ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

WTC final: ಟೆಸ್ಟ್‌ ಫೈನಲ್‌ ಪಂದ್ಯ ಡ್ರಾ-ಟೈ ಆದರೆ ವಿಜೇತರ ನಿರ್ಧಾರ ಹೇಗೆ?

ದಕ್ಷಿಣ ಆಫ್ರಿಕಾಕ್ಕೆ ಇದು ಚೊಚ್ಚಲ ಟೆಸ್ಟ್‌ ವಿಶ್ವಕಪ್‌ ಫೈನಲ್‌. ಚೋಕರ್ಸ್‌ ಎಂಬ ಹಣ್ಣೆಪಟ್ಟಿ ಹೊಂದಿರುವ ದಕ್ಷಿಣ ಆಫ್ರಿಕಾ 1998ರಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿಯ ಮೊದಲ ಆವೃತ್ತಿಯಲ್ಲಿ ಯಶಸ್ಸು ಪಡೆದಿದ್ದು ಬಿಟ್ಟರೆ ಇದುವರೆಗೆ ಈ ತಂಡಕ್ಕೆ ವಿಶ್ವಕಪ್‌ ಪ್ರಶಸ್ತಿ ಗಗನಕುಸುಮವಾಗಿದೆ.

ಲಂಡನ್‌: ಇಂದು ಆರಂಭವಾಗುವ ಐಸಿಸಿ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌(WTC final) ಪಂದ್ಯಕ್ಕೆ ಕ್ಷಣಗಣನೆ ಶುರುವಾಗಿದೆ. ಲಂಡನ್‌ನ ಐತಿಹಾಸಿಕ ಲಾರ್ಡ್ಸ್‌(Lord's) ಮೈದಾನದಲ್ಲಿ ಆಸ್ಟ್ರೇಲಿಯ ಮತ್ತು ದಕ್ಷಿಣ ಆಫ್ರಿಕಾ ತಂಡಗಳು(Australia vs South Africa) ಪ್ರಶಸ್ತಿಗಾಗಿ ಸೆಣಸಾಡಲು ಸಜ್ಜಾಗಿ ನಿಂತಿದೆ. ವಿಶ್ವಕಪ್‌ ಟೂರ್ನಿಯಲ್ಲಿ ಚೋಕರ್ಸ್‌ ಎನಿಸಿಕೊಂಡಿರುವ ದಕ್ಷಿಣ ಆಫ್ರಿಕಾಕ್ಕೆ ಇದು ಮೊದಲ ಫೈನಲ್‌. ಹೀಗಾಗಿ ಈ ಬಾರಿಯಾದರೂ ತಂಡದ ಫೈನಲ್‌ ಲಕ್‌ ಹೇಗಿದೆ ಎಂಬುದು ಇಡೀ ಕ್ರಿಕೆಟ್‌ ಜಗತ್ತಿನ ಕುತೂಹಲ. ಪಂದ್ಯ ಡ್ರಾ, ಮಳೆಯಿಂದ ರದ್ದುಗೊಂಡರೆ ವಿಜೇತರ ನಿರ್ಣಾಯ ಹೇಗೆ ಎಂಬ ಅಭಿಮಾನಿಗಳ ಪ್ರಶ್ನೆಗೆ ಉತ್ತರ ಇಲ್ಲಿದೆ.

ಜಂಟಿ ಚಾಂಪಿಯನ್‌

ಏಕದಿನ, ಟಿ20 ವಿಶ್ವಕಪ್‌ನಂತೆ ಫೈನಲ್‌ ಪಂದ್ಯ ರದ್ದಾದರೆ ಅಥವಾ ಪೂರ್ಣ ಫಲಿತಾಂಶ ಕಾಣದೇ ಇದ್ದರೆ ಅಗ್ರಸ್ಥಾನ ಪಡೆದ ತಂಡವನ್ನು ಚಾಂಪಿಯನ್‌ ಎಂದು ಘೋಷಿಸಲಾಗುತ್ತದೆ. ಆದರೆ ಟೆಸ್ಟ್‌ ವಿಶ್ವಕಪ್‌ ಫೈನಲ್‌ಗೆ ಈ ನಿಯಮ ಅನ್ವಯವಾಗುದಿಲ್ಲ. ಇನಿಂಗ್ಸ್‌ ಮುನ್ನಡೆಯ ಆಧಾರದಲ್ಲಿ ಅಥವಾ ಪಂದ್ರ ಡ್ರಾ, ಟೈಗೊಂಡರೆ ಟ್ರೋಪಿಯನ್ನು ಹಂಚಿ ಉಭಯ ತಂಡಗಳನ್ನು ಜಂಟಿ ಚಾಂಪಿಯನ್‌ ಎಂದು ಘೋಷಿಸಲಾಗುತ್ತದೆ. ಪಂದ್ಯದಲ್ಲಿ ಗೆದ್ದರೆ ಮಾತ್ರ ಟ್ರೋಫಿ ನೀಡಲಾಗುವುದು. ಫಲಿತಾಂಶ ನಿರ್ಧಾರದ ಒಂದೇ ಕಾರಣಕ್ಕೆ ಮೀಸಲು ದಿನಕ್ಕೆ ಆಟ ವಿಸ್ತರಣೆಯೂ ಆಗುದಿಲ್ಲ. 5ನೇ ದಿನ ಸ್ಪಷ್ಟ ಫಲಿತಾಂಶ ಬಾರದೆ ಇದ್ದರೆ ಪಂದ್ಯವನ್ನು ಡ್ರಾ ಎಂದು ಘೋಷಿಸಲ್ಪಡುತ್ತದೆ. ಮಳೆಯಿಂದ ಒಂದು ದಿನದ ಆಟ ನಷ್ಟವಾದರೆ ಮಾತ್ರ ಮೀಸಲು ದಿನಕ್ಕೆ ಪಂದ್ಯ ವಿಸ್ತರಿಸಲ್ಪಡುತ್ತದೆ.

ತೆಂಬಾ ಬವುಮಾ ನಾಯಕತ್ವದ ದಕ್ಷಿಣ ಆಫ್ರಿಕಾ ತಂಡದ ಪ್ರದರ್ಶನ ನೋಡುವಾಗ ಈ ಬಾರಿ ಚೊಚ್ಚಲ ವಿಶ್ವಕಪ್‌ ಮುಡಿಗೇರಿಸಿಕೊಳ್ಳುವ ಸಾಧ್ಯತೆಯೊಂದು ಕಂಡು ಬಂದಿದೆ. ಯಾರು ನೀರಿಕ್ಷೆಯೂ ಮಾಡದ ರೀತಿಯಲ್ಲಿ ಕೊನೆಯ ಏಳು ಟೆಸ್ಟ್‌ಗಳನ್ನು ಗೆದ್ದು ಫೈನಲ್‌ಗೆ ಮೊದಲ ತಂಡವಾಗಿ ಅರ್ಹತೆ ಪಡೆದಿತ್ತು. ಇತರೆಲ್ಲ ತಂಡಗಳಿಗಿಂತ ಹೆಚ್ಚು 30 ಆಟಗಾರರನ್ನು ಪರೀಕ್ಷಿಸಿದ್ದು ಅಮೋಘ ಸಾಹಸಗಳಾಗಿವೆ. ಹೀಗಾಗಿ ಐಸಿಸಿ ಟ್ರೋಫಿಯ ಬರ ಎನ್ನುವುದು ಈ ಪಂದ್ಯದ ಮೇಲೆ ಯಾವುದೇ ಪರಿಣಾಮ ಬೀರದು ಎಂಬುದು ನಾಯಕ ತೆಂಬಾ ಬವುಮಾ ಅವರ ದೃಢ ನಂಬಿಕೆ. ಆದರೆ ಅದೃಷ್ಟ ಕೂಡ ಕೈ ಹಿಡಿಯಬೇಕು.

ಆಡುವ ಬಳಗ

ಆಸ್ಟ್ರೇಲಿಯಾ: ಉಸ್ಮಾನ್‌ ಖ್ವಾಜಾ, ಮಾರ್ನಸ್‌ ಲಬುಶೇನ್‌, ಕ್ಯಾಮರಾನ್‌ ಗ್ರೀನ್‌, ಸ್ಟೀವನ್‌ ಸ್ಮಿತ್‌, ಟ್ರ್ಯಾವಿಸ್‌ ಹೆಡ್‌, ಬ್ಯೂ ವೆಬ್‌ಸ್ಟರ್‌, ಅಲೆಕ್ಸ್‌ ಕ್ಯಾರಿ, ಪ್ಯಾಟ್‌ ಕಮಿನ್ಸ್‌ (ನಾಯಕ), ಮಿಚೆಲ್‌ ಸ್ಟಾರ್ಕ್‌, ನಥನ್‌ ಲಿಯಾನ್‌, ಜೋಶ್‌ ಹೇಝಲ್‌ವುಡ್‌.

ದಕ್ಷಿಣ ಆಫ್ರಿಕಾ: ಟೆಂಬ ಬವುಮ (ನಾಯಕ), ಐಡನ್‌ ಮಾರ್ಕ್‌ರಮ್‌, ರಿಯಾನ್‌ ರಿಕಲ್ಟನ್‌, ವಿಯಾನ್‌ ಮುಲ್ಡರ್‌, ಟ್ರಿಸ್ಟನ್‌ ಸ್ಟಬ್ಸ್, ಡೇವಿಡ್‌ ಬೇಡಿಂಗ್‌ಹ್ಯಾಮ್‌, ಕೈಲ್‌ ವೆರೇಯ್ನ, ಮಾರ್ಕೊ ಜಾನ್ಸೆನ್‌, ಕೇಶವ್‌ ಮಹಾರಾಜ್‌, ಲುಂಗಿ ಎನ್‌ಗಿಡಿ, ಕಾಗಿಸೊ ರಬಾಡ