ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಮಹಿಳಾ ಏಷ್ಯಾಕಪ್‌ ಫೈನಲ್‌; ಶ್ರೀಲಂಕಾ ವಿರುದ್ಧ ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡ ಭಾರತ

Women's Asia Cup Final: ಸ್ಪಿನ್ನರ್ ದೀಪ್ತಿ ಅವರು ಒಟ್ಟು 11 ವಿಕೆಟ್ ಗಳಿಸಿದ್ದಾರೆ. ಟೂರ್ನಿಯಲ್ಲಿ ಅತ್ಯಧಿಕ ವಿಕೆಟ್ ಗಳಿಸಿದವರ ಪಟ್ಟಿಯ ಅಗ್ರಸ್ಥಾನವನ್ನು ಶ್ರೀಲಂಕಾ ತಂಡದ ಚಾಮರಿ ಅಟಪಟ್ಟು ಅವರೊಂದಿಗೆ ಹಂಚಿಕೊಂಡಿದ್ದಾರೆ. ಹೀಗಾಗಿ ಉಭಯ ಆಟಗಾರ್ತಿಯರ ಮಧ್ಯೆ ಅಗ್ರಸ್ಥಾನ ಪೈಪೋಟಿ ಇದೆ.

India Women vs Sri Lanka Women

ದುಬೈ, ಸೆ.13: ಏಳು ಸಲದ ಚಾಂಪಿಯನ್ ಭಾರತ ವನಿತೆಯರ ತಂಡವು ಏಷ್ಯಾ ಕಪ್ ಮಹಿಳೆಯರ ಟಿ20 ಕ್ರಿಕೆಟ್ ಟೂರ್ನಿಯ ಫೈನಲ್‌ನಲ್ಲಿ ಶ್ರೀಲಂಕಾ ವಿರುದ್ಧ ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡಿದೆ. ಭಾರತ ಈ ಪಂದ್ಯಕ್ಕೆ ಒಂದು ಬದಲಾವಣೆ ಮಾಡಿಕೊಂಡಿತು. ಕಳಪೆ ಬ್ಯಾಟಿಂಗ್‌ ಫಾರ್ಮ್‌ ಹೊಂದಿದ್ದ ಪ್ರತಿಕಾ ರಾವಲ್‌ ಬದಲಿಗೆ ಗುಣಲನ್ ಕಮಲಿನಿಗೆ ಅವಕಾಶ ನೀಡಿತು.

ಭಾರತ ತಂಡದ ಆರಂಭಿಕ ಬ್ಯಾಟರ್ ಶಫಾಲಿ ವರ್ಮಾ ಟೂರ್ನಿಯಲ್ಲಿ ಎರಡು ಅರ್ಧಶತಕಗಳನ್ನು ಗಳಿಸಿದ್ದಾರೆ. ಒಟ್ಟು 168 ರನ್‌ ಅವರ ಖಾತೆಯಲ್ಲಿವೆ. ಟೂರ್ನಿಯ ಅತ್ಯಧಿಕ ಸ್ಕೋರರ್ ಆಗಿದ್ದಾರೆ. ಫೈನಲ್‌ನಲ್ಲಿಯೂ ಅವರ ಮೇಲೆ ಬೆಟ್ಟದಷ್ಟು ನಿರೀಕ್ಷೆ ಇರಿಸಲಾಗಿದೆ. ಅನುಭವಿ ಮಂಧಾನ, ನಾಯಕಿ ಹರ್ಮನ್‌ಪ್ರೀತ್‌ ಕೌರ್‌ ಕೂಡ ತಂಡಕ್ಕೆ ನೆರವಾಗಬೇಕಿದೆ.

ಸ್ಪಿನ್ನರ್ ದೀಪ್ತಿ ಅವರು ಒಟ್ಟು 11 ವಿಕೆಟ್ ಗಳಿಸಿದ್ದಾರೆ. ಟೂರ್ನಿಯಲ್ಲಿ ಅತ್ಯಧಿಕ ವಿಕೆಟ್ ಗಳಿಸಿದವರ ಪಟ್ಟಿಯ ಅಗ್ರಸ್ಥಾನವನ್ನು ಶ್ರೀಲಂಕಾ ತಂಡದ ಚಾಮರಿ ಅಟಪಟ್ಟು ಅವರೊಂದಿಗೆ ಹಂಚಿಕೊಂಡಿದ್ದಾರೆ. ಹೀಗಾಗಿ ಉಭಯ ಆಟಗಾರ್ತಿಯರ ಮಧ್ಯೆ ಅಗ್ರಸ್ಥಾನ ಪೈಪೋಟಿ ಇದೆ.

ಎರಡು ವರ್ಷಗಳ ಹಿಂದೆ ದಂಬುಲ್ಲಾದಲ್ಲಿ ನಡೆದಿದ್ದ ಏಷ್ಯಾ ಕಪ್ ಫೈನಲ್‌ನಲ್ಲಿಯೂ ಶ್ರೀಲಂಕಾ ಮತ್ತು ಭಾರತ ಮುಖಾಮುಖಿಯಾಗಿದ್ದವು. ಅಲ್ಲಿ ಶ್ರೀಲಂಕಾ ಗೆದ್ದು ಚಾಂಪಿಯನ್‌ ಪಟ್ಟ ಅಲಂಕರಿಸಿತ್ತು. ಇದೀಗ ಭಾರತ ಅಂದಿನ ಸೋಲಿಗೆ ಸೇಡು ತೀರಿಸಿಕೊಂಡಿತೇ ಎಂದು ಕಾದು ನೋಡಬೇಕಿದೆ. ಲಂಕಾ ಪರ ಈ ಸಲದ ಟೂರ್ನಿಯಲ್ಲಿ ಹರ್ಷಿತಾ ಸಮರವಿಕ್ರಮ, ಕವೀಶಾ ದಿಲ್ಹರಿ, ನೀಲಾಕ್ಷಿಕಾ ಸಿಲ್ವಾ ಅವರೂ ಉತ್ತಮ ಲಯದಲ್ಲಿದ್ದಾರೆ.

ಉಭಯ ಆಡುವ ಬಳಗ

ಭಾರತ: ಸ್ಮೃತಿ ಮಂಧಾನ, ಶಫಾಲಿ ವರ್ಮಾ, ಹರ್ಮನ್‌ಪ್ರೀತ್ ಕೌರ್(ನಾಯಕಿ), ಭಾರತಿ ಫುಲ್ಮಾಲಿ, ರಿಚಾ ಘೋಷ್(ವಿ.ಕೀ.), ಗುಣಲನ್ ಕಮಲಿನಿ, ದೀಪ್ತಿ ಶರ್ಮಾ, ಪ್ರೇಮಾ ರಾವತ್, ಶ್ರೀ ಚರಣಿ, ಕ್ರಾಂತಿ ಗೌಡ್, ನಂದನಿ ಶರ್ಮಾ.

ಶ್ರೀಲಂಕಾ: ಚಾಮರಿ ಅಟಪಟ್ಟು(ನಾಯಕಿ), ಇಮೇಶಾ ದುಲಾನಿ, ಹಾಸಿನಿ ಪೆರೇರಾ, ವಿಶ್ಮಿ ಗುಣರತ್ನೆ, ಹರ್ಷಿತಾ ಸಮರವಿಕ್ರಮ, ಕವಿಶಾ ದಿಲ್ಹಾರಿ, ನೀಲಾಕ್ಷಿಕಾ ಸಿಲ್ವಾ, ಕೌಶಿನಿ ನುತ್ಯಂಗನ(ವಿ.ಕೀ.), ಸುಗಂದಿಕಾ ಕುಮಾರಿ, ಚಾಮುದಿ ಪ್ರಬೋದಾ, ಮಿಥಾಲಿ ಅಯೋಧ್ಯೆ.

ನೇರಪ್ರಸಾರ: ಸೋನಿ ಸ್ಪೋರ್ಟ್ಸ್‌ ನೆಟ್‌ವರ್ಕ್‌, ಸೋನಿ ಲಿವ್‌ ಆ್ಯಪ್‌.