ದೋಹಾ, ನ.25: ದೋಹಾದ ವೆಸ್ಟ್ ಎಂಡ್ ಪಾರ್ಕ್ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಗುರುವಾರ ನಡೆಯಲಿರುವ 'ಏಷ್ಯಾ ಕಪ್ ರೈಸಿಂಗ್ ಸ್ಟಾರ್ಸ್'ನ ಮೊದಲ ಸೆಮಿಫೈನಲ್ ಪಂದ್ಯದಲ್ಲಿ, ಇಂಡಿಯಾ 'ಎ' ತಂಡವು ಶ್ರೀಲಂಕಾ 'ಎ' ತಂಡವನ್ನು ಎದುರಿಸಲಿದೆ. ಶುಕ್ರವಾರ ನಡೆಯಲಿರುವ ಮತ್ತೊಂದು ಸೆಮಿ ಪಂದ್ಯದಲ್ಲಿ ಪಾಕಿಸ್ತಾನ ಮತ್ತು ಬಾಂಗ್ಲಾಶದೇಶ ಮುಖಾಮುಖಿಯಾಗಲಿವೆ. ಫೈನಲ್ ಪಂದ್ಯವು ಭಾನುವಾರ ನಡೆಯಲಿದೆ.
'ಗ್ರೂಪ್ ಬಿ' ಪಂದ್ಯದಲ್ಲಿ ನೇಪಾಳದ ವಿರುದ್ಧ ಪಾಕಿಸ್ತಾನ 'ಎ' ತಂಡವು 96 ರನ್‌ಗಳ ಜಯ ಸಾಧಿಸಿದ ನಂತರ ಈ ಪಂದ್ಯವು ಖಚಿತಗೊಂಡಿತು. ಈ ಗೆಲುವಿನೊಂದಿಗೆ ಪಾಕಿಸ್ತಾನ 'ಎ' ತಂಡವು ಭಾರತ 'ಎ' ತಂಡವನ್ನು ಹಿಂದಿಕ್ಕಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನವನ್ನು ಅಲಂಕರಿಸಿತು. ಭಾನುವಾರ ನಡೆದ ಗುಂಪು ಹಂತದ ಪಂದ್ಯದಲ್ಲಿ ಪಾಕಿಸ್ತಾನ 'ಎ' ವಿರುದ್ಧ ಸೋತ ಭಾರತ 'ಎ' ತಂಡವು, ಮೂರು ಪಂದ್ಯಗಳಿಂದ ಒಟ್ಟು ನಾಲ್ಕು ಅಂಕಗಳನ್ನು ಗಳಿಸಿತು.
ವಿಶ್ವ ಶ್ರೇಯಾಂಕದಲ್ಲಿ 5ನೇ ಸ್ಥಾನಕ್ಕೇರಿದ ಭಾರತ ಮಹಿಳಾ ಹಾಕಿ ತಂಡ
ಭಾರತ ಈ ಸೋಲಿನ ಪರಿಣಾಮವಾಗಿ, 'ಗ್ರೂಪ್ ಬಿ'ಯಲ್ಲಿ ಎರಡನೇ ಸ್ಥಾನ ಪಡೆಯಿತು. ಈಗ ಅದು 'ಗ್ರೂಪ್ ಎ'ನಲ್ಲಿ ಅಗ್ರಸ್ಥಾನದಲ್ಲಿರುವ ಶ್ರೀಲಂಕಾ 'ಎ' ತಂಡವನ್ನು ಎದುರಿಸಲಿದೆ. ಶ್ರೀಲಂಕಾ 'ಎ' ತಂಡವು ಆಡಿದ ಮೂರೂ ಪಂದ್ಯಗಳನ್ನು ಗೆಲ್ಲುವ ಮೂಲಕ ಅಂತಿಮ ನಾಲ್ಕು ತಂಡಗಳ ಹಂತಕ್ಕೆ (ಟಾಪ್ ಫೋರ್) ಅರ್ಹತೆ ಪಡೆದಿದೆ.
ಸೂರ್ಯವಂಶಿ ಅಬ್ಬರ
ನಾಕೌಟ್ ಪ್ರವೇಶಕ್ಕೆ ಗೆಲ್ಲಲೇ ಬೇಕಿದ್ದ ಯುಎಇ ವಿರುದ್ಧ ಮಂಗಳವಾರ ನಡೆದಿದ್ದ ಪಂದ್ಯದಲ್ಲಿ ಭಾರತ ಎ ತಂಡವು 7 ವಿಕೆಟ್‌ಗಳಿಂದ ಗೆದ್ದಿತು. 250 ರನ್‌ಗಳ ಗೆಲುವಿನ ಗುರಿ ಬೆನ್ನಟ್ಟಿದ್ದ ಭಾರತ ತಂಡದ ಪರ ವೈಭವ್ ಸೂರ್ಯವಂಶಿ ಅವರ ಕಾಣಿಕೆಯದ್ದೇ ಸಿಂಹಪಾಲು. ಈ ಹಾದಿಯಲ್ಲಿ ಅವರು ದಾಖಲೆಗಳನ್ನೂ ಬರೆದರು.
ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಅತಿ ವೇಗದ ಶತಕ (28 ಎಸೆತ) ಗಳಿಸಿದರು. ಅದನ್ನು ಈ ಮಾದರಿಯ ಶರವೇಗದ ದ್ವಿಶತಕದ (52 ಎಸೆತ) ದಾಖಲೆಯನ್ನಾಗಿ ಪರಿವರ್ತಿಸಿದರು. ಅಲ್ಲದೇ ವೃತ್ತಿಪರ ಕ್ರಿಕೆಟ್ ಪಂದ್ಯವೊಂದರಲ್ಲಿ ಅತಿ ಹೆಚ್ಚು ಸಿಕ್ಸರ್ ಹೊಡೆದ ಸಾಧನೆಯೂ ಅವರದ್ದಾಯಿತು. ಪಂದ್ಯದಲ್ಲಿ ಅವರು ಬರೋಬ್ಬರಿ 28 ಸಿಕ್ಸರ್ ಸಿಡಿಸಿದರು. ಅಂತಿಮವಾಗಿ 53 ಎಸೆತಗಳಿಂದ 204 ರನ್ ಗಳಿಸಿದರು. ಇದೀಗ ಗುರುವಾರ ನಡೆಯುವ ಸೆಮಿ ಫೈನಲ್ ಪಂದ್ಯದಲ್ಲಿಯೂ ಸೂರ್ಯವಂಶಿ ಬ್ಯಾಟಿಂಗ್ ಮೇಳೆ ಬೆಟ್ಟದಷ್ಟು ನಿರೀಕ್ಷೆ ಇರಿಸಲಾಗಿದೆ.