ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Vastu Tips: : ವಾಸ್ತುಶಾಸ್ತ್ರದ ಪ್ರಕಾರ ಎಂಥ ಸಮಯದಲ್ಲಿಯೂ ಯಾರಿಂದಲೂ ಈ ವಸ್ತುಗಳನ್ನು ಸಾಲ ಪಡೆಯಬೇಡಿ!

ನಮ್ಮ ದೈನಂದಿನ ಜೀವನದಲ್ಲಿ ಸ್ನೇಹಿತರು ಅಥವಾ ಸಂಬಂಧಿಕರಿಂದ ವಸ್ತುಗಳನ್ನು ಎರವಲು ಪಡೆಯುವುದು ಸಾಮಾನ್ಯ. ಆದರೆ ವಾಸ್ತುಶಾಸ್ತ್ರದ ಪ್ರಕಾರ, ಕೈಗಡಿಯಾರ, ಪೊರಕೆ, ಪೆನ್ನು ಮತ್ತು ಉಪ್ಪು ಮುಂತಾದ ಕೆಲವು ವಸ್ತುಗಳು ವ್ಯಕ್ತಿಯ ಅದೃಷ್ಟ ಹಾಗೂ ಹಣೆಬರಹಕ್ಕೆ ಸಂಬಂಧಿಸಿರುತ್ತವೆ. ಇವುಗಳನ್ನು ಎರವಲು ಕೊಡುವುದು ಅಥವಾ ಪಡೆಯುವುದು ಅಶುಭಕರವೆಂದು ನಂಬಲಾಗುತ್ತದೆ.

ಸಾಂದರ್ಭಿಕ ಚಿತ್ರ

ಬೆಂಗಳೂರು: ನಮ್ಮ ದೈನಂದಿನ ಜೀವನದಲ್ಲಿ ಬೇಕಾದ ವಸ್ತುಗಳನ್ನು ಸ್ನೇಹಿತರು, ಕುಟುಂಬದವರು ಅಥವಾ ಪರಿಚಯಸ್ಥರಿಂದ ಪಡೆಯುವುದು ಸಹಜ. ಕೆಲವೊಮ್ಮೆ ಹಣವಾಗಿರಲಿ, ಪುಸ್ತಕವಾಗಿರಲಿ, ಬಟ್ಟೆಯಾಗಿರಲಿ – ಅಗತ್ಯ ಬಂದಾಗ ಪರಸ್ಪರ ಸಹಾಯ ಮಾಡಿಕೊಳ್ಳುತ್ತೇವೆ. ಆದರೆ ವಾಸ್ತುಶಾಸ್ತ್ರ ಮತ್ತು ಧಾರ್ಮಿಕ ನಂಬಿಕೆಗಳ ಪ್ರಕಾರ, ಕೆಲವು ವಸ್ತುಗಳನ್ನು ಯಾರಿಂದಲೂ ತೆಗೆದುಕೊಳ್ಳಬಾರದು ಮತ್ತು ಯಾರಿಗೂ ನೀಡಬಾರದು ಎಂದು ಹೇಳಲಾಗುತ್ತದೆ.

ವಾಸ್ತು ಶಾಸ್ತ್ರಗಳ ಪ್ರಕಾರ(Vastu Tips), ಕೆಲವು ವಸ್ತುಗಳು ನೇರವಾಗಿ ನಮ್ಮ ಅದೃಷ್ಟ ಮತ್ತು ಹಣೆಬರಹಕ್ಕೆ ಸಂಬಂಧಿಸಿರುತ್ತವೆ. ಅವುಗಳನ್ನು ಎರವಲು ಪಡೆದರೆ ಅಥವಾ ಕೊಟ್ಟರೆ, ಜೀವನದಲ್ಲಿ ನಕಾರಾತ್ಮಕ ಪರಿಣಾಮಗಳು ಉಂಟಾಗಬಹುದು. ಆರ್ಥಿಕ ಸಮಸ್ಯೆಗಳು, ಮನಶ್ಶಾಂತಿ ಕೊರತೆ ಹಾಗೂ ದುರ್ಬಾಗ್ಯ ಮನೆಗೆ ಪ್ರವೇಶಿಸುವ ಸಾಧ್ಯತೆ ಇರುತ್ತದೆ. ಹಾಗಾದರೆ ಆ ವಸ್ತುಗಳು ಯಾವುವು ಎಂಬುದನ್ನು ತಿಳಿದುಕೊಳ್ಳೋಣ.

ಕೈಗಡಿಯಾರ (ವಾಚ್):

ವಾಚ್ ಸಮಯದ ಪ್ರತೀಕ ಮಾತ್ರವಲ್ಲ, ವ್ಯಕ್ತಿಯ ಜೀವನದ ಹಂತಗಳನ್ನು ಸೂಚಿಸುವ ಸಂಕೇತವೂ ಹೌದು ಎಂದು ನಂಬಲಾಗಿದೆ. ಬೇರೆಯವರ ಕೈಗಡಿಯಾರವನ್ನು ಧರಿಸಿದರೆ ಅವರ ದುಷ್ಟ ಕಾಲ ನಮ್ಮ ಜೀವನದಲ್ಲೂ ಪ್ರವೇಶಿಸಬಹುದು ಎನ್ನಲಾಗುತ್ತದೆ. ಹಾಗಾಗಿ ವಾಚ್‌ ಅನ್ನು ಎರವಲು ಪಡೆಯುವುದೂ, ನಮ್ಮ ವಾಚ್‌ ಅನ್ನು ಇತರರಿಗೆ ನೀಡುವುದೂ ಶುಭಕರವಲ್ಲ.

Vastu Tips: Vastu Tips: ಈ ವಾಸ್ತು ನಿಯಮಗಳನ್ನು ಪಾಲಿಸಿದ್ರೆ ಮನೆಯಲ್ಲಿ ಅತ್ತೆ-ಸೊಸೆ ಜಗಳವೇ ಇರೊಲ್ಲ!

ಪೊರಕೆ:

ಪೊರಕೆಯನ್ನು ಲಕ್ಷ್ಮೀದೇವಿಯ ಸಂಕೇತವೆಂದು ಶಾಸ್ತ್ರಗಳು ಹೇಳುತ್ತವೆ. ಯಾರಿಗಾದರೂ ಪೊರಕೆ ನೀಡುವುದರಿಂದ ಮನೆಯ ಐಶ್ವರ್ಯ ಕಡಿಮೆಯಾಗುತ್ತದೆ ಎಂಬ ನಂಬಿಕೆ ಇದೆ. ಇದರಿಂದ ಹಣಕಾಸಿನ ಅಸ್ಥಿರತೆ ಆರಂಭವಾಗಿ, ಅನಗತ್ಯ ಖರ್ಚುಗಳು ಹೆಚ್ಚಾಗುತ್ತವೆ. ಆದ್ದರಿಂದ ಪೊರಕೆಯನ್ನು ಯಾರಿಗೂ ಕೊಡಬಾರದು, ಯಾರಿಂದಲೂ ಕೇಳಬಾರದು.

ಪೆನ್ನು (ಲೇಖನಿ):

ವಿದ್ಯಾರ್ಥಿಗಳಾಗಲಿ, ಉದ್ಯೋಗಿಗಳಾಗಲಿ – ಪೆನ್ನು ದಿನನಿತ್ಯದ ಅವಿಭಾಜ್ಯ ಅಂಗ. ಧಾರ್ಮಿಕ ನಂಬಿಕೆಯ ಪ್ರಕಾರ, ಪೆನ್ನು ವ್ಯಕ್ತಿಯ ಕರ್ಮಫಲಗಳೊಂದಿಗೆ ಸಂಬಂಧ ಹೊಂದಿದೆ. ಯಾರಿಂದ ಪೆನ್ನು ತೆಗೆದುಕೊಂಡರೂ ಕೆಲಸ ಮುಗಿದ ಕೂಡಲೇ ಹಿಂತಿರುಗಿಸಬೇಕು. ಪೆನ್ನು ನಿಮ್ಮ ಬಳಿ ಇಟ್ಟುಕೊಳ್ಳುವುದರಿಂದ ನಿಮ್ಮ ಅದೃಷ್ಟವನ್ನು ಇತರರೊಂದಿಗೆ ಹಂಚಿಕೊಂಡಂತಾಗುತ್ತದೆ ಎಂದು ಹೇಳಲಾಗುತ್ತದೆ. ಅದೇ ರೀತಿ, ನಿಮ್ಮ ಪೆನ್ನು ಯಾರಿಗಾದರೂ ಕೊಟ್ಟಿದ್ದರೆ ಮರಳಿ ಪಡೆದುಕೊಳ್ಳುವುದು ಅಗತ್ಯ.

ಉಪ್ಪು:

ಅಡುಗೆ ಮನೆಯಲ್ಲಿ ಉಪ್ಪು ಬಹುಮುಖ್ಯವಾದ ಪದಾರ್ಥ. ಆದರೆ ಶಾಸ್ತ್ರಗಳ ಪ್ರಕಾರ, ಉಪ್ಪನ್ನು ಸಾಲವಾಗಿ ಅಥವಾ ದಾನವಾಗಿ ನೀಡುವುದು ಅಶುಭ. ಉಪ್ಪು ಚಂದ್ರ ಮತ್ತು ಶುಕ್ರ ಗ್ರಹಗಳಿಗೆ ಸಂಬಂಧಿಸಿದೆ ಎಂದು ನಂಬಲಾಗುತ್ತದೆ. ಉಪ್ಪನ್ನು ಕೊಡಲು ಅಥವಾ ತೆಗೆದುಕೊಳ್ಳಲು ಆರಂಭಿಸಿದರೆ, ಈ ಗ್ರಹಗಳ ದುಷ್ಪರಿಣಾಮ ಜೀವನದಲ್ಲಿ ಕಾಣಿಸಿಕೊಳ್ಳಬಹುದು. ಆರ್ಥಿಕ ಸಂಕಷ್ಟಗಳು ಎದುರಾಗುವ ಸಾಧ್ಯತೆ ಹೆಚ್ಚುತ್ತದೆ.

ವಾಸ್ತುಶಾಸ್ತ್ರದ ಪ್ರಕಾರ ಕೆಲವು ವಸ್ತುಗಳು ಕೇವಲ ಬಳಕೆಯ ವಸ್ತುಗಳಲ್ಲ; ಅವು ನಮ್ಮ ಜೀವನದ ಶಕ್ತಿಸ್ರೋತಗಳೊಂದಿಗೆ ಸಂಪರ್ಕ ಹೊಂದಿರುತ್ತವೆ. ಹೀಗಾಗಿ ಅಜಾಗರೂಕತೆಯಿಂದ ಇವುಗಳನ್ನು ಕೊಡುವುದು ಅಥವಾ ತೆಗೆದುಕೊಳ್ಳುವುದು ನಮ್ಮ ಅದೃಷ್ಟದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ. ಈ ಕಾರಣದಿಂದಲೇ ಇಂತಹ ವಸ್ತುಗಳ ವಿಷಯದಲ್ಲಿ ಎಚ್ಚರಿಕೆ ವಹಿಸುವುದು ಉತ್ತಮ ಎಂದು ವಾಸ್ತು ಶಾಸ್ತ್ರ ಸಲಹೆ ನೀಡುತ್ತಾರೆ.