Vastu Tips: ರಾತ್ರಿ ಬಾತ್‌ರೂಂ ಬಾಗಿಲು ತೆರೆದಿಟ್ಟು ಮಲಗಬೇಡಿ
ರಾತ್ರಿ ಮನೆಯಲ್ಲಿ ಸ್ನಾನಗೃಹದ ಬಾಗಿಲನ್ನು ತೆರೆದು ಇರಿಸುವುದರಿಂದ ನಾನಾ ರೀತಿಯ ಸಮಸ್ಯೆಗಳನ್ನು ಆಹ್ವಾನಿಸಿದಂತಾಗುತ್ತದೆ. ಮನೆಯ ಸ್ನಾನಗೃಹ ಮತ್ತು ಶೌಚಾಲಯ ನಕಾರಾತ್ಮಕ ಶಕ್ತಿಯ ಕೇಂದ್ರ ಸ್ಥಳವೆಂದು ಪರಿಗಣಿಸಲಾಗುತ್ತದೆ. ಹೀಗಾಗಿ ಇದರ ಬಾಗಿಲನ್ನು ರಾತ್ರಿ ತೆರೆದು ಇರಿಸುವುದರಿಂದ ನಾನಾ ರೀತಿಯ ಸಮಸ್ಯೆಗಳಿಗೆ ಅಹ್ವಾನ ಕೊಟ್ಟಂತಾಗುತ್ತದೆ ಎನ್ನುತ್ತದೆ ವಾಸ್ತು ಶಾಸ್ತ್ರ.

-

ಬೆಂಗಳೂರು: ಮನೆಯಲ್ಲಿ ರಾತ್ರಿ ವೇಳೆ ಬಾತ್‌ರೂಂನ ಬಾಗಿಲು ತೆರೆದಿಟ್ಟು ಮಲಗುವುದರಿಂದ ನಾನಾ ರೀತಿಯ ಸಮಸ್ಯೆಗಳನ್ನು ಆಹ್ವಾನಿಸಬಹುದು ಎನ್ನುತ್ತದೆ ವಾಸ್ತು ಶಾಸ್ತ್ರ (Vastu Tips). ಸ್ನಾನಗೃಹ ಮತ್ತು ಶೌಚಾಲಯ (Vastu for bathroom) ಮನೆಯಲ್ಲಿ ನಕಾರಾತ್ಮಕ ಶಕ್ತಿಯ ಕೇಂದ್ರವೆಂದು ಪರಿಗಣಿಸಲಾಗಿದೆ. ಮನೆಯಲ್ಲಿ ಸ್ನಾನಗೃಹ ಮತ್ತು ಶೌಚಾಲಯದ ಸ್ಥಳವು ವಾಸ್ತು (Vastu for home) ನಿಯಮಗಳ ಪ್ರಕಾರವಾಗಿದ್ದರೆ ಯಾವುದೇ ದೋಷವಿಲ್ಲ. ಒಂದು ವೇಳೆ ನಾವು ನಮ್ಮ ಅನುಕೂಲಕ್ಕೆ ತಕ್ಕಂತೆ ಅವುಗಳ ಸ್ಥಳ ಬದಲಾವಣೆ ಮಾಡಿಕೊಂಡಿದ್ದರೆ ನಾನಾ ರೀತಿಯ ಸಮಸ್ಯೆಗಳು ಉಂಟಾಗುತ್ತದೆ.
ವಾಸ್ತು ಶಾಸ್ತ್ರದ ಪ್ರಕಾರ ಶೌಚಾಲಯವು ಮನೆಯ ಶಕ್ತಿ ಮತ್ತು ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಇದು ಮನೆಯಲ್ಲಿ ನಾನಾ ರೀತಿಯ ಸಮಸ್ಯೆಗಳನ್ನು ಉಂಟು ಮಾಡುತ್ತದೆ. ಇಂತಹ ಒಂದು ವಾಸ್ತು ದೋಷವೆಂದರೆ ಸ್ನಾನಗೃಹದ ಬಾಗಿಲು ತಪ್ಪು ದಿಕ್ಕಿನಲ್ಲಿರುವುದು ಅಥವಾ ಯಾವುದೇ ಕಾರಣವಿಲ್ಲದೆ ಅದು ತೆರೆದಿರುವುದು.
ರಾತ್ರಿ ಮಲಗುವ ಮೊದಲು ಸ್ನಾನಗೃಹದ ಬಾಗಿಲು ಮುಚ್ಚದೇ ಇದ್ದರೆ ಇದು ಮನೆ ಮಂದಿಯ ಜೀವನದಲ್ಲಿ ನಕಾರಾತ್ಮಕ ಪರಿಣಾಮಗಳನ್ನು ಬೀರುತ್ತದೆ ಎನ್ನುತ್ತಾರೆ ಜ್ಯೋತಿಷಿ ಪಂಡಿತ್ ರಮೇಶ್ ಭೋಜರಾಜ್ ದ್ವಿವೇದಿ. ರಾತ್ರಿ ಬಾತ್‌ರೂಂ ಬಾಗಿಲು ತೆರೆದಿಡುವುದು ಅನೇಕ ಸಮಸ್ಯೆಗಳನ್ನು ಉಂಟು ಮಾಡಬಹುದು. ಇದು ಮನೆಯಲ್ಲಿ ನಕಾರಾತ್ಮಕ ಶಕ್ತಿಯನ್ನು ಹರಡುತ್ತದೆ.
ರಾತ್ರಿಯಲ್ಲಿ ಸ್ನಾನಗೃಹದ ಬಾಗಿಲು ತೆರೆದಿರುವುದರಿಂದ ತೇವಾಂಶ, ಕೆಟ್ಟ ವಾಸನೆ ಮತ್ತು ಇತರ ನಕಾರಾತ್ಮಕ ಶಕ್ತಿಯು ಮನೆಯಾದ್ಯಂತ ಹರಡಲು ಪ್ರಾರಂಭವಾಗುತ್ತದೆ. ಬಾತ್‌ರೂಂ ಮನೆಯಲ್ಲಿ ವಾಸ್ತು ದೋಷಗಳನ್ನು ಉಂಟು ಮಾಡುತ್ತದೆ. ವಾಸ್ತು ಪ್ರಕಾರ ಸ್ನಾನಗೃಹವು ನೀರಿನ ಅಂಶದೊಂದಿಗೆ ಸಂಪರ್ಕ ಹೊಂದಿದೆ. ಅದರ ಬಾಗಿಲು ತೆರೆದಿದ್ದರೆ ಅದು ಮನೆಯ ಲಕ್ಷ್ಮೀಯನ್ನು ಸ್ಥಿರವಾಗಿ ನಿಲ್ಲಲು ಬಿಡುವುದಿಲ್ಲ. ಇದು ಹಣದ ನಷ್ಟ ಮತ್ತು ಆರ್ಥಿಕ ತೊಂದರೆಗಳು ಉಂಟಾಗಲು ಕಾರಣವಾಗಬಹುದು.
ರಾತ್ರಿ ಸ್ನಾನಗೃಹದ ಬಾಗಿಲು ತೆರೆದಿಡುವುದು ಆರೋಗ್ಯಕ್ಕೂ ಹಾನಿಕಾರಕ. ಸ್ನಾನಗೃಹದ ಬಾಗಿಲಿನ ಮೂಲಕ ಕೋಣೆಯಾದ್ಯಂತ ತೇವಾಂಶ ಮತ್ತು ಬ್ಯಾಕ್ಟೀರಿಯಾಗಳು ಹರಡಿ ಅನೇಕ ಆರೋಗ್ಯ ಸಮಸ್ಯೆಗಳನ್ನು ಉಂಟು ಮಾಡಬಹುದು.
ಮನೆಯ ಶಕ್ತಿಯ ಹರಿವನ್ನು ಇದು ಅಸಮತೋಲನಗೊಳಿಸುತ್ತದೆ. ಇದು ನಿದ್ರೆಗೆ ತೊಂದರೆ ಉಂಟು ಮಾಡುತ್ತದೆ. ರಾತ್ರಿಯಲ್ಲಿ ಸ್ನಾನಗೃಹದ ಬಾಗಿಲು ತೆರೆದಿದ್ದರೆ ಜೀವನದಲ್ಲಿ ಮಾನಸಿಕ ಅಶಾಂತಿ ಹೆಚ್ಚಾಗುತ್ತದೆ. ರಾತ್ರಿ ದೇಹವು ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಬಾಹ್ಯ ಶಕ್ತಿಯನ್ನು ಹೀರಿಕೊಳ್ಳುತ್ತದೆ. ಈ ವೇಳೆ ಮನೆಯಲ್ಲಿ ಯಾವುದೇ ರೀತಿಯ ನಕಾರಾತ್ಮಕ ಶಕ್ತಿ ಹರಡಿದರೆ ಅದು ನಿದ್ರೆಯ ಮೇಲೆ ಪರಿಣಾಮ ಬೀರುತ್ತದೆ.
ಏನು ಪರಿಹಾರ?
ಮನೆಯಲ್ಲಿನ ವಾಸ್ತು ದೋಷವನ್ನು ತಡೆಗಟ್ಟಲು ಬಯಸಿದರೆ ಹಗಲು ಮತ್ತು ರಾತ್ರಿ ಸ್ನಾನಗೃಹದ ಬಾಗಿಲನ್ನು ಮುಚ್ಚಿಡುವುದು ಒಳ್ಳೆಯದು. ಇದರಿಂದ ಯಾವುದೇ ರೀತಿಯ ನಕಾರಾತ್ಮಕ ಶಕ್ತಿಯು ಸ್ನಾನಗೃಹದಿಂದ ಹೊರಬರುವುದಿಲ್ಲ. ಸ್ನಾನಗೃಹದಲ್ಲಿ ಸರಿಯಾದ ಗಾಳಿಯ ಹರಿವನ್ನು ಕಾಪಾಡಿಕೊಳ್ಳಲು ಎಕ್ಸಾಸ್ಟ್ ಫ್ಯಾನ್ ಅನ್ನು ಅಳವಡಿಸಬೇಕು, ಇದು ಸ್ನಾನಗೃಹದಲ್ಲಿನ ತೇವಾಂಶ ಮತ್ತು ವಾಸನೆಯನ್ನು ಕಡಿಮೆ ಮಾಡುತ್ತದೆ.
ಇದನ್ನೂ ಓದಿ: Vastu Tips: ಆಪತ್ತು ತರಬಹುದು ಅಡುಗೆ ಮನೆಯಲ್ಲಿರುವ ತೆರೆದ ಕಸದ ಬುಟ್ಟಿ
ಸ್ವಚ್ಛ ಸ್ನಾನಗೃಹವು ಜೀವನದಲ್ಲಿ ಶುಭ ಪರಿಣಾಮಗಳನ್ನು ಬೀರುತ್ತದೆ. ಆದ್ದರಿಂದ ಸ್ನಾನಗೃಹವನ್ನು ನಿಯಮಿತವಾಗಿ ಸ್ವಚ್ಛಗೊಳಿಸುವುದು ಅವಶ್ಯಕ. ಇನ್ನು ಸ್ನಾನಗೃಹದ ಮೂಲೆಯಲ್ಲಿ ಒಂದು ಬಟ್ಟಲಿನಲ್ಲಿ ಉಪ್ಪನ್ನು ಇಡುವುದರಿಂದ ನಕಾರಾತ್ಮಕ ಶಕ್ತಿ ದೂರವಾಗುತ್ತದೆ. ಇದನ್ನು ಪ್ರತಿ 15 ದಿನಗಳಿಗೊಮ್ಮೆ ಬದಲಾಯಿಸಬೇಕು ಎನ್ನುತ್ತಾರೆ ವಾಸ್ತು ತಜ್ಞ ರಮೇಶ್ ಭೋಜರಾಜ್ ದ್ವಿವೇದಿ.