಾಗದ ಛಾಪನ್ನು ಮೂಡಿಸಿದ್ದಾರೆ.