ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಇಂಡೋ-ಪಾಕ್ ಮಹಿಳಾ​ ಟಿ20 ಕದನ; ವಿಜಯ ಪತಾಕೆ ಹಾರಿಸಲಿ ಹರ್ಮನ್‌ ಪಡೆ

INDW vs PAKW: ಆಪರೇಷನ್ ಸಿಂಧೂರದ ಬಳಿಕ ಉಭಯ ದೇಶಗಳ ಮಧ್ಯೆ ಉದ್ವಿಗ್ನ ಪರಿಸ್ಥಿತಿ ಈಗಲೂ ಇದೆ. ಹೀಗಾಗಿ ಅಕ್ಷರಶಃ ಇದೊಂದು ಕದನವೇ ಆಗಿರುತ್ತದೆ. ಗೆದ್ದರೆ ಯುದ್ಧವನ್ನೇ ಜಯಿಸಿದ ಮಹಾಸಂಭ್ರಮ. ಹರ್ಮನ್‌ಪ್ರೀತ್‌​ ಪಡೆಯ ಮೇಲಿನ ನಿರೀಕ್ಷೆ ದೊಡ್ಡ ಮಟ್ಟದಲ್ಲೇ ಇದೆ.

IND W vs PAK W Match

ಲಂಡನ್‌, ಜೂ.13: ಒಂದು ಕಾಲದಲ್ಲಿ ಭಾರತ(IND vs PAK) ಮತ್ತು ಪಾಕಿಸ್ತಾನ ನಡುವಿನ ಪುರುಷರ ಕ್ರಿಕೆಟ್‌ ಪಂದ್ಯ ಎಂದರೆ, ಅಕ್ಷರಶಃ ಇದೊಂದು ಕದನವೇ ಆಗಿರುತ್ತಿತ್ತು. ಗೆದ್ದರೆ ಯುದ್ಧವನ್ನೇ ಜಯಿಸಿದ ಮಹಾಸಂಭ್ರಮ. ಇದೀಗ ಮಹಿಳಾ ಕ್ರಿಕೆಟ್‌ ಟೂರ್ನಿಯಲ್ಲಿಯೂ ಇತ್ತಡಂಗಳ ನಡುವಣ ಮುಖಾಮುಖಿಯೂ ಇದೇ ಜೋಶ್‌ನಿಂದ ಕೂಡಿದೆ. ಭಾನುವಾರ ನಡೆಯುವ ಮಹಿಳಾ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಇತ್ತಂಡಗಳ ಮಧ್ಯೆ ಪಂದ್ಯ ನಡೆಯಲಿದೆ. ಅಭಿಮಾನಿಗಳ ಕಾತರ, ಕೌತುಕಗಳೆಲ್ಲ ಸೀಮೆಯನ್ನು ಮೀರಿವೆ.

ಎಡ್ಜ್‌ಬಾಸ್ಟನ್ ಕ್ರಿಕೆಟ್ ಮೈದಾನ ಇರುವ ಬರ್ಮಿಂಗ್ಹ್ಯಾಮ್‌ನಲ್ಲಿ ಭಾರತ ಮತ್ತು ಪಾಕಿಸ್ತಾನದ ಅಪಾರ ಜನ ಸಮುದಾಯ ಹೊಂದಿರುವ ಕಾರಣ ಈ ಪಂದ್ಯ ದೊಡ ಪ್ರೇಕ್ಷಕರು ಹಾಜರಾಗಬಹುದು. ಉಭಯ ತಂಡಗಳಿಗೂ ಇದು ಟೂರ್ನಿಯ ಆರಂಭಿಕ ಪಂದ್ಯವಾಗಿರುವ ಕಾರಣ ಗೆಲುವಿನ ಶುಭಾರಂಭ ಕಾಣಲು ತೀವ್ರ ಪೈಪೋಟಿ ನಡೆಸುವ ಸಾಧ್ಯತೆಯಿದೆ. ಗೆಲುವಿನ ರೂವಾರಿಗಳು ಕ್ರಿಕೆಟಿನ ದೊಡ್ಡ ಹೀರೋಗಳಾಗಿ ಮೆರೆಯುತ್ತಾರೆ. ಹಾಗೆಯೇ ಕೆಲವು ವಿಲನ್‌ಗಳೂ ಹುಟ್ಟಿ ಕೊಳ್ಳುತ್ತಾರೆ.

ಭಾರತ ವಿರುದ್ಧದ ಮಹಿಳಾ ಟಿ20 ವಿಶ್ವಕಪ್ ಪಂದ್ಯಕ್ಕೆ ಹೆಚ್ಚಿನ ತಯಾರಿ ಅಗತ್ಯವಿಲ್ಲ; ಪಾಕ್‌ ನಾಯಕಿ

ಪಹಲ್ಗಾಮ್‌ ದಾಳಿ ಮತ್ತು ಆಪರೇಷನ್ ಸಿಂಧೂರದ ಬಳಿಕ ಉಭಯ ದೇಶಗಳ ಮಧ್ಯೆ ಈಗಲೂ ಉದ್ವಿಗ್ನ ಪರಿಸ್ಥಿತಿ ಇದೆ. ಹೀಗಾಗಿ ಅಕ್ಷರಶಃ ಇದೊಂದು ಕದನವೇ ಆಗಿರುತ್ತದೆ. ಗೆದ್ದರೆ ಯುದ್ಧವನ್ನೇ ಜಯಿಸಿದ ಮಹಾಸಂಭ್ರಮ. ಹರ್ಮನ್‌ಪ್ರೀತ್‌​ ಪಡೆಯ ಮೇಲಿನ ನಿರೀಕ್ಷೆ ದೊಡ್ಡ ಮಟ್ಟದಲ್ಲೇ ಇದೆ.

2009 ರಿಂದ ಭಾರತ ಮಹಿಳಾ ಟಿ20ಐಗಳಲ್ಲಿ ಪಾಕಿಸ್ತಾನದ ಮೇಲೆ ಪ್ರಾಬಲ್ಯ ಸಾಧಿಸಿದೆ, 2009 ರಿಂದ ಎರಡೂ ತಂಡಗಳ ನಡುವೆ ನಡೆದ 16 ಪಂದ್ಯಗಳಲ್ಲಿ 13 ಪಂದ್ಯಗಳನ್ನು ಗೆದ್ದಿದೆ. ಮಹಿಳಾ ಟಿ20 ವಿಶ್ವಕಪ್‌ಗಳಲ್ಲಿ, ಭಾರತವು 6-2 ಮುನ್ನಡೆಯನ್ನು ಹೊಂದಿದೆ.



ಪಾಕಿಸ್ತಾನ ತಂಡ ಅತ್ಯುತ್ತಮ ಫಾರ್ಮ್‌ನಲ್ಲಿದ್ದು, ಇತ್ತೀಚೆಗೆ ಜಿಂಬಾಬ್ವೆಯನ್ನು ತವರಿನಲ್ಲಿ 3-0 ಅಂತರದಿಂದ ಗೆದ್ದುಕೊಂಡಿತು. ಫಾತಿಮಾ ಸನಾ ಮಹಿಳಾ ಟಿ20ಐಗಳಲ್ಲಿ ಕೇವಲ 15 ಎಸೆತಗಳಲ್ಲಿ ಅತಿ ವೇಗದ ಅರ್ಧಶತಕ ಬಾರಿಸಿದ್ದರು. ಫಾತಿಮಾ ಚೆಂಡನ್ನು ಎರಡೂ ಕಡೆ ಸ್ವಿಂಗ್ ಮಾಡುವ ಸಾಮರ್ಥ್ಯವಿರುವ ಪರಿಣಾಮಕಾರಿ ಬೌಲರ್ ಕೂಡ ಆಗಿದ್ದಾರೆ.

ಪಿಚ್ ರಿಪೋರ್ಟ್‌

ಎಡ್ಜ್‌ಬಾಸ್ಟನ್ ಪಿಚ್ ಬ್ಯಾಟ್ ಮತ್ತು ಚೆಂಡಿನ ನಡುವೆ ಸಮತೋಲಿತ ಸ್ಪರ್ಧೆಯನ್ನು ನೀಡುವ ನಿರೀಕ್ಷೆಯಿದೆ. ಕ್ರೀಸ್‌ನಲ್ಲಿ ಸಮಯ ಕಳೆಯುವ ಬ್ಯಾಟ್ಸ್‌ಮನ್‌ಗಳು ಮುಕ್ತವಾಗಿ ರನ್ ಗಳಿಸಬಹುದು, ಆದಾಗ್ಯೂ ಪಂದ್ಯ ಮುಂದುವರೆದಂತೆ ಮೇಲ್ಮೈ ನಿಧಾನವಾಗಲಿದೆ. ಬೌಲರ್‌ಗಳಿಗೆ, ಪಿಚ್ ಆಟದ ಉದ್ದಕ್ಕೂ ಸಹಾಯವನ್ನು ನೀಡುತ್ತದೆ. ಸ್ಪಿನ್ನರ್‌ಗಳು ಪರಿಣಾಮಕಾರಿಯಾಗಬಹುದು.

ಭಾರತ vs ಪಾಕ್‌ ಮಹಿಳಾ ಟಿ20 ವಿಶ್ವಕಪ್‌ ಕೌತುಕ; ಇತ್ತಂಡಗಳ ಸಾಧನೆ ಹೇಗಿದೆ?

ಸಂಭಾವ್ಯ ಆಡುವ ಬಳಗ

ಭಾರತ: ಸ್ಮೃತಿ ಮಂಧಾನ, ಶಫಾಲಿ ವರ್ಮಾ, ಜೆಮಿಮಾ ರಾಡ್ರಿಗಸ್, ಹರ್ಮನ್‌ಪ್ರೀತ್ ಕೌರ್ (ನಾಯಕಿ), ರಿಚಾ ಘೋಷ್, ದೀಪ್ತಿ ಶರ್ಮಾ, ಅರುಂಧತಿ ರೆಡ್ಡಿ, ರೇಣುಕಾ ಸಿಂಗ್ ಠಾಕೂರ್, ಕ್ರಾಂತಿ ಗೌಡ್, ನಂದನಿ ಶರ್ಮಾ, ರಾಧಾ ಯಾದವ್.

ಪಾಕಿಸ್ತಾನ: ಮುನೀಬಾ ಅಲಿ, ಗುಲ್ ಫಿರೋಜಾ, ಆಯೇಶಾ ಜಾಫರ್, ಅಲಿಯಾ ರಿಯಾಜ್, ಫಾತಿಮಾ ಸನಾ (ನಾಯಕ), ಸೈರಾ ಜಬೀನ್, ನತಾಲಿಯಾ ಪರ್ವೈಜ್, ತುಬಾ ಹಸನ್, ಸಾದಿಯಾ ಇಕ್ಬಾಲ್, ಡಯಾನಾ ಬೇಗ್, ನಶ್ರಾ ಸಂಧು.