ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Vastu Tips: ವಾಸ್ತು ಸಲಹೆಯಂತೆ ಮನೆಯಲ್ಲಿ ಕರಿಬೇವು ಗಿಡ ನೆಟ್ಟರೆ ಹಣಕಾಸು ಸಮಸ್ಯೆಯೇ ಬರದು!

ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ಕರಿಬೇವು ಗಿಡವನ್ನು ಬೆಳೆಸುವುದರಿಂದ ಅನೇಕ ಶುಭ ಪರಿಣಾಮಗಳು ಕಂಡುಬರುತ್ತವೆ. ವಿಶೇಷವಾಗಿ ಮನೆಯ ಹಿತ್ತಲಿನಲ್ಲಿ ಅಥವಾ ಸುತ್ತಮುತ್ತಲಿನ ಪ್ರದೇಶದಲ್ಲಿ ಈ ಗಿಡವಿದ್ದರೆ, ಧನಾತ್ಮಕ ಶಕ್ತಿ ಹೆಚ್ಚಾಗಿ ಮನೆಗೆ ಸಮೃದ್ಧಿ ಬರುತ್ತದೆ ಎಂದು ನಂಬಲಾಗುತ್ತದೆ. ಆದರೆ ಕರಿಬೇವು ಗಿಡವನ್ನು ಯಾವ ದಿಕ್ಕಿನಲ್ಲಿ ನೆಡಬೇಕು ಎಂಬುದು ಅತ್ಯಂತ ಮುಖ್ಯ. ಸರಿಯಾದ ದಿಕ್ಕಿನಲ್ಲಿ ಬೆಳೆದರೆ ಉತ್ತಮ ಫಲಿತಾಂಶಗಳು ದೊರೆಯುತ್ತವೆ.

ಕರಿಬೇವು ಗಿಡ

ಮನೆಯ ನೆಮ್ಮದಿ ಹಾಗೂ ಶಾಂತಿಯುತ ವಾತಾವರಣ ನಿರ್ಮಾಣಕ್ಕೆ ಕಾರಣವಾಗುವ ಅನೇಕ ವಿಷಯಗಳಲ್ಲಿ ಗಿಡಗಳು ಒಂದಾಗಿದ್ದು, ಸಸ್ಯಗಳು ಮನೆಯ ಸೌಂದರ್ಯವನ್ನು ಹೆಚ್ಚಿಸುವುದರ ಜೊತೆಗೆ, ಧನಾತ್ಮಕ ಶಕ್ತಿಯನ್ನೂ ತರಿಸುತ್ತವೆ. ವಾಸ್ತು ಶಾಸ್ತ್ರದ ಪ್ರಕಾರ, ಮನೆ ಒಳಗೆ ಸರಿಯಾದ ಗಿಡಗಳನ್ನು ಇಡುವುದರಿಂದ ಸಂಪತ್ತು ಮತ್ತು ಸಮೃದ್ಧಿ ವೃದ್ಧಿಯಾಗುತ್ತದೆ. ಅಂತಹ ಸಸ್ಯಗಳ ಪೈಕಿ ಕರಿಬೇವು ಒಂದಾಗಿದ್ದು, ಈ ಗಿಡವನ್ನು ವಾಸ್ತು ನಿಯಮಾನುಸಾರ(Vastu Tips) ಇಟ್ಟರೆ ಹಣಕಾಸಿನ ತೊಂದರೆಗಳು ದೂರವಾಗುತ್ತವೆ ಎಂದು ನಂಬಲಾಗಿದೆ.

ಹೌದು ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ಕರಿಬೇವು ಗಿಡವನ್ನು ಬೆಳೆಸುವುದರಿಂದ ಅನೇಕ ಶುಭ ಪರಿಣಾಮಗಳು ಕಂಡುಬರುತ್ತವೆ. ವಿಶೇಷವಾಗಿ ಮನೆಯ ಹಿತ್ತಲಿನಲ್ಲಿ ಅಥವಾ ಸುತ್ತಮುತ್ತಲಿನ ಪ್ರದೇಶದಲ್ಲಿ ಈ ಗಿಡವಿದ್ದರೆ, ಧನಾತ್ಮಕ ಶಕ್ತಿ ಹೆಚ್ಚಾಗಿ ಮನೆಗೆ ಸಮೃದ್ಧಿ ಬರುತ್ತದೆ ಎಂದು ನಂಬಲಾಗುತ್ತದೆ. ಆದರೆ ಕರಿಬೇವು ಗಿಡವನ್ನು ಯಾವ ದಿಕ್ಕಿನಲ್ಲಿ ನೆಡಬೇಕು ಎಂಬುದು ಅತ್ಯಂತ ಮುಖ್ಯ. ಸರಿಯಾದ ದಿಕ್ಕಿನಲ್ಲಿ ಬೆಳೆದರೆ ಉತ್ತಮ ಫಲಿತಾಂಶಗಳು ದೊರೆಯುತ್ತವೆ.

ಅದೇ ತಪ್ಪಾದ ದಿಕ್ಕಿನಲ್ಲಿ ಗಿಡಗಳನ್ನು ನೆಡುವುದರಿಂದ ವಾಸ್ತು ದೋಷಗಳು ಉಂಟಾಗಬಹುದು. ಇದರಿಂದ ಮನೆಯಲ್ಲಿ ಅನಿರೀಕ್ಷಿತ ಸಮಸ್ಯೆಗಳು ಎದುರಾಗುವ ಜೊತೆಗೆ, ಮನೆಯ ಶಾಂತಿ ಮತ್ತು ಸಂತೋಷಕ್ಕೂ ಅಡ್ಡಿಯಾಗುತ್ತದೆ. ಆದ್ದರಿಂದ ಮನೆ ಹೊರಭಾಗದಲ್ಲಿರುವ ಯಾವುದೇ ಸಸ್ಯಗಳೂ ವ್ಯಕ್ತಿಯ ಜೀವನದ ಮೇಲೆ ಪರಿಣಾಮ ಬೀರುತ್ತವೆ ಎಂಬುದನ್ನು ಮನದಲ್ಲಿಟ್ಟುಕೊಳ್ಳುವುದು ಅಗತ್ಯ.

ಹಾಗಾದರೆ ಈ ಗಿಡ ನೆಡಲು ಯಾವ ದಿಕ್ಕು ಸೂಕ್ತ? ಅದನ್ನು ಮನೆಯ ಯಾವ ದಿಕ್ಕಿನಲ್ಲಿ ಇಡಬೇಕು? ಅದರಿಂದ ದೊರೆಯುವ ಲಾಭಗಳು ಏನು ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ

ಕರಿಬೇವು ಗಿಡದ ವಾಸ್ತು ಪ್ರಯೋಜನಗಳು

ಧನಾತ್ಮಕ ಶಕ್ತಿ ವೃದ್ಧಿ:

ಕರಿಬೇವು ಗಿಡವು ಮನೆಯಲ್ಲಿ ಇರುವ ನಕಾರಾತ್ಮಕ ಶಕ್ತಿಯನ್ನು ದೂರ ಮಾಡಿ, ಧನಾತ್ಮಕ ವಾತಾವರಣವನ್ನು ಸೃಷ್ಟಿಸುತ್ತದೆ. ಸರಿಯಾದ ದಿಕ್ಕಿನಲ್ಲಿ ನೆಟ್ಟರೆ ಲಕ್ಷ್ಮೀ ದೇವಿಯ ಕೃಪೆ ಲಭಿಸಿ, ಸಂಪತ್ತು ಮತ್ತು ಐಶ್ವರ್ಯ ವೃದ್ಧಿಯಾಗುತ್ತದೆ ಎಂಬ ನಂಬಿಕೆ ಇದೆ.

ಆರೋಗ್ಯದ ದೃಷ್ಟಿಯಿಂದ ಲಾಭ:

ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ಕರಿಬೇವು ಗಿಡವಿರುವುದು ಕುಟುಂಬದ ಆರೋಗ್ಯಕ್ಕೆ ಲಾಭಕಾರಿ. ಇದರ ಎಲೆಗಳು ಹಲವು ಔಷಧೀಯ ಗುಣಗಳನ್ನು ಹೊಂದಿದ್ದು, ಮನಸ್ಸಿಗೆ ಶಾಂತಿ ಮತ್ತು ಮಾನಸಿಕ ಸಮತೋಲನವನ್ನು ನೀಡುತ್ತದೆ.

ಕರಿಬೇವು ಗಿಡ ನೆಡಲು ಶುಭ ದಿಕ್ಕುಗಳು

ಪಶ್ಚಿಮ ದಿಕ್ಕು:

ವಾಸ್ತು ತಜ್ಞರ ಅಭಿಪ್ರಾಯದಂತೆ, ಮನೆಯ ಪಶ್ಚಿಮ ದಿಕ್ಕು ಕರಿಬೇವು ಗಿಡಕ್ಕೆ ಅತ್ಯಂತ ಸೂಕ್ತ. ಈ ದಿಕ್ಕಿನಲ್ಲಿ ನೆಟ್ಟರೆ ಆರೋಗ್ಯ ಸುಧಾರಣೆ, ಮನಸ್ಸಿನ ಶಾಂತಿ ಮತ್ತು ಧನಾತ್ಮಕ ಶಕ್ತಿ ವೃದ್ಧಿಯಾಗುತ್ತದೆ.

ಆಗ್ನೇಯ ದಿಕ್ಕು:

ಆಗ್ನೇಯ ದಿಕ್ಕು (ಪೂರ್ವ-ದಕ್ಷಿಣ ಭಾಗ) ಸಂಪತ್ತು ಮತ್ತು ಆರ್ಥಿಕ ಬೆಳವಣಿಗೆಯ ಸಂಕೇತವಾಗಿದೆ. ಈ ಭಾಗದಲ್ಲಿ ಕರಿಬೇವು ಗಿಡ ಬೆಳೆಸಿದರೆ ಹಣಕಾಸು ಸ್ಥಿತಿ ಉತ್ತಮವಾಗುತ್ತದೆ ಎಂದು ಹೇಳಲಾಗುತ್ತದೆ.

ಕರಿಬೇವು ಗಿಡ ನೆಡಬಾರದ ದಿಕ್ಕು
ಈಶಾನ್ಯ ದಿಕ್ಕು:

ವಾಸ್ತು ಪ್ರಕಾರ, ಈಶಾನ್ಯ ದಿಕ್ಕಿನಲ್ಲಿ ಕರಿಬೇವು ಗಿಡವನ್ನು ನೆಡುವುದು ಅಶುಭ. ಇದರಿಂದ ನಕಾರಾತ್ಮಕ ಶಕ್ತಿ ಹೆಚ್ಚಾಗಿ ಮನೆಗೆ ಸಮಸ್ಯೆಗಳು ಎದುರಾಗಬಹುದು.

ಗಮನಿಸಬೇಕಾದ ವಿಷಯಗಳು

ಒಣಗಿದ ಅಥವಾ ಕೊಳೆಯುವ ಕರಿಬೇವು ಗಿಡವನ್ನು ಮನೆಯಲ್ಲಿ ಇರಿಸಿಕೊಳ್ಳುವುದು ಸೂಕ್ತವಲ್ಲ. ಇದರಿಂದ ಆರ್ಥಿಕ ತೊಂದರೆಗಳು ಹಾಗೂ ಕುಟುಂಬದಲ್ಲಿ ಕಲಹ ಉಂಟಾಗುವ ಸಾಧ್ಯತೆ ಇದೆ. ಹಾಗೆಯೇ ತ್ಯಾಜ್ಯ ನೀರು ಹರಿಯುವ ಸ್ಥಳದಲ್ಲಿ ಗಿಡವನ್ನು ನೆಡಬಾರದು. ವಾಸ್ತು ನಿಯಮದಂತೆ ಸಂಜೆ ವೇಳೆಯಲ್ಲಿ ಕರಿಬೇವು ಎಲೆಗಳನ್ನು ಕೀಳುವುದನ್ನು ತಪ್ಪಿಸಬೇಕು.
ಒಟ್ಟಾರೆ, ಸರಿಯಾದ ದಿಕ್ಕಿನಲ್ಲಿ ಕರಿಬೇವು ಗಿಡವನ್ನು ಬೆಳೆಸುವುದರಿಂದ ಆರೋಗ್ಯ, ಶಾಂತಿ ಮತ್ತು ಸಮೃದ್ಧಿ ದೊರೆಯುತ್ತದೆ ಎಂದು ವಾಸ್ತು ಶಾಸ್ತ್ರ ತಿಳಿಸುತ್ತದೆ.