ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IND vs ENG 5th Test: ಭಾರತ-ಇಂಗ್ಲೆಂಡ್‌ ಸರಣಿ ಕ್ಲೈಮ್ಯಾಕ್ಸ್‌ಗೆ ಮಹತ್ವದ ಟ್ವಿಸ್ಟ್‌!

ವೋಕ್ಸ್ ಇನ್ನಿಂಗ್ಸ್ ಯಾವ ರೂಪ ಪಡೆಯುತ್ತದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಟ್ರೆಂಟ್ ಬ್ರಿಡ್ಜ್‌ನಲ್ಲಿ ಮಾಲ್ಕಮ್ ಮಾರ್ಷಲ್ ಒಂಟಿ ಕೈಯಲ್ಲಿ ಬ್ಯಾಟಿಂಗ್ ಮಾಡುತ್ತಿದ್ದ ಚಿತ್ರ ನೆನಪಿಗೆ ಬರುತ್ತದೆ. ಇದು ತಂಡದ ಸಹ ಆಟಗಾರನಿಗೆ ಶತಕ ಗಳಿಸಲು ಸಹಾಯ ಮಾಡುವ ನೆರವಾಗಿತ್ತು ಎಂದು ರೂಟ್‌ ಹೇಳಿದ್ದಾರೆ.

ಭಾರತ-ಇಂಗ್ಲೆಂಡ್‌ ಸರಣಿ ಕ್ಲೈಮ್ಯಾಕ್ಸ್‌ಗೆ ಮಹತ್ವದ ಟ್ವಿಸ್ಟ್‌!

Abhilash BC Abhilash BC Aug 4, 2025 12:47 PM

ಲಂಡನ್‌: ಕ್ಲೈಮ್ಯಾಕ್ಸ್‌ ಹಂತಕ್ಕೆ ಬಂದು ನಿಂತಿರುವ ಭಾರತ ಮತ್ತು ಇಂಗ್ಲೆಂಡ್‌ ನಡುವಣ 5ನೇ ಹಾಗೂ ಕೊನೆಯ ಟೆಸ್ಟ್‌(IND vs ENG 5th Test) ಪಂದ್ಯಕ್ಕೆ ಮಹತ್ವದ ಟ್ವಿಸ್ಟ್ ಸಿಕ್ಕಿದೆ. ಭುಜದ ಗಾಯದಿಂದಾಗಿ ಮೊದಲ ಇನ್ನಿಂಗ್ಸ್‌ನಲ್ಲಿ ಬ್ಯಾಟ್‌ ಮಾಡದ ಕ್ರಿಸ್‌ ವೋಕ್ಸ್‌(Chris Woakes) ಅಗತ್ಯಬಿದ್ದರೆ ಬ್ಯಾಟಿಂಗ್‌ಗಿಳಿಯುವುದು ಖಚಿತವಾಗಿದೆ. ಹೀಗಾಗಿ, ಭಾರತ ಪಂದ್ಯ ಗೆದ್ದು ಸರಣಿ ಡ್ರಾ ಮಾಡಿಕೊಳ್ಳಬೇಕಿದ್ದರೆ ಕೊನೆ 4 ವಿಕೆಟ್‌ ಉರುಳಿಸಬೇಕು.

4ನೇ ದಿನದ ಅಂತ್ಯಕ್ಕೆ 6 ವಿಕೆಟ್‌ ನಷ್ಟಕ್ಕೆ 339 ರನ್‌ ಗಳಿಸಿರುವ ಇಂಗ್ಲೆಂಡ್‌, ಸೋಮವಾರ ಗೆಲ್ಲಬೇಕಿದ್ದರೆ 35 ರನ್‌ ಗಳಿಸಬೇಕಿದೆ. ನಾಲ್ಕನೇ ದಿನದಾಟ ಭಾನುವಾರವೇ ವೋಕ್ಸ್‌ ತಮ್ಮ ತಂಡ ಒಂದರ ಹಿಂದೆ ಒಂದು ವಿಕೆಟ್‌ ಕಳೆದುಕೊಂಡಾಗ ಕ್ರೀಸ್‌ಗಿಳಿಯಲು ಸಿದ್ಧತೆ ನಡೆಸುತ್ತಿದ್ದ ದೃಶ್ಯಗಳು ಟೀವಿಯಲ್ಲಿ ಪ್ರಸಾರಗೊಂಡಿತ್ತು. ಇದೀಗ ಅವರು ಅಗತ್ಯಬಿದ್ದರೆ ಬ್ಯಾಟಿಂಗ್‌ ನಡೆಸಲು ತೀರ್ಮಾನಿಸಿದ್ದಾರೆ. ಆಲ್‌ರೌಂಡರ್‌ ಆಗಿರುವ ಅವರು ಹಲವು ಬ್ಯಾಟಿಂಗ್‌ನಲ್ಲಯೂ ಹಲವು ಉತ್ತಮ ಪ್ರದರ್ಶನ ನೀಡಿದ್ದಾರೆ.

ವೋಕ್ಸ್ ಇನ್ನಿಂಗ್ಸ್ ಯಾವ ರೂಪ ಪಡೆಯುತ್ತದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಟ್ರೆಂಟ್ ಬ್ರಿಡ್ಜ್‌ನಲ್ಲಿ ಮಾಲ್ಕಮ್ ಮಾರ್ಷಲ್ ಒಂಟಿ ಕೈಯಲ್ಲಿ ಬ್ಯಾಟಿಂಗ್ ಮಾಡುತ್ತಿದ್ದ ಚಿತ್ರ ನೆನಪಿಗೆ ಬರುತ್ತದೆ. ಇದು ತಂಡದ ಸಹ ಆಟಗಾರನಿಗೆ ಶತಕ ಗಳಿಸಲು ಸಹಾಯ ಮಾಡುವ ನೆರವಾಗಿತ್ತು ಎಂದು ರೂಟ್‌ ಹೇಳಿದ್ದಾರೆ.

ಇದನ್ನೂ ಓದಿ IND vs ENG Test Series: ಟೆಸ್ಟ್‌ ಇತಿಹಾಸದಲ್ಲೇ ಮೊದಲು!; 9 ಆಟಗಾರರಿಂದ 400+ ರನ್‌

"ನನಗೆ ಖಚಿತವಿಲ್ಲ, ವೋಕ್ಸ್‌ ಇನ್ನೂ ಅಭ್ಯಾಸ ಮಾಡುವುದನ್ನು ನಾನು ನೋಡಿಲ್ಲ. ಸೋಮವಾರ ಪಂದ್ಯಕ್ಕೂ ಮುನ್ನ ಬೆಳಗ್ಗೆ ಅವರು ಕೆಲವು ಥ್ರೋಡೌನ್‌ಗಳನ್ನು ಅಭ್ಯಾಸ ನಡೆಸುವ ಸಾಧ್ಯತೆ ಇದೆ. ಆಗ ನಮಗೆ ಉತ್ತಮ ಸೂಚನೆ ಸಿಗಬಹುದು" ಎಂದು ರೂಟ್ ಹೇಳಿದರು.