ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಡಬ್ಲ್ಯುಪಿಎಲ್‌ ಆಟಗಾರ್ತಿಯರ ಹರಾಜು ಪಟ್ಟಿ ಬಿಡುಗಡೆ; ಮಾರ್ಕ್ಯೂ ಸೆಟ್‌ನಲ್ಲಿ ದೀಪ್ತಿ ಶರ್ಮಾ, ಮೆಗ್ ಲ್ಯಾನಿಂಗ್

WPL 2026 auction: ಹತ್ತೊಂಬತ್ತು ಆಟಗಾರ್ತಿಯರು ಗರಿಷ್ಠ ಮೂಲ ಬೆಲೆ 50 ಲಕ್ಷ ರೂ.ಗಳ ಪಟ್ಟಿಯಲ್ಲಿದ್ದಾರೆ. ಉಳಿದಂತೆ 11 ಆಟಗಾರ್ತಿಯರು 40 ಲಕ್ಷ ರೂ.ಗಳ ವಿಭಾಗದಲ್ಲಿ ಮತ್ತು 88 ಆಟಗಾರ್ತಿಯರು 30 ಲಕ್ಷ ರೂ.ಗಳ ಗುಂಪಿನಲ್ಲಿ ಸ್ಥಾನ ಪಡೆದಿದ್ದಾರೆ.

ಡಬ್ಲ್ಯುಪಿಎಲ್‌ ಹರಾಜು

ನವದೆಹಲಿ, ನ.21: ಬಹುನಿರೀಕ್ಷಿತ ನಾಲ್ಕನೇ ಆವೃತ್ತಿಯ ಮಹಿಳಾ ಪ್ರೀಮಿಯರ್‌ ಲೀಗ್‌(WPL 2026) ಹರಾಜು ಪಟ್ಟಿ(WPL 2026 auction) ಹೊರಬಿದ್ದಿದ್ದು, 73 ಸ್ಥಾನಗಳಿಗೆ 277 ಆಟಗಾರ್ತಿಯರು ಸ್ಪರ್ಧಿಸುತ್ತಿದ್ದು, ನವೆಂಬರ್ 27 ರಂದು ನವದೆಹಲಿಯಲ್ಲಿ ಹರಾಜು ನಡೆಯಲಿದೆ. ಹರಾಜು ಪಟ್ಟಿಯಲ್ಲಿ 194 ಭಾರತೀಯ ಆಟಗಾರ್ತಿಯರು ಸೇರಿದ್ದಾರೆ. ಇದರಲ್ಲಿ 52 ಕ್ಯಾಪ್ಡ್‌ ಮತ್ತು 142 ಅನ್‌ಕ್ಯಾಪ್ಡ್ ಆಟಗಾರ್ತಿಯರಿದ್ದಾರೆ. 66 ವಿದೇಶಿ ಆಟಗಾರ್ತಿಯರ ಪೈಕಿ 17 ಅನ್‌ಕ್ಯಾಪ್ಡ್ ಆಟಗಾರ್ತಿಯರಿದ್ದಾರೆ.

ಹತ್ತೊಂಬತ್ತು ಆಟಗಾರ್ತಿಯರು ಗರಿಷ್ಠ ಮೂಲ ಬೆಲೆ 50 ಲಕ್ಷ ರೂ.ಗಳ ಪಟ್ಟಿಯಲ್ಲಿದ್ದಾರೆ. ಉಳಿದಂತೆ 11 ಆಟಗಾರ್ತಿಯರು 40 ಲಕ್ಷ ರೂ.ಗಳ ವಿಭಾಗದಲ್ಲಿ ಮತ್ತು 88 ಆಟಗಾರ್ತಿಯರು 30 ಲಕ್ಷ ರೂ.ಗಳ ಗುಂಪಿನಲ್ಲಿ ಸ್ಥಾನ ಪಡೆದಿದ್ದಾರೆ.

ಭಾರತೀಯ ಕಾಲಮಾನ ಮಧ್ಯಾಹ್ನ 3:30 ಕ್ಕೆ ಪ್ರಾರಂಭವಾಗಲಿರುವ ಹರಾಜು, ವಿಶ್ವದ ಎಂಟು ಅಗ್ರ ಮಹಿಳಾ ಕ್ರಿಕೆಟಿಗರನ್ನು ಒಳಗೊಂಡ ಉನ್ನತ ಮಟ್ಟದ ಗುಂಪಿನೊಂದಿಗೆ ಪ್ರಾರಂಭವಾಗಲಿದೆ. ಈ ಪಟ್ಟಿಯಲ್ಲಿ ಭಾರತದ ದೀಪ್ತಿ ಶರ್ಮಾ ಮತ್ತು ರೇಣುಕಾ ಸಿಂಗ್, ನ್ಯೂಜಿಲೆಂಡ್ ತಾರೆಯರಾದ ಸೋಫಿ ಡಿವೈನ್ ಮತ್ತು ಅಮೆಲಿಯಾ ಕೆರ್, ಇಂಗ್ಲೆಂಡ್‌ನ ಪ್ರಮುಖ ಸ್ಪಿನ್ನರ್ ಸೋಫಿ ಎಕ್ಲೆಸ್ಟೋನ್, ಆಸ್ಟ್ರೇಲಿಯಾದ ಅನುಭವಿ ಜೋಡಿ ಅಲಿಸಾ ಹೀಲಿ ಮತ್ತು ಮೆಗ್ ಲ್ಯಾನಿಂಗ್, ದಕ್ಷಿಣ ಆಫ್ರಿಕಾದ ಆರಂಭಿಕ ಆಟಗಾರ್ತಿ ಲಾರಾ ವೋಲ್ವಾರ್ಡ್ಟ್ ಸೇರಿದ್ದಾರೆ. ಈ ಪೈಕಿ ದೀಪ್ತಿ ಶರ್ಮಾ, ರೇಣುಕಾ ಸಿಂಗ್, ಅಮೆಲಿಯಾ ಕೆರ್ ಮತ್ತು ಲಾರಾ ವೋಲ್ವಾರ್ಡ್ಟ್ ಅವರಿಗೆ ಭಾರೀ ಮೊತ್ತ ಸಿಗುವ ನಿರೀಕ್ಷೆಯಿದೆ.

ಇದನ್ನೂ ಓದಿ WPL 2026: ಜ. 7 ರಿಂದ ಫೆ. 3 ರವರೆಗೆ ಮುಂಬೈ, ಬರೋಡಾದಲ್ಲಿ ಡಬ್ಲ್ಯುಪಿಎಲ್‌ ಸಾಧ್ಯತೆ

ಯುಪಿ ವಾರಿಯರ್ಸ್‌ ಅತ್ಯಧಿಕ 14.5 ಕೋಟಿ ಮೊತ್ತದೊಂದಿಗೆ ಹರಾಜು ಕಣಕ್ಕಿಳಿಯಲಿದೆ. ಆ ಬಳಿಕ ಗುಜರಾತ್‌ ಜೈಂಟ್ಸ್‌ ಬಳಿ 9 ಕೋಟಿ, ಆರ್‌ಸಿಬಿ ಬಳಿ 6 ಕೋಟಿ ಮೊತ್ತವಿದೆ. 5 ಆಟಗಾರ್ತಿಯನ್ನು ಉಳಿಸಿಕೊಂಡ ಡೆಲ್ಲಿ ಕ್ಯಾಪಿಟಲ್ಸ್‌ ಬಳಿ ಅತಿ ಕಡಿಮೆ ಮೊತ್ತ ಉಳಿದಿದೆ. ಅಲ್ಲದೆ ಈ ತಂಡಕ್ಕೆ ರೈಟ್ ಟು ಮ್ಯಾಚ್ (RTM) ಆಯ್ಕೆ ಲಭ್ಯವಿರುದಿಲ್ಲ.

ಉಳಿಸಿಕೊಂಡಿರುವ ಆಟಗಾರ್ತಿಯರ ಪಟ್ಟಿ

ಮುಂಬೈ ಇಂಡಿಯನ್ಸ್: ನಾಟ್-ಸ್ಕಿವರ್ ಬ್ರಂಟ್ (3.5 ಕೋಟಿ), ಹರ್ಮನ್‌ಪ್ರೀತ್ ಕೌರ್ (2.5 ಕೋಟಿ), ಹೇಲಿ ಮ್ಯಾಥ್ಯೂಸ್ (1.75 ಕೋಟಿ), ಅಮನ್‌ಜೋತ್ ಕೌರ್ (1 ಕೋಟಿ), ಜಿ ಕಮಲಿನಿ (50 ಲಕ್ಷ).

ರಾಯಲ್ ಚಾಲೆಂಜರ್ಸ್ ಬೆಂಗಳೂರು: ಸ್ಮೃತಿ ಮಂಧಾನ (3.5 ಕೋಟಿ), ರಿಚಾ ಘೋಷ್ (2.75 ಕೋಟಿ), ಎಲ್ಲಿಸ್ ಪೆರ್ರಿ (2 ಕೋಟಿ), ಶ್ರೇಯಾಂಕ ಪಾಟೀಲ್ (60 ಲಕ್ಷ).

ಗುಜರಾತ್ ಜೈಂಟ್ಸ್: ಆಶ್ಲೀ ಗಾರ್ಡ್ನರ್ (3.5 ಕೋಟಿ), ಬೆತ್ ಮೂನಿ (2.5 ಕೋಟಿ).

ಯುಪಿ ವಾರಿಯರ್ಜ್: ಶ್ವೇತಾ ಸೆಹ್ರಾವತ್ (50 ಲಕ್ಷ).

ಡೆಲ್ಲಿ ಕ್ಯಾಪಿಟಲ್ಸ್: ಜೆಮಿಮಾ ರೊಡ್ರಿಗಸ್ (2.2 ಕೋಟಿ), ಶಫಾಲಿ ವರ್ಮಾ (2.2 ಕೋಟಿ), ಅನ್ನಾಬೆಲ್ ಸದರ್ಲ್ಯಾಂಡ್ (2.2 ಕೋಟಿ), ಮರಿಜಾನ್ನೆ ಕಪ್ (2.2 ಕೋಟಿ), ನಿಕಿ ಪ್ರಸಾದ್ (50 ಲಕ್ಷ).