ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Roger Binny: ಬಿಸಿಸಿಐ ಅಧ್ಯಕ್ಷ ಸ್ಥಾನದಿಂದ ರೋಜರ್ ಬಿನ್ನಿ ಕೆಳಗಿಳಿಯುವುದು ಏಕೆ ಕಡ್ಡಾಯ?

BCCI President: ಬಿನ್ನಿ ಭಾರತದ ಪರ 27 ಟೆಸ್ಟ್‌ ಮತ್ತು 72 ಏಕದಿನ ಪಂದ್ಯಗಳಾಡಿದ್ದು, ಒಟ್ಟು 124 ವಿಕೆಟ್‌ ಪಡೆದಿದ್ದರು. 1983ರ ಐತಿಹಾಸಿಕ ವಿಶ್ವಕಪ್‌ ಗೆಲುವಿನಲ್ಲಿ ಬಿನ್ನಿ ಪ್ರಮುಖ ಪಾತ್ರ ವಹಿಸಿದ್ದರು. ಕೂಟದಲ್ಲಿ ಅತೀ ಹೆಚ್ಚು ವಿಕೆಟ್‌ ಕಿತ್ತ ಸಾಧನೆ ಮಾಡಿದ್ದ ಬಿನ್ನಿ ಎಂಟು ಇನ್ನಿಂಗ್ಸ್‌ ಗಳಲ್ಲಿ 18 ವಿಕೆಟ್‌ ಪಡೆದಿದ್ದರು.

ಬಿಸಿಸಿಐ ಅಧ್ಯಕ್ಷ ಸ್ಥಾನದಿಂದ ಬಿನ್ನಿ ಕೆಳಗಿಳಿಯುವುದು ಏಕೆ ಕಡ್ಡಾಯ?

Profile Abhilash BC Jul 18, 2025 4:15 PM

ಮುಂಬಯಿ: ಭಾರತದ ಮಾಜಿ ಆಲ್‌ರೌಂಡರ್, ಮತ್ತು ಪ್ರಸ್ತುತ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (BCCI President) ಅಧ್ಯಕ್ಷ ರೋಜರ್ ಬಿನ್ನಿ(Roger Binny) ಅವರು ಜುಲೈ 19 ರಂದು 70 ನೇ ವರ್ಷಕ್ಕೆ ಕಾಲಿಡಲಿದ್ದಾರೆ. ಇದರ ಬೆನ್ನಲ್ಲೇ ಅವರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸುವ ಸಾಧ್ಯತೆ ಇದೆ. ಹೌದು ಕನ್ನಡಿಗ ರೋಜರ್‌ ಬಿನ್ನಿ ಅವರನ್ನು ವಯಸ್ಸಿನ ಮಿತಿಯ ಕಾರಣದಿಂದ ಬದಲಾವಣೆ ಮಾಡಲಾಗುತ್ತಿದೆ. ಬಿಸಿಸಿಐ ಸಂವಿಧಾನದ ಪ್ರಕಾರ 70 ವರ್ಷದ ಬಳಿಕ ಬಿಸಿಸಿಐ ಅಧ್ಯಕ್ಷರಾಗಿ ಇರುವಂತಿಲ್ಲ. ಹೀಗಾಗಿ ಬದಲಾವಣೆ ಮಾಡಬೇಕಿದೆ.

ರೋಜರ್‌ ಬಿನ್ನಿ ಅವರು ಅಕ್ಟೋಬರ್ 2022 ರಲ್ಲಿ ಬಿಸಿಸಿಐನ 36 ನೇ ಅಧ್ಯಕ್ಷರಾಗಿ ನೇಮಕಗೊಂಡಿದ್ದರು. ಅದುವರೆಗೆ ಸೌರವ್‌ ಗಂಗೂಲಿ ಆ ಸ್ಥಾನದಲ್ಲಿದ್ದರು. ಬಿನ್ನಿ ಅವರ ಮೂರು ವರ್ಷಗಳ ಅಧಿಕಾರಾವಧಿಯಲ್ಲಿ ಭಾರತ ಪುರುಷರ ತಂಡ 2024ರ ಟಿ20 ವಿಶ್ವಕಪ್ ಮತ್ತು 2025ರ ಚಾಂಪಿಯನ್ಸ್ ಟ್ರೋಫಿಯನ್ನು ಗೆದ್ದುಕೊಂಡಿತ್ತು. ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯೂಪಿಎಲ್) ಪ್ರಾರಂಭವಾದದ್ದು ಸಹ ಅವರ ಕಾರ್ಯಾವಧಿಯಲ್ಲೇ. ಆದಾಗ್ಯೂ, ಬಿಸಿಸಿಐ ಸಂವಿಧಾನದಲ್ಲಿನ ಕಡ್ಡಾಯ ನಿಯಮದಿಂದಾಗಿ ಅವರ ನಾಯಕತ್ವವು ಈಗ ಕೊನೆಗೊಳ್ಳಬೇಕು.

ಬಿನ್ನಿ ಭಾರತದ ಪರ 27 ಟೆಸ್ಟ್‌ ಮತ್ತು 72 ಏಕದಿನ ಪಂದ್ಯಗಳಾಡಿದ್ದು, ಒಟ್ಟು 124 ವಿಕೆಟ್‌ ಪಡೆದಿದ್ದರು. 1983ರ ಐತಿಹಾಸಿಕ ವಿಶ್ವಕಪ್‌ ಗೆಲುವಿನಲ್ಲಿ ಬಿನ್ನಿ ಪ್ರಮುಖ ಪಾತ್ರ ವಹಿಸಿದ್ದರು. ಕೂಟದಲ್ಲಿ ಅತೀ ಹೆಚ್ಚು ವಿಕೆಟ್‌ ಕಿತ್ತ ಸಾಧನೆ ಮಾಡಿದ್ದ ಬಿನ್ನಿ ಎಂಟು ಇನ್ನಿಂಗ್ಸ್‌ ಗಳಲ್ಲಿ 18 ವಿಕೆಟ್‌ ಪಡೆದಿದ್ದರು.

ಸದ್ಯ ಬಿಸಿಸಿಐ ಉಪಾಧ್ಯಕ್ಷರಾಗಿರುವ ರಾಜೀವ್‌ ಶುಕ್ಲಾ ಅವರ ಸ್ಥಾನ ತುಂಬುವ ಸಾಧ್ಯತೆ ದಟ್ಟವಾಗಿದೆ. ಖಾಲಿ ಇರುವ ಹುದ್ದೆಯನ್ನು ಭರ್ತಿ ಮಾಡಲು, ಗೌರವಾನ್ವಿತ ಸ್ಥಾನಕ್ಕೆ ಹೊಸ ವ್ಯಕ್ತಿಯನ್ನು ಆಯ್ಕೆ ಮಾಡುವವರೆಗೆ ರಾಜೀವ್ ಶುಕ್ಲಾ ಅಧ್ಯಕ್ಷರ ಕರ್ತವ್ಯಗಳನ್ನು ವಹಿಸಿಕೊಳ್ಳುತ್ತಾರೆ ಎನ್ನಲಾಗಿದೆ.

ರಾಜೀವ್‌ ಶುಕ್ಲಾ ಅವರು 2020ರಿಂದ ಬಿಸಿಸಿಐ ಉಪಾಧ್ಯಕ್ಷರಾಗಿದ್ದಾರೆ. ಅವರು 2017ರವರೆಗೆ ಉತ್ತರ ಪ್ರದೇಶ ಕ್ರಿಕೆಟ್‌ ಅಸೋಸಿಯೇಶನ್‌ನ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದರು. 2018ರವರೆಗೆ ಐಪಿಎಲ್‌ ಅಧ್ಯಕ್ಷರಾಗಿ ಶುಕ್ಲಾ ಕೆಲಸ ಮಾಡಿದ್ದರು. ಹಲವು ಅನುಭವ ಆಧಾರದಲ್ಲಿ ಅವರಿಗೆ ಹಂಗಾಮಿ ಅಧ್ಯಕ್ಷ ಸ್ಥಾನ ಸಿಗುವ ಸಾಧ್ಯತೆ ಅಧಿಕ.

ಇದನ್ನೂ ಓದಿ IND vs ENG: ಮ್ಯಾಂಚೆಸ್ಟರ್‌ನಲ್ಲಿ ಭಾರತದ ಟೆಸ್ಟ್‌ ಸಾಧನೆ ಹೇಗಿದೆ?