ನ್ಯೂಜೆರ್ಸಿ(ಅಮೆರಿಕ), ಜು.19: ಹಾಲಿ ವಿಶ್ವ ಚಾಂಪಿಯನ್ ಅರ್ಜೆಂಟೀನಾ ಮತ್ತು ಸ್ಪೇನ್ ತಂಡಗಳ ನಡುವಣ ಫಿಫಾ ವಿಶ್ವಕಪ್ ಪಂದ್ಯಕ್ಕೆ ಕ್ಷಣಗಣನೆ ಶುರುವಾಗಿದೆ. ಇಂದು ತಡರಾತ್ರಿ ರಣರೋಚಕ ಫೈನಲ್ ಪೈಪೋಟಿ ನಡೆಯಲಿದೆ. ಆದರೆ ಈ ಪಂದ್ಯಕ್ಕೂ ಮುನ್ನ ಅರ್ಜೆಂಟೀನಾದ ಅಧ್ಯಕ್ಷ ಹಾವಿಯರ್ ಮಿಲೈ ಅವರ ಮೂಢನಂಬಿಕೆಯೊಂದು ಭಾರೀ ಸದ್ದು ಮಾಡಿದೆ. ಹೌದು, ತಾನು ಫೈನಲ್ ಪಂದ್ಯವನ್ನು ಕ್ರೀಡಾಂಗಣದಲ್ಲಿ ವೀಕ್ಷಿಸಿದರೆ ತಂಡ ಸೋಲುತ್ತದೆ ಎಂಬ ಮೂಢನಂಬಿಕೆಯಿಂದಾಗಿ ಅವರು ಕ್ರೀಡಾಂಗಣಕ್ಕೆ ಬರಲು ನಿರಾಕರಿಸಿದ್ದಾರೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜೊತೆಗೂಡಿ ನ್ಯೂಜೆರ್ಸಿ ಕ್ರೀಡಾಂಗಣದಲ್ಲಿ ಫೈನಲ್ ಪಂದ್ಯ ವೀಕ್ಷಿಸಲು ಹಾವಿಯರ್ ಮಿಲೈಗೆ ಆಹ್ವಾನ ನೀಡಲಾಗಿತ್ತು. ಆದರೆ ತಾನು ನಾನು ಕ್ರೀಡಾಂಗಣಕ್ಕೆ ಹೋಗಲ್ಲ. ಎಲ್ಲಾ 7 ಪಂದ್ಯಗಳನ್ನು ಮನೆಯಲ್ಲೇ ಕೂತು ವೀಕ್ಷಿಸಿದ್ದೇನೆ. ಮಾತ್ರವಲ್ಲದೆ ಪಂದ್ಯದ ವೇಳೆ ಜಾಕೆಟ್ ಧರಿಸಿರುತ್ತೇನೆ ಎಂದು ಹೇಳಿದ್ದಾರೆ. ಸ್ವಿಜರ್‌ಲೆಂಡ್ ವಿರುದ್ಧ ಪಂದ್ಯದಲ್ಲಿ ಜಾಕೆಟ್ ತೆಗೆದಾಗ ನಮ್ಮ ವಿರುದ್ಧ ಅವರು ಗೋಲು ಬಾರಿಸಿದ್ದರು. ಹಾಗಾಗಿ ನಾನು ಜಾಕೆಟ್ ಧರಿಸಿಯೇ ಇರುತ್ತೇನೆ ಎಂದಿದ್ದಾರೆ.
1990ರ ವಿಶ್ವಕಪ್‌ನಲ್ಲಿ ಕ್ಯಾಮರೂನ್ ವಿರುದ್ಧ ಅರ್ಜೆಂಟೀನಾ ಸೋತ ಪಂದ್ಯವನ್ನು ಆಗಿನ ಅಧ್ಯಕ್ಷ ಕಾರ್ಲೊಸ್ ಮೆನೆಮ್ ಕ್ರೀಡಾಂಗಣದಲ್ಲಿ ನೇರವಾಗಿ ವೀಕ್ಷಿಸಿದ್ದರು. ಆ ಬಳಿಕ ಯಾವುದೇ ಅಧ್ಯಕ್ಷರು ಅರ್ಜೆಂಟೀನಾದ ಮಹತ್ವದ ಪಂದ್ಯಗಳಿಗೆ ಕ್ರೀಡಾಂಗಣಕ್ಕೆ ಬರುವುದನ್ನು ತಪ್ಪಿಸಿಕೊಂಡಿದ್ದಾರೆ.
ಫಿಫಾ ವಿಶ್ವಕಪ್ ಇತಿಹಾಸದಲ್ಲಿ ಸ್ಪೇನ್ ಮತ್ತು ಅರ್ಜೆಂಟೀನಾ ತಂಡಗಳು ಒಮ್ಮೆ ಮಾತ್ರ ಮುಖಾಮುಖಿಯಾಗಿವೆ ಎಂಬುದು ಗಮನಿಸಬೇಕಾದ ಸಂಗತಿ. 1966 ರಲ್ಲಿ, ಅರ್ಜೆಂಟೀನಾ ತಂಡವು ಸ್ಪೇನ್ ವಿರುದ್ಧ 2-1 ಅಂತರದ ಜಯ ಸಾಧಿಸುವಲ್ಲಿ ಯಶಸ್ವಿಯಾಗಿತ್ತು. ಇದೀಗ ಸ್ಪೇನ್‌ಗೆ 60 ವರ್ಷಗಳ ಬಳಿಕ ಸೇಡು ತೀರಿಸುವ ಅವಕಾಶವೊಂದು ಒದಗಿಬಂದಿದೆ. ಅದು ಕೂಡ ಪ್ರಶಸ್ತಿ ಸುತ್ತಿನಲ್ಲಿ.
ಫಿಫಾ ವಿಶ್ವಕಪ್ ಫೈನಲ್ ಪಂದ್ಯದ ರೆಫರಿಗಳ ಪಟ್ಟಿ ಪ್ರಕಟ
ಟೂರ್ನಿಯಲ್ಲಿ ಅರ್ಜೆಂಟೀನಾ ಅದ್ಭುತ ಫಾರ್ಮ್‌ನಲ್ಲಿದ್ದು, ಅನುಭವಿ ಫಾರ್ವರ್ಡ್ ಲಿಯೋನೆಲ್ ಮೆಸ್ಸಿ ಎಲ್ಲದರಲ್ಲೂ ಮುಂಚೂಣಿಯಲ್ಲಿದ್ದಾರೆ ಎಂಬುದು ಗಮನಿಸಬೇಕಾದ ಸಂಗತಿ. ಟೂರ್ನಿಯಲ್ಲಿ ಅತಿ ಹೆಚ್ಚು ಗೋಲು ಗಳಿಸಿದ ಆಟಗಾರನಾಗಿ, ಮೆಸ್ಸಿ ಅದ್ಭುತ ಫಾರ್ಮ್‌ನಲ್ಲಿದ್ದಾರೆ. ಮೆಸ್ಸಿಯ ಮಾಂತ್ರಿಕ ಆಟದ ಜೊತೆಗೆ ಮಿಡ್‌ಲೀಫ್ಡರ್ ಎನ್ಜೊ ಫೆರ್ನಾಂಡೆಜ್, ಸ್ಟ್ರೈಕರ್ ಲೌಟಾರೊ ಮಾರ್ಟಿನೆಜ್, ಜೂಲಿಯನ್ ಆಲ್ವರೆಜ್ ಸೇರಿದಂತೆ ಯುವ ಶಕ್ತಿಗಳು ಈ ವಿಶ್ವಕಪ್‌ನಲ್ಲಿ ಹೆಚ್ಚಿನ ಸದ್ದು ಮಾಡಿದ್ದಾರೆ.
ಅತ್ತ ಸ್ಪೇನ್, ಪಂದ್ಯದ ಮೊದಲ ನಿಮಿಷದಿಂದಲೇ ಜಾದೂ ಮಾಡುವುದಂತೂ ಖಚಿತ. ತಂಡದ ಪಾಲಿನ ಮಹಾಗೋಡೆ ಉನೈ ಸೈಮನ್ ಈ ವಿಶ್ವಕಪ್‌ನ 7 ಪಂದ್ಯಗಳಲ್ಲಿ ಬಿಟ್ಟುಕೊಟ್ಟಿರುವ ಗೋಲು ಕೇವಲ ಒಂದು. ಅವರಿಗೆ ಹೆಗಲು ಕೊಟ್ಟು ನಿಂತಿರುವ ಪ್ರಚಂಡ ಡಿಫೆಂಡರ್‌ಗಳನ್ನು ಹಿಮ್ಮೆಟ್ಟಿಸುವುದು ಅರ್ಜೆಂಟೀನಾಗೆ ಸವಾಲಾಗಬಹುದು. ಮಿಡ್‌ಫೀಲ್ಡ್‌ನಲ್ಲಿರುವ ಯುವ ಸೂಪರ್‌ಸ್ಟಾರ್‌ಗಳು ತಂಡದ ಆಸ್ತಿ.