ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಫಿಫಾ ವಿಶ್ವಕಪ್ ಉದ್ಘಾಟನ ಪಂದ್ಯದಲ್ಲೇ ಭಾರೀ ಸದ್ದು ಮಾಡಿದ ರೆಡ್‌ಕಾರ್ಡ್

FIFA World Cup 2026: ಪಂದ್ಯದ ಒಂಬತ್ತನೇ ನಿಮಿಷದಲ್ಲೇ ಕ್ವಿನೊನೆಸ್ ಗೋಲು ಬಾರಿಸಿ ಮೆಕ್ಸಿಕೊ ತಂಡಕ್ಕೆ ಮುನ್ನಡೆ ತಂದುಕೊಟ್ಟರು. ಇದೇ ವೇಳೆ ಪ್ರಸಕ್ತ ವಿಶ್ವಕಪ್‌ನಲ್ಲಿ ಮೊದಲ ಗೋಲು ಬಾರಿಸಿದ ಆಟಗಾರ ಎನಿಸಿದರು. ಅರ್ಧವಿರಾಮಕ್ಕಿಂತ ಸ್ವಲ್ಪ ಮುನ್ನ ಎರಡನೇ ಗೋಲು ಗಳಿಸುವ ಅವಕಾಶದಿಂದ ಕ್ವಿನೊನೆಸ್ ಅಲ್ಪ ಅಂತರದಲ್ಲಿ ವಂಚಿತರಾದರು. ಅವರು ಬಡಿದ ಚೆಂಡು ಗೋಲುಪೆಟ್ಟಿಗೆಯ ಕಂಬಕ್ಕೆ ಬಡಿಯಿತು.

Wilton Sampaio

ಮೆಕ್ಸಿಕೊ, ಜೂ.12: ಈ ಬಾರಿಯ ಫಿಫಾ ವಿಶ್ವಕಪ್‌(FIFA World Cup 2026) ಟೂರ್ನಿ ಉದ್ಘಾಟನ ಪಂದ್ಯದಲಲ್ಲೇ ಭಾರೀ ವಿವಾದವೊಂದು ಸಂಭವಿಸಿದೆ. ಗುರುವಾರ ರಾತ್ರಿ ಎಸ್ಟಾಡಿಯೊ ಅಜ್ಟೆಕಾದಲ್ಲಿ ನಡೆದಿದ್ದ ದಕ್ಷಿಣ ಆಫ್ರಿಕಾ ವಿರುದ್ಧ ಆತಿಥೇಯ ಮೆಕ್ಸಿಕೊ ತಂಡ 2-0 ಅಂತರದ ಗೆಲುವು ಸಾಧಿಸಿತು. ಆದರೆ ಈ ಪಂದ್ಯದಲ್ಲಿ ಮೂವರು ಆಟಗಾರರು ರೆಡ್‌ ಕಾರ್ಡ್‌ ಪಡೆದರು. ಮೂರು ರೆಡ್ ಕಾರ್ಡ್‌ಗಳನ್ನು ನೀಡಿದ ನಂತರ ರೆಫರಿ ವಿಲ್ಟನ್ ಸಂಪಾಯೊ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿದೆ.

ಮೆಕ್ಸಿಕೋ ತಂಡ, ಜ್ಯೂಲಿಯನ್ ಕ್ವಿನೊನೆಸ್ ಹಾಗೂ ರವೂಲ್ ಜಿಮೆನೆಝ್ ಅವರ ಗೋಲುಗಳ ನೆರವಿನೊಂದಿಗೆ ಮೂರು ಪೂರ್ಣ ಅಂಕ ಪಡೆಯಿತು. ಆದರೆ ಆಘಾತಕಾರಿ ಅಂಶವೆಂದರೆ, ಇದೇ ಮೊದಲ ಬಾರಿಗೆ ವಿಶ್ವಕಪ್ ಆರಂಭಿಕ ಪಂದ್ಯದಲ್ಲಿ ಮೂವರು ಆಟಗಾರರು ರೆಡ್‌ಕಾರ್ಡ್ ಪಡೆದು ತಂಡದಿಂದ ಹೊರನಡೆಯಬೇಕಾಯಿತು.

ಪಂದ್ಯದ ಒಂಬತ್ತನೇ ನಿಮಿಷದಲ್ಲೇ ಕ್ವಿನೊನೆಸ್ ಗೋಲು ಬಾರಿಸಿ ಮೆಕ್ಸಿಕೊ ತಂಡಕ್ಕೆ ಮುನ್ನಡೆ ತಂದುಕೊಟ್ಟರು. ಇದೇ ವೇಳೆ ಪ್ರಸಕ್ತ ವಿಶ್ವಕಪ್‌ನಲ್ಲಿ ಮೊದಲ ಗೋಲು ಬಾರಿಸಿದ ಆಟಗಾರ ಎನಿಸಿದರು. ಅರ್ಧವಿರಾಮಕ್ಕಿಂತ ಸ್ವಲ್ಪ ಮುನ್ನ ಎರಡನೇ ಗೋಲು ಗಳಿಸುವ ಅವಕಾಶದಿಂದ ಕ್ವಿನೊನೆಸ್ ಅಲ್ಪ ಅಂತರದಲ್ಲಿ ವಂಚಿತರಾದರು. ಅವರು ಬಡಿದ ಚೆಂಡು ಗೋಲುಪೆಟ್ಟಿಗೆಯ ಕಂಬಕ್ಕೆ ಬಡಿಯಿತು.

FIFA World Cup 2026: ಕೊನೆಯ ಫಿಫಾ ವಿಶ್ವಕಪ್‌ ಟೂರ್ನಿ ಆಡುತ್ತಿರುವ ಟಾಪ್‌ 5 ಸ್ಟಾರ್‌ಗಳು!

ದಕ್ಷಿಣ ಆಫ್ರಿಕಾದ ಸಿಫೆಫೆಲೊ ಸಿತ್ಹೋಲ್ ರೆಡ್‌ಕಾರ್ಡ್ ಪಡೆದ ಬಳಿಕ ಆಫ್ರಿಕಾದ ಅವಕಾಶ ಮತ್ತಷ್ಟು ಕ್ಷೀಣಿಸಿತು. ಪಂದ್ಯದ 67ನೇ ನಿಮಿಷದಲ್ಲಿ ಹಿರಿಯ ಆಟಗಾರ ರವೂಲ್ ಜಿಮೆನೆಝ್ ಗೋಲು ಬಾರಿಸಿ ಮೆಕ್ಸಿಕೊ ಮುನ್ನಡೆಯನ್ನು 2-0ಗೆ ಏರಿಸಿದರು. ಈ ಹಂತದಲ್ಲಿ ದಕ್ಷಿಣ ಆಫ್ರಿಕಾದ ಥೆಂಬಾ ಝ್ವೇನ್ ವಿರುದ್ಧವೂ ರೆಡ್‌ಕಾರ್ಡ್ ಪ್ರದರ್ಶಿಸಲಾಯಿತು. ಅಂತಿಮವಾಗಿ ಮೆಕ್ಸಿಕೋದ ರಕ್ಷಣಾ ಆಟಗಾರ ಸೀಸರ್ ಮೋಂಟ್ಸ್ ಕೂಡ ದಕ್ಷಿಣ ಆಫ್ರಿಕಾದ ಗೋಲು ತಡೆಯುವ ಪ್ರಯತ್ನದಲ್ಲಿ ರೆಡ್‌ಕಾರ್ಡ್ ಪಡೆದು ತಂಡ 10 ಆಟಗಾರರೊಂದಿಗೆ ಪಂದ್ಯವನ್ನು ಮುಗಿಸಿತು.

ಯಾರು ಈ ಸಂಪಾಯೊ?

ಸಂಪಾಯೊ ದಕ್ಷಿಣ ಅಮೆರಿಕಾದ ಅತ್ಯಂತ ಅನುಭವಿ ರೆಫರಿಗಳಲ್ಲಿ ಒಬ್ಬರು. ದಶಕಕ್ಕೂ ಹೆಚ್ಚು ಕಾಲ ಅಂತರರಾಷ್ಟ್ರೀಯ ಫುಟ್ಬಾಲ್ ಸರ್ಕ್ಯೂಟ್‌ನಲ್ಲಿ ಪರಿಚಿತ ಮುಖವಾಗಿದ್ದಾರೆ. 44 ವರ್ಷ ವಯಸ್ಸಿನ ಅವರು 2009 ರಲ್ಲಿ ಬ್ರೆಜಿಲ್‌ನ ಉನ್ನತ ವಿಭಾಗದಲ್ಲಿ ಅಧಿಕಾರಿಯಾಗಿ ಸೇವೆ ಸಲ್ಲಿಸಲು ಪ್ರಾರಂಭಿಸಿದರು, ನಂತರ ದೇಶದ ಪ್ರಮುಖ ರೆಫರಿಗಳಲ್ಲಿ ಒಬ್ಬರಾಗಿ ಶೀಘ್ರವಾಗಿ ಖ್ಯಾತಿಯನ್ನು ಗಳಿಸಿದರು. 2013 ರಲ್ಲಿ ಅವರು ತಮ್ಮ ಫಿಫಾ ಬ್ಯಾಡ್ಜ್ ಅನ್ನು ಪಡೆದರು. ಅವರು ಕೋಪಾ ಲಿಬರ್ಟಡೋರ್ಸ್, ಕೋಪಾ ಸುಡಾಮೆರಿಕಾನಾ, ಕೋಪಾ ಅಮೇರಿಕಾ, ಫಿಫಾ ಕ್ಲಬ್ ವಿಶ್ವಕಪ್ ಮತ್ತು ಬಹು ವಿಶ್ವಕಪ್ ಅರ್ಹತಾ ಅಭಿಯಾನಗಳಲ್ಲಿ ಅಂಪೈರ್ ಆಗಿ ಕಾರ್ಯನಿರ್ವಹಿಸಿದ್ದಾರೆ.