ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಏಷ್ಯನ್‌ ಗೇಮ್ಸ್‌; ಹಾಲಿ ಚಾಂಪಿಯನ್‌ ಭಾರತಕ್ಕೆ ಸವಾಲೊಡ್ಡೀತೇ ಬಾಂಗ್ಲಾ?

Women's Asian Games 2026: ಚೀನಾ ಮಹಿಳಾ ತಂಡದ ವಿರುದ್ಧದ ಕ್ವಾರ್ಟರ್-ಫೈನಲ್ ಪಂದ್ಯವು ಒಂದೂ ಎಸೆತ ಕಾಣದೆ ರದ್ದಾದ ನಂತರ, ಬಾಂಗ್ಲಾದೇಶ ಮಹಿಳಾ ತಂಡವು ಸೆಮಿ-ಫೈನಲ್‌ಗೆ ಪ್ರವೇಶಿಸಿತು. ಇದೀಗ ಫೈನಲ್‌ನಲ್ಲಿ ಸ್ಥಾನ ಪಡೆಯುವ ಗುರಿಯೊಂದಿಗೆ, ಅವರು ತಮ್ಮ ತಂಡವನ್ನು ಸಂಘಟಿಸಿಕೊಂಡು ಭಾರತದ ವಿರುದ್ಧ ಬಲಿಷ್ಠ ಪ್ರದರ್ಶನ ನೀಡಲು ಸಜ್ಜಾಗಲಿದ್ದಾರೆ.

IND W vs BAN W

ನಗೋಯಾ, ಸೆ.19: ಭಾರತೀಯ ಮಹಿಳಾ ತಂಡವು 2026ರ ಏಷ್ಯನ್ ಕ್ರೀಡಾಕೂಟದ ಎರಡನೇ ಸೆಮಿಫೈನಲ್‌ನಲ್ಲಿ ಬಾಂಗ್ಲಾದೇಶ ಮಹಿಳಾ ತಂಡವನ್ನು ಎದುರಿಸಲಿದೆ. ಈ ಪಂದ್ಯ ಭಾನುವಾರ(ಸೆ. 20) ನಿಶಿನ್‌ನ ಕೊರೋಗಿ ಸ್ಪೋರ್ಟ್ಸ್ ಪಾರ್ಕ್‌ನಲ್ಲಿ ನಡೆಯಲಿದೆ. ದಿನದ ಮೊದಲ ಸೆಮಿಫೈನಲ್‌ನಲ್ಲಿ ಪಾಕಿಸ್ತಾನ ಮತ್ತು ಶ್ರೀಲಂಕಾ ಸೆಣಸಾಟ ಮುಖಾಮುಖಿಯಾಲಿವೆ.

ಕ್ವಾರ್ಟರ್-ಫೈನಲ್‌ನಲ್ಲಿ ಆತಿಥೇಯ ಜಪಾನ್ ಮಹಿಳಾ ತಂಡವನ್ನು ಸೋಲಿಸುವ ಮೂಲಕ ಭಾರತೀಯ ಮಹಿಳಾ ತಂಡವು ಅಂತಿಮ ನಾಲ್ಕರ ಹಂತಕ್ಕೆ ಪ್ರವೇಶಿಸಿತು. ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಭಾರತ ತಂಡವು, ತಮ್ಮ ಚಿನ್ನದ ಪದಕವನ್ನು ಉಳಿಸಿಕೊಳ್ಳುವ ಗುರಿಯೊಂದಿಗೆ ಸೆಮಿ-ಫೈನಲ್‌ನಲ್ಲೂ ಉತ್ತಮ ಲಯವನ್ನು ಮುಂದುವರಿಸಿ ಫೈನಲ್‌ಗೆ (ಅಂತಿಮ ಹಣಾಹಣಿಗೆ) ಲಗ್ಗೆಯಿಡಲು ಪ್ರಯತ್ನಿಸಲಿದೆ.

ಏತನ್ಮಧ್ಯೆ, ಚೀನಾ ಮಹಿಳಾ ತಂಡದ ವಿರುದ್ಧದ ಕ್ವಾರ್ಟರ್-ಫೈನಲ್ ಪಂದ್ಯವು ಒಂದೂ ಎಸೆತ ಕಾಣದೆ ರದ್ದಾದ ನಂತರ, ಬಾಂಗ್ಲಾದೇಶ ಮಹಿಳಾ ತಂಡವು ಸೆಮಿ-ಫೈನಲ್‌ಗೆ ಪ್ರವೇಶಿಸಿತು. ಇದೀಗ ಫೈನಲ್‌ನಲ್ಲಿ ಸ್ಥಾನ ಪಡೆಯುವ ಗುರಿಯೊಂದಿಗೆ, ಅವರು ತಮ್ಮ ತಂಡವನ್ನು ಸಂಘಟಿಸಿಕೊಂಡು ಭಾರತದ ವಿರುದ್ಧ ಬಲಿಷ್ಠ ಪ್ರದರ್ಶನ ನೀಡಲು ಸಜ್ಜಾಗಲಿದ್ದಾರೆ.

ಪಿಚ್‌ ರಿಪೋರ್ಟ್‌

ಬ್ಯಾಟರ್‌ಗಳು ಮತ್ತು ಬೌಲರ್‌ಗಳು ಇಬ್ಬರಿಗೂ ನೆರವಾಗುವಂತಹ ಪಿಚ್‌ ಇದಾಗಿದ್ದು, ಶಿಸ್ತನ್ನು ಕಾಯ್ದುಕೊಳ್ಳುವ ಮತ್ತು ಬೌಲಿಂಗ್ ವೇಗದಲ್ಲಿ ವೈವಿಧ್ಯತೆಯನ್ನು ತರುವ ಬೌಲರ್‌ಗಳಿಗೆ ನೆರವು ಸಿಗುವ ಸಾಧ್ಯತೆಯಿದೆ. ಅದೇ, ಬ್ಯಾಟರ್‌ಗಳು ರನ್ ಗಳಿಕೆಯ ವೇಗವನ್ನು ಹೆಚ್ಚಿಸುವ ಮೊದಲು ಕ್ರೀಸ್‌ನಲ್ಲಿ ಸಾಕಷ್ಟು ಸಮಯ ಕಳೆಯಬೇಕಾಗುತ್ತದೆ.

ಏಷ್ಯನ್ ಗೇಮ್ಸ್: ಭಾರತದ ಪುರುಷರ ಕ್ರಿಕೆಟ್ ತಂಡಕ್ಕೆ ಕಿಟ್ ವಿಳಂಬದ ಸಮಸ್ಯೆ

ಪಂದ್ಯಕ್ಕೆ ಮಳೆ ಭೀತಿ

ಚಂಡಮಾರುತವೊಂದು ಐಚಿ-ನಗೋಯಾ ಕರಾವಳಿಯನ್ನು ಅಪ್ಪಳಿಸುವ ಸಾಧ್ಯತೆಯಿದ್ದು, ಇದು ಪಂದ್ಯಕ್ಕೆ ಅಡ್ಡಿಪಡಿಸುವ ಸಾಧ್ಯತೆಯಿದೆ. ಪಂದ್ಯಕ್ಕೆ ಯಾವುದೇ ಮೀಸಲು ದಿನ ಇರದ ಕಾರಣ ಒಂದೊಮ್ಮೆ ಪಂದ್ಯ ಮಳೆಯಿಂದ ರದ್ದಾದರೆ ಶ್ರೇಯಾಂಕದ ಆಧಾರದಲ್ಲಿ ತಂಡದ ವಿಜೇತರನ್ನು ನಿರ್ಧರಿಸಲಾಗುತ್ತದೆ. ಆಗ ಬಾಂಗ್ಲಾದೇಶಕ್ಕಿಂತ ಮುಂದಿರುವ ಭಾರತಕ್ಕೆ ಫೈನಲ್‌ ಟಿಕೆಟ್‌ ಸಿಗಲಿದೆ.

ಮುಖಾಮುಖಿ

ಭಾರತ ಮತ್ತು ಬಾಂಗ್ಲಾದೇಶ ಇದುವರೆಗೆ ಟಿ20ಯಲ್ಲಿ 25 ಪಂದ್ಯಗಳನ್ನು ಆಡಿದ್ದು, ಭಾರತ ಗರಿಷ್ಠ 22 ಪಂದ್ಯಗಳನ್ನು ಗೆದ್ದಿದೆ. ಬಾಂಗ್ಲಾದೇಶ 3 ಪಂದ್ಯಗಳನ್ನು ಜಯಿಸಿದೆ.

ಸಂಭಾವ್ಯ ತಂಡಗಳು

ಭಾರತ: ಸ್ಮೃತಿ ಮಂಧಾನ, ಶಫಾಲಿ ವರ್ಮಾ, ಗುಣಲನ್ ಕಮಲಿನಿ, ಹರ್ಮನ್ಪ್ರೀತ್ ಕೌರ್ (ನಾಯಕಿ), ಭಾರತಿ ಫುಲ್ಮಾಲಿ, ರಿಚಾ ಘೋಷ್ (ವಿ.ಕೀ.), ದೀಪ್ತಿ ಶರ್ಮಾ, ಶ್ರೀ ಚರಣಿ, ಶ್ರೇಯಾಂಕ ಪಾಟೀಲ್, ಕ್ರಾಂತಿ ಗೌಡ್, ನಂದನಿ ಶರ್ಮಾ.

ಬಾಂಗ್ಲಾದೇಶ: ದಿಲಾರಾ ಅಕ್ಟರ್, ಜುವೈರಿಯಾ ಫೆರ್ಡೌಸ್ (ಡಬ್ಲ್ಯುಕೆ), ಸೋಭಾನಾ ಮೊಸ್ತರಿ, ನಿಗರ್ ಸುಲ್ತಾನಾ (ಸಿ), ಶರ್ಮಿನ್ ಅಖ್ತರ್, ಶೋರ್ನಾ ಅಕ್ಟರ್, ಫಾಹಿಮಾ ಖಾತುನ್, ನಹಿದಾ ಅಕ್ಟರ್, ರಬೇಯಾ ಖಾನ್, ಸುಲ್ತಾನ ಖಾತುನ್, ಮರುಫಾ ಅಕ್ತರ್.