ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Vastu Tips: ಸ್ನಾನಗೃಹದಲ್ಲಿ ಇಡುವ ಈ ವಸ್ತುಗಳು ನಕಾರಾತ್ಮಕ ಶಕ್ತಿ ಹೆಚ್ಚಿಸುತ್ತದೆ ಎಚ್ಚರಿಕೆ!

ವಾಸ್ತು ಶಾಸ್ತ್ರದ ಪ್ರಕಾರ ಸ್ನಾನಗೃಹದಿಂದ ಹೆಚ್ಚು ನಕಾರಾತ್ಮಕ ಶಕ್ತಿ ಉಂಟಾಗುವ ಸಾಧ್ಯತೆ ಇದೆ. ಮುರಿದ ಚಪ್ಪಲಿಗಳು, ಒಡೆದ ಕನ್ನಡಿ, ಖಾಲಿ ಬಕೆಟ್, ನಲ್ಲಿಯಿಂದ ತೊಟ್ಟಿಕ್ಕುವ ನೀರು, ಒದ್ದೆ ಬಟ್ಟೆಗಳು, ಚರಂಡಿಯಲ್ಲಿ ಜಮೆಯಾಗುವ ಕೂದಲು ಹಾಗೂ ಬಾತ್ ರೂಮಿನಲ್ಲಿ ಸಸ್ಯಗಳನ್ನು ಇಡುವುದು ವಾಸ್ತು ದೋಷಕ್ಕೆ ಕಾರಣವಾಗಬಹುದು. ಇಂತಹ ವಸ್ತುಗಳನ್ನು ತಪ್ಪಿಸಿ ಸ್ವಚ್ಛತೆ ಮತ್ತು ಸರಿಯಾದ ವಾಸ್ತು ನಿಯಮಗಳನ್ನು ಪಾಲಿಸಿದರೆ ಮನೆಗೆ ಧನಾತ್ಮಕ ಶಕ್ತಿ ಹೆಚ್ಚುತ್ತದೆ.

ವಾಶ್ ರೂಮ್ ವಾಸ್ತು

ಬೆಂಗಳೂರು: ವಾಸ್ತು ಶಾಸ್ತ್ರದ (Vastu Shastra) ಪ್ರಕಾರ, ಮನೆ ಎನ್ನುವುದು ಕೇವಲ ವಾಸಿಸುವ ಸ್ಥಳವಲ್ಲ; ಅದು ವ್ಯಕ್ತಿಯ ಜೀವನದ ಶಕ್ತಿ ಕೇಂದ್ರವೂ ಹೌದು. ಮನೆಯ ಒಳಗೆ ಹಾಗೂ ಸುತ್ತಮುತ್ತ ಇಡುವ ಪ್ರತಿಯೊಂದು ವಸ್ತುವೂ ಧನಾತ್ಮಕ ಅಥವಾ ನಕಾರಾತ್ಮಕ ಶಕ್ತಿಯನ್ನು ಹೊರಸೂಸುತ್ತದೆ ಎಂಬ ನಂಬಿಕೆ ವಾಸ್ತುವಿನಲ್ಲಿ ಇದೆ. ಅದಕ್ಕಾಗಿ ಮನೆಗೆ ಸಂಬಂಧಿಸಿದಂತೆ ದಿಕ್ಕು, ಸ್ಥಳ ಮತ್ತು ವಸ್ತುಗಳ ಆಯ್ಕೆ ಅತ್ಯಂತ ಮಹತ್ವದ್ದಾಗಿದೆ.

ಮುಖ್ಯ ದ್ವಾರ, ಪೂಜಾ ಕೊಠಡಿ, ಮಲಗುವ ಕೋಣೆ ಮಾತ್ರವಲ್ಲದೆ, ಸ್ನಾನಗೃಹಕ್ಕೂ (Bathroom) ವಿಶೇಷ ವಾಸ್ತು ನಿಯಮಗಳಿವೆ. ಕಾರಣ, ಈ ಸ್ಥಳದಿಂದ ಹೆಚ್ಚು ನಕಾರಾತ್ಮಕ ಶಕ್ತಿ ಉತ್ಪತ್ತಿಯಾಗುವ ಸಾಧ್ಯತೆ ಇದೆ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ.

ಹಾಗಾದರೆ, ವಾಸ್ತು ಸಲಹೆಗಳ ಪ್ರಕಾರ(Vastu Tips) ಬಾತ್ ರೂಮಿನಲ್ಲಿ ಯಾವ ವಸ್ತುಗಳನ್ನು ಇಡಬಾರದು ಎಂಬುದನ್ನು ತಿಳಿದುಕೊಳ್ಳೋಣ.

ಚಪ್ಪಲಿಗಳು

ಬಾತ್ ರೂಮಿನಲ್ಲಿ ಇಡಬಾರದ ವಸ್ತುಗಳ ಪೈಕಿ
ಮುರಿದ ಅಥವಾ ತುಂಡಾದ ಚಪ್ಪಲಿಗಳು ಅಗ್ರ ಸ್ಥಾನದಲ್ಲಿದ್ದು, ಸಾಮಾನ್ಯವಾಗಿ ಸ್ನಾನಗೃಹದಲ್ಲಿ ಚಪ್ಪಲಿಗಳನ್ನು ಬಳಸುವುದು ಸಹಜ. ಆದರೆ ಮುರಿದ ಅಥವಾ ಹಳೆಯ ಚಪ್ಪಲಿಗಳನ್ನು ಅಲ್ಲಿ ಇಡುವುದು ವಾಸ್ತು ಪ್ರಕಾರ ಅಶುಭ. ಇವು ನಕಾರಾತ್ಮಕ ಶಕ್ತಿಯನ್ನು ಆಕರ್ಷಿಸಬಹುದು.

ಒಡೆದ ಕನ್ನಡಿ

ವಾಸ್ತು ಶಾಸ್ತ್ರದಂತೆ, ಬಾತ್ ರೂಮಿನಲ್ಲಿ ಒಡೆದ ಅಥವಾ ಬಿರುಕು ಬಿಟ್ಟ ಕನ್ನಡಿಯನ್ನು ಇಡಬಾರದು. ಇದು ವಾಸ್ತು ದೋಷಕ್ಕೆ ಕಾರಣವಾಗುವ ಜೊತೆಗೆ ಹಣಕಾಸಿನ ಸಮಸ್ಯೆಗಳನ್ನುಂಟುಮಾಡಬಹುದು. ಆದ್ದರಿಂದ ಇಂತಹ ಕನ್ನಡಿಗಳನ್ನು ತಕ್ಷಣವೇ ತೆಗೆದುಹಾಕುವುದು ಉತ್ತಮ.

ಖಾಲಿ ಬಕೆಟ್

ಸ್ನಾನಗೃಹದಲ್ಲಿ ಖಾಲಿ ಬಕೆಟ್‌ಗಳನ್ನು ಇಡುವುದು ದುರಾದೃಷ್ಟಕ್ಕೆ ಕಾರಣವಾಗುತ್ತದೆ ಎಂದು ವಾಸ್ತು ನಂಬಿಕೆ. ಯಾವಾಗಲೂ ಬಕೆಟ್‌ನಲ್ಲಿ ನೀರು ತುಂಬಿರುವಂತೆ ನೋಡಿಕೊಳ್ಳಬೇಕು. ನೀರು ತುಂಬಿಡಲು ಸಾಧ್ಯವಿಲ್ಲದಿದ್ದರೆ, ಬಕೆಟ್ ಅನ್ನು ತಲೆಕೆಳಗಾಗಿ ಇಡುವುದು ಒಳಿತು.

ಲೀಕೇಜ್ ಟ್ಯಾಪ್

ಸ್ನಾನದ ಗೃಹದಲ್ಲಿ ನಲ್ಲಿಯಿಂದ ನಿರಂತರವಾಗಿ ನೀರು ತೊಟ್ಟಿಕ್ಕುವುದು ಹಣ ನಷ್ಟ ಮತ್ತು ನಕಾರಾತ್ಮಕ ಶಕ್ತಿಯ ಸೂಚನೆ ಎಂದು ವಾಸ್ತು ಹೇಳುತ್ತದೆ. ಬಾತ್ ರೂಮ್ ಅಥವಾ ಮನೆಯ ಯಾವುದೇ ನಲ್ಲಿಯಿಂದ ನೀರು ಹನಿಯುತ್ತಿದ್ದರೆ, ಅದನ್ನು ತಕ್ಷಣ ಸರಿಪಡಿಸಬೇಕು.

ಒದ್ದೆ ಬಟ್ಟೆಗಳು

ಸ್ನಾನ ಮಾಡಿದ ನಂತರ ಒದ್ದೆಯಾದ ಬಟ್ಟೆಗಳನ್ನು ಬಾತ್ ರೂಮಿನಲ್ಲಿ ಬಿಟ್ಟರೆ ವಾಸ್ತು ದೋಷ ಉಂಟಾಗುತ್ತದೆ. ಇವು ಸೂರ್ಯ ದೋಷಕ್ಕೆ ಕಾರಣವಾಗುತ್ತವೆ ಎನ್ನಲಾಗುತ್ತದೆ. ಆದ್ದರಿಂದ ಒದ್ದೆ ಬಟ್ಟೆಗಳನ್ನು ತಕ್ಷಣ ತೊಳೆದು ಅಥವಾ ಹೊರಗೆ ಒಣಗಿಸಲು ಹಾಕಬೇಕು.

ಕೂದಲು

ಸಾಮಾನ್ಯವಾಗಿ ತಲೆಗೆ ಸ್ನಾನ ಮಾಡಿದಾಗ ಕೂದಲು ಬಿದ್ದೆಬೀಳುತ್ತದೆ, ಹೀಗೆ ಉದುರಿದ ಕೂದಲನ್ನು ಅಲ್ಲೇ ಬಿಡುವುದು ಅಥವಾ ಸ್ನಾನಗೃಹದ ಚರಂಡಿಯಲ್ಲಿ ಕೂದಲು ಕಟ್ಟುಕೊಳ್ಳುವುದನ್ನು ನಿರ್ಲಕ್ಷ್ಯ ಮಾಡಬಾರದು. ವಾಸ್ತು ಪ್ರಕಾರ, ಬಿದ್ದ ಕೂದಲು ಬಡತನದ ಸಂಕೇತ. ಇದರಿಂದ ಶನಿ ಮತ್ತು ಮಂಗಳ ದೋಷವೂ ಉಂಟಾಗಬಹುದು. ಹಾಗಾಗಿ ಕೂದಲು ಬಿದ್ದ ತಕ್ಷಣ ಸ್ವಚ್ಛಗೊಳಿಸಬೇಕು.

ಸ್ನಾನಗೃಹದಲ್ಲಿ ಸಸ್ಯಗಳು

ವಾಸ್ತು ಶಾಸ್ತ್ರದ ಪ್ರಕಾರ, ಬಾತ್ ರೂಮಿನಲ್ಲಿ ಸಸ್ಯಗಳನ್ನು ಇಡುವುದನ್ನು ಸಾಮಾನ್ಯವಾಗಿ ತಪ್ಪಿಸಬೇಕು. ಇಡಲೇಬೇಕೆಂದಿದ್ದರೆ, ವಾಸ್ತು ತಜ್ಞರ ಸಲಹೆ ಪಡೆಯುವುದು ಉತ್ತಮ. ಇಲ್ಲವಾದರೆ ನಕಾರಾತ್ಮಕತೆ ಹೆಚ್ಚುವ ಸಾಧ್ಯತೆ ಇದೆ..