ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಆರ್‌ಸಿಬಿ ವಿರುದ್ಧದ ಪಂದ್ಯವನ್ನು ಧೋನಿ ಕೊನೆಯ ಬಾರಿಗೆ ತಪ್ಪಿಸಿಕೊಂಡದ್ದು ಯಾವಾಗ?

ಚೆನ್ನೈ ತಂಡದ ಬೌಲಿಂಗ್‌ ವಿಭಾಗ ತುಂಬಾ ಕಳಪೆ ಮಟ್ಟದಿಂದ ಕೂಡಿದೆ. ಅನ್ಷುಲ್ ಕಂಬೋಜ್, ಮ್ಯಾಟ್ ಹೆನ್ರಿ, ಮ್ಯಾಥ್ಯೂ ಶಾರ್ಟ್, ನೂರ್‌ ಅಹ್ಮದ್‌ ದುಬಾರಿಯಾಗುತ್ತಿದ್ದಾರೆ. ಇದಕ್ಕೆ ಕಳೆದ ಪಂಜಾಬ್‌ ವಿರುದ್ಧದ ಪಂದ್ಯವೇ ಉತ್ತಮ ನಿದರ್ಶನ. 200 ಪ್ಲಸ್‌ ಮೊತ್ತ ಪೇರಿಸಿಯು ಅದನ್ನು ಉಳಿಸಿಕೊಳ್ಳಲಾಗಲಿಲ್ಲ.

MS Dhoni

ಬೆಂಗಳೂರು, ಎ.5: ಸ್ನಾಯುಸೆಳೆತದಿಂದ ಬಳಲುತ್ತಿರುವ ಚೆನ್ನೈ ಸೂಪರ್‌ ಕಿಂಗ್ಸ್‌(Chennai Super Kings) ತಂಡದ ‘ಐಕಾನ್‌’ ಮಹೇಂದ್ರ ಸಿಂಗ್‌ ಧೋನಿ(MS Dhoni) ಅವರು ಈಗಾಗಲೇ ಎರಡು ಐಪಿಎಲ್‌ ಪಂದ್ಯಗಳಿಗೆ ಅಲಭ್ಯರಾಗಿದ್ದರು. ಇಂದು(ಭಾನುವಾರ) ನಡೆಯುವ ಆರ್‌ಸಿಬಿ(RCB vs CSK) ವಿರುದ್ಧದ ಪಂದ್ಯಕ್ಕೂ ಗೈರಾಗಲಿದ್ದಾರೆ. 16 ವರ್ಷಗಳಲ್ಲಿ ಮೊದಲ ಬಾರಿಗೆ ಆರ್‌ಸಿಬಿ ವಿರುದ್ಧದ ಪಂದ್ಯದಿಂದ ಧೋನಿ ಹೊರಗುಳಿಯಲಿದ್ದಾರೆ.

2010 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಐಪಿಎಲ್ ಪಂದ್ಯದಲ್ಲಿ ಎಂಎಸ್ ಧೋನಿ ಕೊನೆಯ ಬಾರಿಗೆ ಗೈರುಹಾಜರಾಗಿದ್ದರು. ಅಂದು ಧೋನಿ ಅನುಪಸ್ಥಿತಿಯಲ್ಲಿ ಸುರೇಶ್ ರೈನಾ ಹಂಗಾಮಿ ನಾಯಕರಾಗಿದ್ದರು. ಆ ಪಂದ್ಯದಲ್ಲಿ ಪಾರ್ಥಿವ್ ಪಟೇಲ್ ವಿಕೆಟ್ ಕೀಪರ್ ಆಗಿದ್ದರು. ಐಪಿಎಲ್‌ನಲ್ಲಿ ಧೋನಿ ಮತ್ತೊಮ್ಮೆ ಆರ್‌ಸಿಬಿ ವಿರುದ್ಧದ ಪಂದ್ಯವನ್ನು ತಪ್ಪಿಸಿಕೊಂಡು 16 ವರ್ಷಗಳಾಗಿವೆ.

ಐದು ಬಾರಿಯ ಚಾಂಪಿಯನ್ ತಂಡವು ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಮುಖಭಂಗ ಅನುಭವಿಸುವ ಮೂಲಕ ತಮ್ಮ ಐಪಿಎಲ್ 2026 ಅಭಿಯಾನವನ್ನು ಆರಂಭಿಸಿತು. ಇದಲ್ಲದೆ, ನಂತರ ಪಂಜಾಬ್ ಕಿಂಗ್ಸ್ ವಿರುದ್ಧ ಚೆನ್ನೈ ತಂಡ ಸೋತಿತು. ಇದೀಗ ಮೂರನೇ ಪಂದ್ಯದಲ್ಲಿ ಆರ್‌ಸಿಬಿ ವಿರುದ್ಧ ಉತ್ತಮ ಪ್ರದರ್ಶನ ನೀಡುವ ಭರವಸೆಯಲ್ಲಿದೆ.

ಭಾನುವಾರ ಪಂದ್ಯಕ್ಕೆ ಯಾವುದೇ ಮಳೆ ಭೀತಿ ಎದುರಾಗಿಲ್ಲ. ಪಂದ್ಯದ ದಿನದಂದು ತಾಪಮಾನವು ಸುಮಾರು 23°C ಆಗುವ ನಿರೀಕ್ಷೆಯಿದೆ. ಗಾಳಿಯ ವೇಗ ಗಂಟೆಗೆ 13.6 ಕಿ.ಮೀ. ಮತ್ತು ಗೋಚರತೆ 10 ಕಿ.ಮೀ. ಇರಲಿದೆ. ಮೋಡ ಕವಿದ ವಾತಾವರಣ ಇದ್ದರೂ ಮಳೆ ಸಾಧ್ಯತೆ ಕಡಿಮೆ. ಒಂದೊಮ್ಮೆ ಪಂದ್ಯ ನಡೆಯುವ ಸಮಯದಲ್ಲಿ ಎಷ್ಟೇ ಜೋರಾಗಿ ಮಳೆ ಬಂದರೂ 15 ರಿಂದ 20 ನಿಮಿಷದೊಳಗೆ ಮತ್ತೆ ಪಂದ್ಯ ಮುಂದುವರಿಯಲು ಅವಕಾಶ ಮಾಡಿಕೊಡುವ ಸೌಲಭ್ಯ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿದೆ.

CSK vs RCB: ಚೆನ್ನೈ ವಿರುದ್ಧ ಕಿಂಗ್‌ ಕೊಹ್ಲಿಯ ದಾಖಲೆ ಹೇಗಿದೆ?

ಋತುರಾಜ್ ಗಾಯಕ್ವಾಡ್ ನಾಯಕತ್ವದ ತಂಡದಲ್ಲಿ ಈ ವರ್ಷ ಸ್ಥಾನ ಗಳಿಸಿಕೊಂಡಿರುವ ವಿಕೆಟ್‌ಕೀಪರ್ ಸಂಜು ಸ್ಯಾಮ್ಸನ್, ಶಿವಂ ದುಬೆ ಅವರು ಹೆಚ್ಚು ಅನುಭವಿ ಇರುವ ಆಟಗಾರರು. ಆದರೆ ಮೊದಲ‌ ಎರಡು ಪಂದ್ಯದಲ್ಲಿ ಅವರು ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದರು. ಯುವ ಆಟಗಾರ ಆಯುಷ್ ಮ್ಹಾತ್ರೆ, ಸರ್ಫರಾಜ್ ಖಾನ್ ಕಳೆದ ಪಂದ್ಯದಲ್ಲಿ ನಿರೀಕ್ಷಿತ ಬ್ಯಾಟಿಂಗ್‌ ಪ್ರದರ್ಶನ ತೋರಿದ್ದರು.

ತಂಡದ ಬೌಲಿಂಗ್‌ ವಿಭಾಗ ತುಂಬಾ ಕಳಪೆ ಮಟ್ಟದಿಂದ ಕೂಡಿದೆ. ಅನ್ಷುಲ್ ಕಂಬೋಜ್, ಮ್ಯಾಟ್ ಹೆನ್ರಿ, ಮ್ಯಾಥ್ಯೂ ಶಾರ್ಟ್, ನೂರ್‌ ಅಹ್ಮದ್‌ ದುಬಾರಿಯಾಗುತ್ತಿದ್ದಾರೆ. ಇದಕ್ಕೆ ಕಳೆದ ಪಂಜಾಬ್‌ ವಿರುದ್ಧದ ಪಂದ್ಯವೇ ಉತ್ತಮ ನಿದರ್ಶನ. 200 ಪ್ಲಸ್‌ ಮೊತ್ತ ಪೇರಿಸಿಯು ಅದನ್ನು ಉಳಿಸಿಕೊಳ್ಳಲಾಗಲಿಲ್ಲ.