ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vastu Tips: ಆರೋಗ್ಯ ಸಮಸ್ಯೆಯನ್ನು ದೂರವಿರಿಸಲು ಇಲ್ಲಿದೆ ಸುಲಭ ಉಪಾಯ

ಮನೆಯಲ್ಲಿ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿದೆ ಎಂದರೆ ಎಲ್ಲಾದರೂ ತೊಂದರೆ ಇವೆ ಎಂದೇ ಅರ್ಥ. ವಾಸ್ತು ಸಲಹೆಗಳನ್ನು ಪಾಲಿಸುವ ಮೂಲಕ ಈ ಸಮಸ್ಯೆಗಳನ್ನು ದೂರ ಮಾಡಬಹುದು. ವಾಸ್ತು ಶಾಸ್ತ್ರದಲ್ಲಿ ಮನೆ ಮಂದಿ ಆರೋಗ್ಯವಾಗಿರಲು ಕೆಲವೊಂದು ಉಪಾಯಗಳನ್ನು ಹೇಳಲಾಗಿದೆ. ಇದನ್ನು ಪಾಲಿಸುವುದರಿಂದ ಮನೆಯವರೆಲ್ಲ ಆರೋಗ್ಯವನ್ನು ಕಾಪಾಡಬಹುದು ಎನ್ನುತ್ತಾರೆ ವಾಸ್ತು ತಜ್ಞರು.

ವಾಸ್ತು ಸಲಹೆ ಪಾಲಿಸಿ ಆರೋಗ್ಯ ಸಮಸ್ಯೆಗಳನ್ನು ದೂರವಿರಿಸಿ

ಬೆಂಗಳೂರು: ಮನೆಯಲ್ಲಿರುವ ಪ್ರತಿಯೊಬ್ಬ ವ್ಯಕ್ತಿಯ ಆರೋಗ್ಯವು (vastu for health) ಮನೆ ಮಂದಿ ಎಲ್ಲರಿಗೂ ಬಹುಮುಖ್ಯವಾಗಿರುತ್ತದೆ. ಯಾಕೆಂದರೆ ಮನೆಯಲ್ಲಿ ಯಾವೊಬ್ಬ ವ್ಯಕ್ತಿಯ ಆರೋಗ್ಯ (vastu about family health) ಹಾಳಾದರೂ ಅದು ಇಡೀ ಕುಟುಂಬದ ಮೇಲೆ ಪರಿಣಾಮ ಬೀರುತ್ತದೆ. ಅದಕ್ಕಾಗಿಯೇ ಹಿರಿಯರು ಆರೋಗ್ಯವೇ (Vastu tips) ಬಹು ದೊಡ್ಡ ಭಾಗ್ಯ ಎನ್ನುತ್ತಾರೆ. ಕುಟುಂಬದಲ್ಲಿ ಯಾರಿಗಾದರೂ ಆರೋಗ್ಯ ಸಮಸ್ಯೆಗಳಿದ್ದರೆ ಕೆಲವೊಮ್ಮೆ ಔಷಧಗಳು ಉಪಯೋಗಕ್ಕೆ ಬಾರದೇ ಇದ್ದರೆ ವಾಸ್ತು ಶಾಸ್ತ್ರ ಹೇಳಿರುವ ಕೆಲವು ನಿಯಮಗಳನ್ನು ಪಾಲಿಸಿ ನೋಡಬಹುದು. ಇದು ಖಂಡಿತ ಅವರ ಆರೋಗ್ಯ ಸುಧಾರಣೆಗೆ ಸಹಾಯ ಮಾಡುತ್ತದೆ ಎನ್ನುತ್ತಾರೆ ವಾಸ್ತು ತಜ್ಞರು.

ಕುಟುಂಬ ಸದಸ್ಯರು ಅನಾರೋಗ್ಯಕ್ಕೆ ಒಳಗಾದಾಗ ಅವರನ್ನು ಹೇಗೆ ಉತ್ತಮಗೊಳಿಸುವುದು ಎನ್ನುವುದನ್ನು ಬಹುತೇಕ ಎಲ್ಲರೂ ಎಲ್ಲ ಕಡೆ ಹುಡುಕುತ್ತಾರೆ. ಆದರೆ ಮನೆ ಮಂದಿಯ ಆರೋಗ್ಯದ ಮೇಲೆ ವಾಸಸ್ಥಳವು ಪರಿಣಾಮ ಬೀರುತ್ತದೆ ಎನ್ನುವುದನ್ನು ಹೆಚ್ಚಿನವರು ಅರ್ಥೈಸಿಕೊಳ್ಳುವುದಿಲ್ಲ. ಕೆಲವೊಮ್ಮೆ ಅದು ಅರ್ಥವಾಗುವಷ್ಟರಲ್ಲಿ ತುಂಬಾ ತಡವಾಗಿ ಹೋಗಿರುತ್ತದೆ. ಮನೆ ಮಂದಿಯ ಆರೋಗ್ಯ ಕೆಟ್ಟಾಗ ನಾವು ವೈದ್ಯರನ್ನು ಸಂಪರ್ಕಿಸಲೇಬೇಕು. ಅದರ ಹೊರತಾಗಿ ಕೆಲವೊಂದು ವಾಸ್ತು ನಿಯಮ ಪಾಲಿಸುವುದರಿಂದ ಅವರು ಬಹುಬೇಗನೆ ಸುಧಾರಣೆಯಾಗುವ ಸಾಧ್ಯತೆ ಇರುತ್ತದೆ.

ಈ ಕುರಿತು ವಾಸ್ತು ಶಾಸ್ತ್ರದಲ್ಲಿ ಹೇಳಿರುವ ಕೆಲವೊಂದು ಪರಿಹಾರ ಉಪಾಯಗಳು ಇಲ್ಲಿವೆ.

  1. ಮನೆಯ ಈಶಾನ್ಯ ಮೂಲೆಯನ್ನು ಸ್ವಚ್ಛವಾಗಿ ಮತ್ತು ತೆರೆದಿಡಿ. ಇದು ಆರೋಗ್ಯ ಮತ್ತು ಶಾಂತಿಗೆ ಸಂಬಂಧಿಸಿದೆ. ಇಲ್ಲಿ ಯಾವುದೇ ಭಾರವಾದ ವಸ್ತುಗಳನ್ನು ಇಡಬೇಡಿ.
  2. ಮನೆಗೆ ಪ್ರತಿದಿನ ಸೂರ್ಯನ ಬೆಳಕು ಬರುವಂತೆ ಕಿಟಕಿ ಬಾಗಿಲುಗಳನ್ನು ತೆರೆದಿಡಿ. ನೈಸರ್ಗಿಕ ಬೆಳಕು ಮನೆಗೆ ಸಕಾರಾತ್ಮಕ ಶಕ್ತಿಯನ್ನು ತರುತ್ತದೆ. ಮನೆ ಮಂದಿಯನ್ನು ತಾಜಾ ಮತ್ತು ಆರೋಗ್ಯಕರವಾಗಿರಿಸುತ್ತದೆ.
  3. ನೈಋತ್ಯ ದಿಕ್ಕಿನಲ್ಲಿ ಮನೆಯ ಮುಖ್ಯಸ್ಥ ಮಲಗುವ ಕೋಣೆ ಇರಲಿ. ಇದರಿಂದ ಕುಟುಂಬದ ಮುಖ್ಯಸ್ಥರಿಗೆ ಸ್ಥಿರತೆ ಮತ್ತು ಉತ್ತಮ ಆರೋಗ್ಯ ಸಿಗುತ್ತದೆ.
  4. ವಿದ್ಯುತ್ ಕಿರಣಗಳ ಕೆಳಗೆ ಮಲಗುವುದನ್ನು ತಪ್ಪಿಸಿ. ಯಾಕೆಂದರೆ ಇದು ಒತ್ತಡವನ್ನು ಸೃಷ್ಟಿಸುತ್ತದೆ. ಒತ್ತಡದಿಂದ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು.
  5. ಗೋಡೆಗಳಿಗೆ ತಿಳಿ, ಹಿತವಾದ ಬಣ್ಣಗಳನ್ನು ಬಳಸಿ. ಬಿಳಿ, ತಿಳಿ ನೀಲಿ ಅಥವಾ ಹಸಿರು ಮನೆಯಲ್ಲಿ ಶಾಂತಿಯುತ ವಾತಾವರಣವನ್ನು ಸೃಷ್ಟಿಸುತ್ತದೆ.
  6. ಮನೆಯ ಈಶಾನ್ಯ ಕಿಟಕಿ ಅಥವಾ ಬಾಲ್ಕನಿ ಬಳಿ ತುಳಸಿ ಗಿಡವನ್ನು ಇರಿಸಿ. ಇದು ಗಾಳಿಯನ್ನು ಶುದ್ಧೀಕರಿಸುತ್ತದೆ ಮತ್ತು ಸಕಾರಾತ್ಮಕ ಕಂಪನಗಳನ್ನು ಮನೆಯೊಳಗೆ ತರುತ್ತದೆ.
  7. ಹಾಸಿಗೆಗೆ ಎದುರಾಗಿ ಕನ್ನಡಿಗಳನ್ನು ಇಡಬೇಡಿ. ಇದರಿಂದ ನಿದ್ರೆ ಮತ್ತು ಮಾನಸಿಕ ಶಾಂತಿಗೆ ತೊಂದರೆಯಾಗುವುದು.
  8. ಶೌಚಾಲಯ ಮತ್ತು ಸ್ನಾನಗೃಹಗಳನ್ನು ಸ್ವಚ್ಛವಾಗಿ ಮತ್ತು ಮುಚ್ಚಿಡಿ. ಕೊಳಕು ಅಥವಾ ತೆರೆದ ಸ್ನಾನಗೃಹಗಳು ನಕಾರಾತ್ಮಕ ಶಕ್ತಿಯನ್ನು ಮನೆಯೊಳಗೆ ಹರಡಬಹುದು.
  9. ಕೋಣೆಗಳ ಮೂಲೆಗಳಲ್ಲಿ ಕಲ್ಲು ಉಪ್ಪಿನ ಬಟ್ಟಲುಗಳನ್ನು ಬಳಸಿ. ಇದು ನಕಾರಾತ್ಮಕ ಶಕ್ತಿಯನ್ನು ಹೀರಿಕೊಳ್ಳುತ್ತದೆ ಮತ್ತು ಮನೆಮಂದಿಯ ಯೋಗಕ್ಷೇಮವನ್ನು ವೃದ್ಧಿಸುತ್ತದೆ.
  10. ಅಡುಗೆಮನೆಯಲ್ಲಿ ಔಷಧಗಳನ್ನು ಇಡಬೇಡಿ. ಇದರಿಂದ ಮನೆಮಂದಿಯ ಆರೋಗ್ಯದ ಮೇಲೆ ಪರಿಣಾಮ ಬಿರುವುದು.
  11. ದಕ್ಷಿಣ ಅಥವಾ ಪೂರ್ವಕ್ಕೆ ತಲೆ ಹಾಕಿ ಮಲಗಿ. ಇದು ನಿದ್ರೆಯ ಗುಣಮಟ್ಟ ಮತ್ತು ಮೆದುಳಿನ ಕಾರ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ.
  12. ಮನೆಯಲ್ಲಿ ಯಾವುದೇ ನೀರಿನ ಸೋರಿಕೆ ಇದ್ದರೆ ತಕ್ಷಣ ಸರಿಪಡಿಸಿ. ಸೋರಿಕೆಯಾಗುವ ನಲ್ಲಿ ಅಥವಾ ಪೈಪ್‌ಗಳಿಂದ ಆರೋಗ್ಯ ತೊಂದರೆಗಳೂ ಕಾಣಿಸಿಕೊಳ್ಳುತ್ತವೆ.
  13. ಪ್ರತಿನಿತ್ಯ ಮನೆಯಲ್ಲಿ ಕರ್ಪೂರ ಅಥವಾ ಧೂಪದ್ರವ್ಯವನ್ನು ಸುಟ್ಟುಹಾಕಿ. ಇದು ಗಾಳಿಯನ್ನು ಶುದ್ಧೀಕರಿಸುತ್ತದೆ ಮತ್ತು ನಕಾರಾತ್ಮಕ ಶಕ್ತಿಯನ್ನು ದೂರ ಮಾಡುತ್ತದೆ.
  14. ಮನೆಯ ಒಳಗೆ ಅಥವಾ ಹೊರಗೆ ಸತ್ತ ಸಸ್ಯಗಳು ಅಥವಾ ಒಣಗಿದ ಹೂವುಗಳಿದ್ದರೆ ಕೂಡಲೇ ಅವುಗಳನ್ನು ತೆಗೆದುಬಿಡಿ. ಇವುಗಳು ಆರೋಗ್ಯಕರ ಶಕ್ತಿಯ ಹರಿವನ್ನು ತಡೆಯುತ್ತವೆ.
  15. ಮನೆಯ ಮಧ್ಯಭಾಗವನ್ನು ಖಾಲಿ ಇರಿಸಿ. ಇದು ಮನೆಯ ಶಕ್ತಿ ಕೇಂದ್ರವಾಗಿದೆ ಮತ್ತು ಶಕ್ತಿ ಹರಿಯಲು ಈ ಜಾಗ ಮುಕ್ತವಾಗಿರಬೇಕು.

ಇದನ್ನೂ ಓದಿ: Vastu Tips: ಅಡುಗೆ ಮನೆ ಉತ್ತರ ದಿಕ್ಕಿನಲ್ಲಿ ಇದೆಯೇ? ಹಾಗಿದ್ದರೆ ಈ ನಿಯಮ ಪಾಲಿಸಿ, ಸುಖ, ಶಾಂತಿ, ಸಮೃದ್ಧಿಯನ್ನು ಆಹ್ವಾನಿಸಿ