ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Vastu Tips: ದೇವರ ಕೋಣೆಯಲ್ಲಿ ಇಡಬಾರದ ವಿಗ್ರಹಗಳು ಇವು! ಇಟ್ಟರೆ ಕಷ್ಟ ತಪ್ಪಿದಲ್ಲ ಅನ್ನುತ್ತದೆ ಶಾಸ್ತ್ರ

ಹಿಂದೂ ಸಂಪ್ರದಾಯದಲ್ಲಿ ದೇವರ ಕೋಣೆ ಪವಿತ್ರ ಸ್ಥಳವಾಗಿದ್ದು, ಎಲ್ಲಾ ವಿಗ್ರಹಗಳು ಈ ಸ್ಥಳಕ್ಕೆ ಸೂಕ್ತವಾಗುವುದಿಲ್ಲ. ಭೈರವ, ಮಹಾಕಾಳಿ, ಶನಿ, ರಾಹು-ಕೇತುಗಳಂತಹ ಉಗ್ರ ಸ್ವರೂಪದ ದೇವತೆಗಳ ವಿಗ್ರಹಗಳನ್ನು ದೇವರ ಕೋಣೆಯಲ್ಲಿ ಇಡುವುದನ್ನು ತಪ್ಪಿಸಬೇಕು ಎಂದು ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದೆ. ಜೊತೆಗೆ ದೇವರ ಕೋಣೆಯಲ್ಲಿ ಶುದ್ಧತೆ ಮತ್ತು ನಿಯಮಗಳನ್ನು ಪಾಲಿಸುವುದು ಅತ್ಯಂತ ಮುಖ್ಯ.

ದೇವರ ಕೋಣೆ ವಾಸ್ತು

ಬೆಂಗಳೂರು: ಹಿಂದೂ ಸಂಪ್ರದಾಯದಲ್ಲಿ ಪ್ರತಿಯೊಂದು ಮನೆಯಲ್ಲೂ ದೇವರ ಕೋಣೆ ಅತ್ಯಂತ ಪವಿತ್ರ ಸ್ಥಳವೆಂದು ಪರಿಗಣಿಸಲಾಗುತ್ತದೆ. ಈ ಸ್ಥಳದಲ್ಲಿ ವಿವಿಧ ದೇವರು-ದೇವತೆಗಳ ವಿಗ್ರಹಗಳು, ಚಿತ್ರಗಳು ಹಾಗೂ ಧಾರ್ಮಿಕ ಗ್ರಂಥಗಳನ್ನು ಭಕ್ತಿಯಿಂದ ಇಡಲಾಗುತ್ತದೆ. ಆದರೆ ಎಲ್ಲ ವಿಗ್ರಹಗಳು ಅಥವಾ ಚಿತ್ರಗಳು ದೇವರ ಕೋಣೆಗೆ ಸೂಕ್ತವಾಗುವುದಿಲ್ಲ ಎಂಬುದನ್ನು ಬಹಳವರಿಗೆ ತಿಳಿದಿರುವುದಿಲ್ಲ. ಕೆಲವು ದೇವತೆಗಳ ಉಗ್ರ ರೂಪಗಳನ್ನು ಮನೆಯಲ್ಲಿ ಇಡುವುದರಿಂದ ನಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ.

ಹಾಗಾದ್ರೆ ವಾಸ್ತು ಶಾಸ್ತ್ರ (Vastu Tips) ಪ್ರಕಾರ ಯಾವ ದೇವರ ವಿಗ್ರಹಗಳು ಅಥವಾ ಫೋಟೋಗಳನ್ನು ದೇವರ ಕೋಣೆಯಲ್ಲಿ ಇಡಬಾರದು..? ಎಂಬ ಮಾಹಿತಿ ಇಲ್ಲಿದೆ

ಭೈರವನಾಥ: ಶಿವನ ಉಗ್ರ ಅವತಾರ

ಧಾರ್ಮಿಕ ನಂಬಿಕೆಗಳ ಪ್ರಕಾರ, ಭೈರವನಾಥನು ಶಿವನ ಉಗ್ರ ಅವತಾರವಾಗಿದ್ದು, ಕಾಲ ಭೈರವ ಎಂದು ಕರೆಯಲ್ಪಡುತ್ತಾನೆ. ಈ ಉಗ್ರ ಸ್ವರೂಪದ ಕಾರಣದಿಂದ ಭೈರವನ ವಿಗ್ರಹವನ್ನು ಮನೆಯ ಒಳಗೆ ಅಲ್ಲ, ಹೊರಭಾಗದಲ್ಲಿ ಪೂಜಿಸುವುದು ಉತ್ತಮವೆಂದು ಹೇಳಲಾಗುತ್ತದೆ. ದೇವರ ಕೋಣೆಯಲ್ಲಿ ಇಟ್ಟರೆ ವಾಸ್ತು ದೋಷಗಳು ಉಂಟಾಗಬಹುದು ಎಂದು ನಂಬಿಕೆ ಇದೆ.

ಮಹಾಕಾಳಿ: ಭಯಾನಕ ರೂಪ

ಅದೇ ರೀತಿ, ಮಹಾಕಾಳಿ ದೇವಿಯೂ ಪಾರ್ವತಿಯ ಭಯಾನಕ ರೂಪವಾಗಿದ್ದಾಳೆ. ಕಾಳಿ ದೇವಿಯ ಉಗ್ರ ಸ್ವರೂಪದ ವಿಗ್ರಹ ಅಥವಾ ಫೋಟೋವನ್ನು ಮನೆಯ ಪೂಜಾ ಕೋಣೆಯಲ್ಲಿ ಇಡುವುದರಿಂದ ಮನೆಯಲ್ಲಿ ಅಶಾಂತಿ ಮತ್ತು ನಕಾರಾತ್ಮಕತೆ ಹೆಚ್ಚಾಗಬಹುದು ಎಂದು ಹೇಳಲಾಗುತ್ತದೆ. ಆದ್ದರಿಂದ ಶಾಂತಿ ಮತ್ತು ಸೌಖ್ಯವನ್ನು ಬಯಸುವವರು ಇಂತಹ ಚಿತ್ರಗಳನ್ನು ತಪ್ಪಿಸುವುದು ಉತ್ತಮ.

ಶನಿದೇವ

ಶನಿದೇವನು ನ್ಯಾಯದ ದೇವರೆಂದು ಪ್ರಸಿದ್ಧ. ವ್ಯಕ್ತಿಯ ಕರ್ಮಗಳಿಗೆ ತಕ್ಕ ಫಲವನ್ನು ನೀಡುವ ದೇವರೆಂದು ಪರಿಗಣಿಸಲಾಗುತ್ತದೆ. ಜ್ಯೋತಿಷ್ಯದ ಪ್ರಕಾರ ಶನಿದೇವನ ಪ್ರಭಾವ ಗಾಢವಾಗಿರುವುದರಿಂದ, ಅವರ ವಿಗ್ರಹವನ್ನು ಮನೆಯಲ್ಲಿ ಇಡುವುದನ್ನು ತಪ್ಪಿಸುವುದು ಒಳಿತು ಎನ್ನಲಾಗುತ್ತದೆ.

Vastu Tips: ಮನೆಯಲ್ಲಿ ಒಂಟೆಯ ಪ್ರತಿಮೆ ಇಟ್ಟರೆ ಶುಭವೇ? ವಾಸ್ತು-ಫೆಂಗ್ ಶೂಯಿ ಹೇಳೋದೇನು?

ರಾಹು-ಕೇತು

ಇದೇ ರೀತಿಯಲ್ಲಿ, ರಾಹು ಮತ್ತು ಕೇತುಗಳನ್ನು ನೆರಳು ಗ್ರಹಗಳೆಂದು ಕರೆಯಲಾಗುತ್ತದೆ. ಇವುಗಳು ಜೀವನದಲ್ಲಿ ಅಡಚಣೆಗಳನ್ನು ಉಂಟುಮಾಡುವ ಗ್ರಹಗಳೆಂದು ನಂಬಿಕೆ ಇರುವುದರಿಂದ, ಇವರ ವಿಗ್ರಹಗಳನ್ನು ದೇವರ ಕೋಣೆಯಲ್ಲಿ ಇಡುವುದನ್ನು ತಪ್ಪಿಸಬೇಕು. ಸಾಮಾನ್ಯವಾಗಿ ಇವುಗಳನ್ನು ಮನೆಯ ಹೊರಭಾಗದಲ್ಲೇ ಪೂಜಿಸಲಾಗುತ್ತದೆ.

ದೇವರ ಕೋಣೆಯಲ್ಲಿ ಪಾಲಿಸಬೇಕಾದ ಕೆಲವು ನಿಯಮಗಳು:

ಸ್ನಾನ ಮಾಡದೇ ಅಥವಾ ಒದ್ದೆ ಕೂದಲಿನಲ್ಲೇ ದೇವರ ಕೋಣೆಗೆ ಹೋಗಬಾರದು
ದೇವರ ಕೋಣೆಯಲ್ಲಿ ಊಟ, ಮದ್ಯಪಾನ ಮಾಡಬಾರದು
ಆ ಸ್ಥಳದಲ್ಲಿ ಮಲಗುವುದನ್ನು ತಪ್ಪಿಸಬೇಕು
ಅಶುದ್ಧ ಬಟ್ಟೆಗಳು ಅಥವಾ ವಸ್ತುಗಳನ್ನು ಇಡಬಾರದು
ಚಪ್ಪಲಿ ಧರಿಸಿ ಒಳ ಹೋಗಬಾರದು
ಮಾಂಸಾಹಾರವನ್ನು ದೇವರ ಕೋಣೆಗೆ ತರುವುದನ್ನು ನಿಷೇಧಿಸಲಾಗಿದೆ

ಇವುಗಳ ಜೊತೆಗೆ ಇನ್ನೂ ಅನೇಕ ಸಂಪ್ರದಾಯಬದ್ಧ ನಿಯಮಗಳು ಇವೆ. ಇವುಗಳನ್ನು ಪಾಲಿಸುವುದರಿಂದ ಮನೆಯಲ್ಲಿ ಶಾಂತಿ, ಸದ್ಭಾವನೆ ಹಾಗೂ ಪವಿತ್ರತೆ ಉಳಿಯುತ್ತದೆ ಎಂದು ನಂಬಲಾಗಿದೆ.