ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಪಾಕ್‌ ಪಂದ್ಯಕ್ಕೂ ಮುನ್ನ ಭಾರತಕ್ಕೆ ಆತಂಕ; ಅಕ್ಷರ್‌ ಕೈಬೆರಳಿಗೆ ಗಾಯ

ಶುಕ್ರವಾರ ನಡೆದಿದ್ದ ಒಮಾನ್‌ ವಿರುದ್ಧದ ಕೊನೆಯ ಲೀಗ್‌ ಪಂದ್ಯದಲ್ಲಿ ಫೀಲ್ಡಿಂಗ್‌ ವೇಳೆ ಸ್ಪಿನ್‌ ಆಲ್‌ರೌಂಡರ್‌ ಅಕ್ಷರ್‌ ಪಟೇಲ್‌ ಕೈಬೆರಳಿನ ಗಾಯಕ್ಕೆ ತುತ್ತಾಗಿದ್ದರು. ಗಾಯಗೊಂಡ ಅವರು ಬಳಿಕ ಪಂದ್ಯದಲ್ಲಿ ಮುಂದುವರಿದಿರಲಿಲ್ಲ. ಹೀಗಾಗಿ ಅವರು ಪಾಕ್‌ ವಿರುದ್ಧದ ಪಂದ್ಯದಲ್ಲಿ ಆಡಲಿದ್ದಾರಾ ಎಂಬ ಅನುಮಾನ ಮೂಡಿದೆ.

ಪಾಕ್‌ ಪಂದ್ಯಕ್ಕೂ ಮುನ್ನ ಭಾರತಕ್ಕೆ ಗಾಯದ ಭೀತಿ

-

Abhilash BC Abhilash BC Sep 20, 2025 9:34 AM

ದುಬೈ: ಪೆಹಲ್ಗಾಂ ಉಗ್ರದಾಳಿ, ಆಪರೇಷನ್ ಸಿಂದೂರ್ ಬಳಿಕ ಕಳೆದ ಸೆಪ್ಟೆಂಬರ್ 14ರಂದು ಭಾರತ ಹಾಗೂ ಪಾಕಿಸ್ತಾನ ತಂಡಗಳು ಏಷ್ಯಾಕಪ್(Asia Cup 2025) ಟೂರ್ನಿಯ ಗ್ರೂಪ್ ಹಂತದಲ್ಲಿ ಮುಖಾಮುಖಿಯಾಗಿದ್ದವು. ಇದೀಗ ಇತ್ತಂಡಗಳ(IND vs PAK) ನಡುವೆ ಮತ್ತೊಂದು ಕ್ರಿಕೆಟ್‌ ಸಮರಕ್ಕೆ ವೇದಿಕೆ ಸಿದ್ಧಗೊಂಡಿದೆ. ಭಾನುವಾರ(ಸೆ.21) ನಡೆಯುವ ಸೂಪರ್ 4 ಹಂತದಲ್ಲಿ ಸೆಣಸಾಟ ನಡೆಸಲಿದೆ. ಈ ಪಂದ್ಯಕ್ಕೆ ದುಬೈ ಅಂತಾರಾಷ್ಟ್ರೀಯ ಮೈದಾನ ಅಣಿಯಾಗಿದೆ. ಆದರೆ ಪಂದ್ಯಕ್ಕೂ ಮುನ್ನ ಭಾರತ ತಂಡಕ್ಕೆ ಗಾಯದ(Axar Patel injury) ಆತಂಕಕವೊಂದು ಎದುರಾಗಿದೆ.

ಶುಕ್ರವಾರ ನಡೆದಿದ್ದ ಒಮಾನ್‌ ವಿರುದ್ಧದ ಕೊನೆಯ ಲೀಗ್‌ ಪಂದ್ಯದಲ್ಲಿ ಫೀಲ್ಡಿಂಗ್‌ ವೇಳೆ ಸ್ಪಿನ್‌ ಆಲ್‌ರೌಂಡರ್‌ ಅಕ್ಷರ್‌ ಪಟೇಲ್‌ ಕೈಬೆರಳಿನ ಗಾಯಕ್ಕೆ ತುತ್ತಾಗಿದ್ದರು. ಗಾಯಗೊಂಡ ಅವರು ಬಳಿಕ ಪಂದ್ಯದಲ್ಲಿ ಮುಂದುವರಿದಿರಲಿಲ್ಲ. ಹೀಗಾಗಿ ಅವರು ಪಾಕ್‌ ವಿರುದ್ಧದ ಪಂದ್ಯದಲ್ಲಿ ಆಡಲಿದ್ದಾರಾ ಎಂಬ ಅನುಮಾನ ಮೂಡಿದೆ.

ಅಕ್ಷರ್‌ ಗಾಯದ ಬಗ್ಗೆ ಮಾಹಿತಿ ನೀಡಿರುವ ಫೀಲ್ಡಿಂಗ್‌ ಕೋಚ್‌ ದಿಲೀಪ್‌, ಮೇಲ್ನೋಟಕ್ಕೆ ಅಕ್ಷರ್‌ಗೆ ಗಂಭೀರ ಗಾಯವಾದಂತೆ ತೋರುತ್ತಿಲ್ಲ. ತಂಡದ ಎಲ್ಲ ಆಟಗಾರರು ಸಾಂಪ್ರದಾಯಿಕ ಎದುರಾಳಿಗಳೊಂದಿಗೆ ಸ್ಪರ್ಧಿಸಲು ಸಿದ್ಧರಾಗಿದ್ದಾರೆ ಎಂದು ಹೇಳಿದರು. ಅವರ ಹೇಳಿಕೆ ನೋಡುವಾಗ ಅಕ್ಷರ್‌ ಪಾಕ್‌ ವಿರುದ್ಧ ಆಡುವ ಸಾಧ್ಯತೆ ಕಡಿಮೆ ಎನ್ನಬಹುದು. ಒಂದೊಮ್ಮೆ ಅಕ್ಷರ್‌ ಪಂದ್ಯದಿಂದ ಹೊರಗುಳಿದರೆ ಆಗ ವೇಗದ ಬೌಲರ್‌ ಒಬ್ಬರಿಗೆ ತಂಡದಲ್ಲಿ ಅವಕಾಶ ಸಿಗಬಹುದು.

ಇದನ್ನೂ ಓದಿ Asia Cup 2025: ಪಾಕ್‌ ವಿರುದ್ಧ ಕ್ರಮಕ್ಕೆ ಮುಂದಾದ ಐಸಿಸಿ