ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಮಹಿಳಾ ಟಿ20 ವಿಶ್ವಕಪ್‌ ಫೈನಲ್‌ ಪ್ರವೇಶಿಸಿದ ಆಸ್ಟ್ರೇಲಿಯಾ

Women’s T20 World Cup 2026: ಸಣ್ಣ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ ತಂಡ ಬೆತ್‌ ಮೂನಿ ಅವರ ಅಜೇಯ ಅರ್ಧಶತಕದ ನೆರವಿನಿಂದ 13 ಓವರ್‌ಗಳಲ್ಲಿ 2 ವಿಕೆಟ್‌ಗೆ 127 ರನ್‌ ಗಳಿಸಿ ಸುಲಭ ಗೆಲುವು ತನ್ನದಾಗಿಸಿಕೊಂಡಿತು. ಬೆತ್‌ ಮೂನಿ 36 ಎಸೆತಗಳಿಂದ ಅಜೇಯ 61 ರನ್‌ ಬಾರಿಸಿದರು. ಇವರಿಗೆ ಉತ್ತಮ ಸಾಥ್‌ ನೀಡಿದ ಆಶ್ಲೀ ಗಾರ್ಡ್ನರ್ 35 ರನ್‌ ಬಾರಿಸಿ ಅಜೇಯರಾಗಿ ಉಳಿದರು. ಅನುಭವಿ ಆಟಗಾರ್ತಿ ಎಲ್ಲಿಸ್‌ ಪೆರ್ರಿ 2 ರನ್‌ ಗಳಿಸಿ ರಿಟೈರ್ಡ್ ಹರ್ಟ್‌ ಆದರು.

Australia

ಲಂಡನ್‌, ಜು.1: ಮಂಗಳವಾರ ರಾತ್ರಿ ಓವಲ್‌ನಲ್ಲಿ ನಡೆದ ಮೊದಲ ಸೆಮಿಫೈನಲ್‌ನಲ್ಲಿ ಎಂಟು ವಿಕೆಟ್‌ಗಳಿಂದ ಜಯಗಳಿಸುವ ಮೂಲಕ ಆಸ್ಟ್ರೇಲಿಯಾ ತಂಡ ವೆಸ್ಟ್‌ ಇಂಡೀಸ್‌ ತಂಡವನ್ನು 8 ವಿಕೆಟ್‌ ಅಂತರದಿಂದ ಮಣಿಸಿ ಟಿ20 ಮಹಿಳಾ ವಿಶ್ವಕಪ್‌(Women’s T20 World Cup 2026)ನ ಫೈನಲ್‌ಗೆ ಪ್ರವೇಶಿಸಿತು. ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಸೆಮಿಫೈನಲ್ ವಿಜೇತ ತಂಡವನ್ನು ಭಾನುವಾರ ಲಾರ್ಡ್ಸ್‌ನಲ್ಲಿ ಎದುರಿಸಲಿದೆ. 10 ನೇ ಆವೃತ್ತಿಯ ಪಂದ್ಯಾವಳಿಯಲ್ಲಿ ಆಸೀಸ್‌ ತಂಡದ ಎಂಟನೇ ಫೈನಲ್ ಇದಾಗಿದೆ.

ಸೋಫಿ ಮೊಲಿನೆಕ್ಸ್ ಅವರ ಮಹಿಳಾ ತಂಡವು ಗುಂಪು ಹಂತದಲ್ಲಿ ಅಜೇಯವಾಗಿ ಸೆಮಿಫೈನಲ್‌ಗೆ ಲಗ್ಗೆಯಿಟ್ಟಿತ್ತು. ಸೆಮಿ ಪಂದ್ಯದಲ್ಲಿಯೂ ಅಧಿಕಾರಯುತ ಗೆಲವು ಸಾಧಿಸಿ ಬೀಗಿತು. ಪಂದ್ಯಾವಳಿಯ ಎರಡು ಬಲಿಷ್ಠ ತಂಡಗಳಾದ ಭಾರತ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ಅದ್ಭುತ ಗೆಲುವು ಸಾಧಿಸಿದ್ದರು.



ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ವೆಸ್ಟ್‌ ಇಂಡೀಸ್‌ ತಂಡ ನಾಯಕಿ ಹೀಲಿ ಮ್ಯಾಥ್ಯೂಸ್‌(30) ಮತ್ತು ಡಿಯಾಂಡ್ರಾ ಡಾಟಿನ್(26*) ಸಣ್ಣ ಬ್ಯಾಟಿಂಗ್‌ ಹೋರಾಟದ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 125 ರನ್‌ ಗಳಿಸಿತು. ಆಸೀಸ್‌ ಪರ ಉತ್ತಮ ಬೌಲಿಂಗ್‌ ದಾಳಿ ಸಂಘಟಿಸಿದ ನಾಯಕಿ ಸೋಫಿ ಮೊಲಿನೆಕ್ಸ್ ಮತ್ತು ಆಶ್ಲೀ ಗಾರ್ಡ್ನರ್ ತಲಾ 2 ವಿಕೆಟ್‌ ಕಿತ್ತರು.

ಎಂಬಾಪೆ ದಾಖಲೆಯ ಗೋಲು: ಸ್ವೀಡನ್ ವಿರುದ್ಧ ಫ್ರಾನ್ಸ್‌ಗೆ ಗೆಲುವು

ಸಣ್ಣ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ ತಂಡ ಬೆತ್‌ ಮೂನಿ ಅವರ ಅಜೇಯ ಅರ್ಧಶತಕದ ನೆರವಿನಿಂದ 13 ಓವರ್‌ಗಳಲ್ಲಿ 2 ವಿಕೆಟ್‌ಗೆ 127 ರನ್‌ ಗಳಿಸಿ ಸುಲಭ ಗೆಲುವು ತನ್ನದಾಗಿಸಿಕೊಂಡಿತು. ಬೆತ್‌ ಮೂನಿ 36 ಎಸೆತಗಳಿಂದ ಅಜೇಯ 61 ರನ್‌ ಬಾರಿಸಿದರು. ಇವರಿಗೆ ಉತ್ತಮ ಸಾಥ್‌ ನೀಡಿದ ಆಶ್ಲೀ ಗಾರ್ಡ್ನರ್ 35 ರನ್‌ ಬಾರಿಸಿ ಅಜೇಯರಾಗಿ ಉಳಿದರು. ಅನುಭವಿ ಆಟಗಾರ್ತಿ ಎಲ್ಲಿಸ್‌ ಪೆರ್ರಿ 2 ರನ್‌ ಗಳಿಸಿ ರಿಟೈರ್ಡ್ ಹರ್ಟ್‌ ಆದರು.