ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ನಾಳೆ ಮೊದಲ ಏಕದಿನ; ಇಂಗ್ಲೆಂಡ್‌ ನೆಲದಲ್ಲಿ ಕೊಹ್ಲಿ, ರೋಹಿತ್‌ ದಾಖಲೆ ಹೇಗಿದೆ?

England vs India ODIs: 2022 ರ ನಂತರ ಮೊದಲ ಬಾರಿಗೆ ಕೊಹ್ಲಿ ಇಂಗ್ಲೆಂಡ್‌ಗೆ ವೈಟ್-ಬಾಲ್ ಕ್ರಿಕೆಟ್ ಆಡಲು ಮರಳಿದ್ದಾರೆ. 2011 ರಲ್ಲಿ ಇಂಗ್ಲೆಂಡ್‌ನಲ್ಲಿ ಮೊದಲ ಬಾರಿಗೆ ಏಕದಿನ ಪಂದ್ಯವಾಡಿದ ಕೊಹ್ಲಿ, ಒಟ್ಟಾರೆ 33 ಪಂದ್ಯಗಳನ್ನು ಆಡಿದ್ದಾರೆ. 2013 ಮತ್ತು 2017 ರ ಚಾಂಪಿಯನ್ಸ್ ಟ್ರೋಫಿಗಳು ಮತ್ತು 2019 ರ ವಿಶ್ವಕಪ್ ಸೇರಿದಂತೆ ದೇಶದಲ್ಲಿ ಆಡಿದ ಮೂರು ಐಸಿಸಿ ಈವೆಂಟ್‌ಗಳಲ್ಲಿ ಅತ್ಯುತ್ತಮ ದಾಖಲೆ ಹೊಂದಿದ್ದಾರೆ.

rohit sharma and virat kohli

ಲಂಡನ್‌, ಜು.13: ಪ್ರವಾಸಿ ಭಾರತ ಮತ್ತು ಇಂಗ್ಲೆಂಡ್‌ ನಡುವಣ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯ ಮಂಗಳವಾರ ಆರಂಭಗೊಳ್ಳಲಿದೆ. ದಿಗ್ಗಜರಾದ ರೋಹಿತ್‌ ಶರ್ಮ ಮತ್ತು ವಿರಾಟ್‌ ಕೊಹ್ಲಿ ಸರಣಿಯ ಕೇಂದ್ರ ಬಿಂದುವಾಗಿದ್ದಾರೆ. ಆಂಗ್ಲರ ನೆಲದಲ್ಲಿ ಉಭಯ ಆಟಗಾರರ ದಾಖಲೆ ಹೇಗಿದೆ ಎಂಬ ವರದಿಯೊಂದು ಇಲ್ಲಿದೆ.

2022ರ ಬಳಿಕ ಕೊಹ್ಲಿ ಕಣಕ್ಕೆ

2022 ರ ನಂತರ ಮೊದಲ ಬಾರಿಗೆ ಕೊಹ್ಲಿ ಇಂಗ್ಲೆಂಡ್‌ಗೆ ವೈಟ್-ಬಾಲ್ ಕ್ರಿಕೆಟ್ ಆಡಲು ಮರಳಿದ್ದಾರೆ. 2011 ರಲ್ಲಿ ಇಂಗ್ಲೆಂಡ್‌ನಲ್ಲಿ ಮೊದಲ ಬಾರಿಗೆ ಏಕದಿನ ಪಂದ್ಯವಾಡಿದ ಕೊಹ್ಲಿ, ಒಟ್ಟಾರೆ 33 ಪಂದ್ಯಗಳನ್ನು ಆಡಿದ್ದಾರೆ. 2013 ಮತ್ತು 2017 ರ ಚಾಂಪಿಯನ್ಸ್ ಟ್ರೋಫಿಗಳು ಮತ್ತು 2019 ರ ವಿಶ್ವಕಪ್ ಸೇರಿದಂತೆ ದೇಶದಲ್ಲಿ ಆಡಿದ ಮೂರು ಐಸಿಸಿ ಈವೆಂಟ್‌ಗಳಲ್ಲಿ ಅತ್ಯುತ್ತಮ ದಾಖಲೆ ಹೊಂದಿದ್ದಾರೆ.

ಕೊಹ್ಲಿ ಏಕದಿನ ದಾಖಲೆ(ಇಂಗ್ಲೆಂಡ್‌ನಲ್ಲಿ)

ಆಡಿದ ಪಂದ್ಯ- 33

ರನ್‌- 1,349

ಶತಕ-1

ಅರ್ಧಶತಕ-12

ಸಿಕ್ಸರ್‌-10

ಬೌಂಡರಿ-122

ರೋಹಿತ್‌ ಶರ್ಮ ದಾಖಲೆ

ಹಿಟ್‌ಮ್ಯಾನ್‌ ಖ್ಯಾತಿಯ ರೋಹಿತ್‌ ಶರ್ಮ ಅವರು ಇಂಗ್ಲೆಂಡ್‌ ನೆಲದಲ್ಲಿ ಉತ್ತಮ ದಾಖಲೆ ಹೊಂದಿದ್ದಾರೆ. 50 ಓವರ್‌ಗಳ ಕ್ರಿಕೆಟ್‌ನಲ್ಲಿ ಅವರ 33 ಶತಕಗಳಲ್ಲಿ ಏಳು ಶತಕಗಳು ಇಂಗ್ಲಿಷ್ ನೆಲದಲ್ಲಿ ಬಂದಿವೆ, ಇದರಲ್ಲಿ 2019 ರ ಕ್ರಿಕೆಟ್ ವಿಶ್ವಕಪ್‌ನಲ್ಲಿ ಐದು ಶತಕಗಳು ಸೇರಿವೆ. ಹೀಗಾಗಿ ಅವರು ವಿರಾಟ್ ಕೊಹ್ಲಿ, ರಿಕಿ ಪಾಂಟಿಂಗ್ ಮತ್ತು ಸರ್ ವಿವ್ ರಿಚರ್ಡ್ಸ್‌ರಂತಹ ದಿಗ್ಗಜ ಆಟಗಾರರಿಗಿಂತಲೂ ಮುಂದಿದ್ದಾರೆ. ರೋಹಿತ್‌ ಕೂಡ 2022ರಲ್ಲಿ ಕೊನೆಯ ಬಾರಿಗೆ ಇಂಗ್ಲೆಂಡ್‌ನಲ್ಲಿ ಏಕದಿನ ಪಂದ್ಯ ಆಡಿದ್ದರು.

ಮೇಜರ್ ಲೀಗ್ ಬೇಸ್‌ಬಾಲ್​ಗೆ ಭಾರತದಲ್ಲಿ ಕ್ರಿಕೆಟಿಗ ಸೂರ್ಯಕುಮಾರ್​ ಪ್ರಚಾರ ರಾಯಭಾರಿ

ಇಂಗ್ಲೆಂಡ್‌ನಲ್ಲಿ ರೋಹಿತ್ ಅವರ ಚೊಚ್ಚಲ ಏಕದಿನ ಶತಕವೂ ವಿಶೇಷವಾಗಿತ್ತು. 2017 ರ ಚಾಂಪಿಯನ್ಸ್ ಟ್ರೋಫಿ ಸೆಮಿಫೈನಲ್‌ನಲ್ಲಿ ಎಡ್ಜ್‌ಬಾಸ್ಟನ್‌ನಲ್ಲಿ ಬಾಂಗ್ಲಾದೇಶ ವಿರುದ್ಧ ಅಜೇಯ 123 ರನ್ ಗಳಿಸಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿದ್ದರು.

ಇಂಗ್ಲೆಂಡ್‌ನಲ್ಲಿ ರೋಹಿತ್ ಹಲವಾರು ಅತ್ಯುತ್ತಮ ಇನ್ನಿಂಗ್ಸ್‌ಗಳನ್ನು ಆಡಿದ್ದಾರೆ, ಆದರೆ 2019 ರ ಮ್ಯಾಂಚೆಸ್ಟರ್ ವಿಶ್ವಕಪ್‌ನಲ್ಲಿ ಪಾಕಿಸ್ತಾನ ವಿರುದ್ಧ ಅವರು ಗಳಿಸಿದ 140 ರನ್‌ ಅವರ ಅತ್ಯಧಿಕ ಸ್ಕೋರ್. ಒಟ್ಟಾರೆ ರೋಹಿತ್‌ ಇಲ್ಲಿ 27 ಪಂದ್ಯಗಳನ್ನು ಆಡಿದ್ದಾರೆ. ಮಾತ್ರವಲ್ಲದೆ ಇಂಗ್ಲೆಂಡ್‌ ನೆಲದಲ್ಲಿ ಅತ್ಯಧಿ ಏಕದಿನ ರನ್‌ಗಳಿಸಿದ ವಿದೇಶಿ ಆಟಗಾರರ ಪೈಕಿ ಅಗ್ರಸ್ಥಾನದಲ್ಲಿದ್ದಾರೆ. ಈ ವರೆಗೆ 1,428* ರನ್‌ ಗಳಿಸಿದ್ದಾರೆ.

ರೋಹಿತ್‌ ಏಕದಿನ ದಾಖಲೆ(ಇಂಗ್ಲೆಂಡ್‌ನಲ್ಲಿ)

ಪಂದ್ಯ- 27

ರನ್-1,428‌

ಶತಕ-7

ಅರ್ಧಶತ-7

ಸಿಕ್ಸರ್‌-33

ಬೌಂಡರಿ-150