ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ವಿರಾಟ್ ಪುತ್ರಿಗೆ ಅತ್ಯಾಚಾರ ಬೆದರಿಕೆ: ತನಿಖೆ ವರದಿ ಕೇಳಿದ ಮಹಿಳಾ ಆಯೋಗ

ವಿರಾಟ್ ಪುತ್ರಿಗೆ ಅತ್ಯಾಚಾರ ಬೆದರಿಕೆ: ತನಿಖೆ ವರದಿ ಕೇಳಿದ ಮಹಿಳಾ ಆಯೋಗ

image-d436d78a-d56f-44a1-b419-76cc9401434f.jpg
ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ-ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರ ಹಸುಗೂಸಿಗೆ ಅತ್ಯಾಚಾರದ ಬೆದರಿಕೆ ಹಾಕಿದ್ದ ಪ್ರಕರಣದಲ್ಲಿ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ದೆಹಲಿ ಮಹಿಳಾ ಆಯೋಗ ವಿವರಣೆ ಕೇಳಿದೆ. ಕ್ರಿಕೆಟ್ ಅಭಿಮಾನಿಗಳ ಪೈಕಿ ಕೆಲವರಲ್ಲಿ ಅತಿರೇಕದ ವರ್ತನೆಗೆ ಕಾರಣವಾಗಿ ಟ್ವಿಟರ್ ನಲ್ಲಿ ವ್ಯಕ್ತಿಯೋರ್ವ ವಿರಾಟ್ ಕೊಹ್ಲಿ- ಅನುಷ್ಕಾ ಶರ್ಮಾ ಮಗುವಿಗೆ ಅತ್ಯಾಚಾರದ ಬೆದರಿಕೆ ಹಾಕಿದ್ದ. ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ-ಪಾಕಿಸ್ತಾನ ಪಂದ್ಯದಲ್ಲಿ ಭಾರತ ತಂಡ ಸೋಲು ಕಂಡಿತ್ತು. ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದ ದೆಹಲಿಯ ಮಹಿಳಾ ಆಯೋಗ ಪ್ರಕರಣ ದಲ್ಲಿ ಎಫ್‌ಐಆರ್ ದಾಖಲಿಸಿರುವುದು, ಆರೋಪಿಯ ಗುರುತು, ಬಂಧನ, ಕೈಗೊಳ್ಳಲಾಗಿ ರುವ ಕ್ರಮಗಳ ಬಗ್ಗೆ ವಿವರವಾಗಿ ನ.08 ರ ವೇಳೆಗೆ ತಿಳಿಸಬೇಕೆಂದು ದೆಹಲಿಯ ಡಿಸಿಪಿ ಅವರನ್ನು ಕೇಳಿದೆ. ಅತ್ಯಾಚಾರದ ಬೆದರಿಕೆ ಹಾಕಿದ್ದ ಟ್ವಿಟರ್ ಹ್ಯಾಂಡಲ್ ಈಗ ಡಿಲೀಟ್ ಆಗಿದೆ. ವ್ಯಕ್ತಿಯ ಗುರುತನ್ನು ಇನ್ನಷ್ಟೇ ಪತ್ತೆ ಮಾಡಬೇಕಿದೆ.