Arshdeep Singh: ಟಿ20ಯಲ್ಲಿ 100 ವಿಕೆಟ್ ಪೂರ್ತಿಗೊಳಿಸಿ ದಾಖಲೆ ಬರೆದ ಅರ್ಶ್‌ದೀಪ್
ಪೂರ್ಣ ಸದಸ್ಯ ರಾಷ್ಟ್ರಗಳ ಪೈಕಿ ರಶೀದ್ ಖಾನ್ (53 ಪಂದ್ಯಗಳು), ಸಂದೀಪ್ ಲಮಿಚಾನೆ(54 ಪಂದ್ಯಗಳು) ಮತ್ತು ವನಿಂದು ಹಸರಂಗ (63 ಪಂದ್ಯಗಳು) ನಂತರ ಅವರು T20I ನಲ್ಲಿ 100 ವಿಕೆಟ್‌ಗಳನ್ನು ವೇಗವಾಗಿ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದ್ದಾರೆ.

-

ದುಬೈ: ಟೀಮ್ ಇಂಡಿಯಾದ ಎಡಗೈ ವೇಗಿ ಅರ್ಶ್‌ದೀಪ್ ಸಿಂಗ್(Arshdeep Singh) ಅವರು ಟಿ20ಯಲ್ಲಿ 100 ವಿಕೆಟ್‌ಗಳ ಮೈಲಿಗಲ್ಲು ತಲುಪಿದ ಮೊದಲ ಭಾರತೀಯ ಆಟಗಾರ ಎನಿಸಿದರು. ಶುಕ್ರವಾರ ನಡೆದ ಒಮಾನ್(India vs Oman) ವಿರುದ್ಧದ ಪಂದ್ಯದಲ್ಲಿ ಒಂದು ವಿಕೆಟ್ ಪಡೆಯುವ ಮೂಲಕ ಈ ಸಾಧನೆಗೈದರು.
2025 ರ ಜನವರಿಯಲ್ಲಿ ಇಂಗ್ಲೆಂಡ್ ವಿರುದ್ಧದ ಕೊನೆಯ ಎರಡು ಪಂದ್ಯಗಳಲ್ಲಿ ಅರ್ಶ್‌ದೀಪ್‌ಗೆ ಅವಕಾಶ ನೀಡದೇ ಇದ್ದ ಕಾರಣ ಅವರು 99 ವಿಕೆಟ್‌ಗಳಲ್ಲಿ ಸಿಲುಕಿಕೊಂಡಿದ್ದರು. ಇದೀಗ 8 ತಿಂಗಳ ಬಳಿಕ ಸಿಕ್ಕ ಅವಕಾಶದಲ್ಲಿ ಈ ಮೈಲಿಗಲ್ಲು ತಲುಪಿದರು.
ಅರ್ಶ್‌ದೀಪ್ 100 ಟಿ20 ವಿಕೆಟ್ ಪಡೆದ ಮೊದಲ ಭಾರತೀಯ ಆಟಗಾರನಲ್ಲದೆ, ಈ ಮಾದರಿಯಲ್ಲಿ ವೇಗವಾಗಿ 100 ವಿಕೆಟ್ ಪಡೆದ ಸೀಮರ್ ಎಂಬ ದಾಖಲೆಯನ್ನೂ ಬರೆದ್ದಾರೆ. ಅವರು ಕೇವಲ 64 ಪಂದ್ಯಗಳಲ್ಲಿ ಈ ಮೈಲಿಗಲ್ಲು ಸಾಧಿಸಿದ್ದಾರೆ. ಪೂರ್ಣ ಸದಸ್ಯ ರಾಷ್ಟ್ರಗಳ ಪೈಕಿ ರಶೀದ್ ಖಾನ್ (53 ಪಂದ್ಯಗಳು), ಸಂದೀಪ್ ಲಮಿಚಾನೆ(54 ಪಂದ್ಯಗಳು) ಮತ್ತು ವನಿಂದು ಹಸರಂಗ (63 ಪಂದ್ಯಗಳು) ನಂತರ ಅವರು T20I ನಲ್ಲಿ 100 ವಿಕೆಟ್‌ಗಳನ್ನು ವೇಗವಾಗಿ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದ್ದಾರೆ.
ಇದನ್ನೂ ಓದಿ Asia Cup 2025: ಪಾಕ್ ವಿರುದ್ಧ ಕ್ರಮಕ್ಕೆ ಮುಂದಾದ ಐಸಿಸಿ