ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vastu Tips: ಮನೆಯ ಈ ದಿಕ್ಕುಗಳಲ್ಲಿ ತಪ್ಪಿಯೂ ಕಸದ ಬುಟ್ಟಿಯನ್ನು ಇಡಬೇಡಿ..!

Vastu Direction for Dustbins: ಮನೆಯಲ್ಲಿ ಕಸದ ಬುಟ್ಟಿಯನ್ನು ಸರಿಯಾದ ಸ್ಥಳದಲ್ಲಿ ಇಡುವುದು ಮುಖ್ಯ. ಕಸದ ಬುಟ್ಟಿಯನ್ನು ಸರಿಯಾದ ಸ್ಥಳದಲ್ಲಿ ಅಥವಾ ಸರಿಯಾದ ದಿಕ್ಕಿನಲ್ಲಿ ಇಡದಿದ್ದರೆ ಅದು ವಾಸ್ತು ದೋಷಕ್ಕೆ ಕಾರಣವಾಗಬಹುದು. ಇದರಿಂದ ವಾಸಸ್ಥಳದಲ್ಲಿ ವಾಸ್ತು ದೋಷ ಉಂಟಾಗಿ, ಅದು ಸಂಪತ್ತು, ಆರೋಗ್ಯ, ಮದುವೆ ಸಂಬಂಧಿತ ಸಮಸ್ಯೆಗಳಿಗೆ ಕಾರಣವಾಗಬಹುದು. ಆ ಕುರಿತು ವಿವರ ಇಲ್ಲಿದೆ.

ಕಸದ ಬುಟ್ಟಿ ಎಲ್ಲಿಡಬೇಕು?

ಬೆಂಗಳೂರು: ವಾಸ್ತು ಶಾಸ್ತ್ರ(Vastu Shastra) ಪ್ರಕಾರ, ಮನೆಯಲ್ಲಿನ ಪ್ರತಿಯೊಂದು ವಸ್ತುವಿಗೂ ತನ್ನದೇ ಆದ ಶಕ್ತಿ ಕ್ಷೇತ್ರ ಮತ್ತು ಸ್ಥಳ ಇದೆ. ಅವುಗಳನ್ನು ಸರಿಯಾದ ದಿಕ್ಕಿನಲ್ಲಿ ಇಡುವುದರಿಂದ ಮನೆಯಲ್ಲಿ ಶಾಂತಿ, ಧನಾತ್ಮಕ ಶಕ್ತಿ ಮತ್ತು ಪ್ರಗತಿ ಉಂಟಾಗುತ್ತದೆ. ಅದೇ ವಿರುದ್ಧ ದಿಕ್ಕಿನಲ್ಲಿ, ತಪ್ಪಾದ ಸ್ಥಳದಲ್ಲಿ ಇಟ್ಟರೆ ನಕಾರಾತ್ಮಕ ಶಕ್ತಿ ಹರಡಿ ಮಾನಸಿಕ ಒತ್ತಡ, ಆರ್ಥಿಕ ತೊಂದರೆ ಮತ್ತು ಅಶಾಂತಿ ಉಂಟಾಗಬಹುದು. ಹೀಗಾಗಿ ಕಸದ ಬುಟ್ಟಿ ಇಡುವುದಕ್ಕೂ ಕೆಲವು ವಾಸ್ತು ಶಾಸ್ತ್ರ ಟಿಪ್ಸ್‌ (Dust bin vastu tips) ಅನುಸರಿಸುವುದು ಸೂಕ್ತ.

ಇದೇ ರೀತಿಯಲ್ಲಿ ಮನೆಯಲ್ಲಿ ಕಸದ ಬುಟ್ಟಿ (Dustbin) ಇಡುವ ದಿಕ್ಕಿಗೂ ವಿಶೇಷವಾದ ಮಹತ್ವವಿದೆ. ಕಸದ ಬುಟ್ಟಿಯನ್ನು ಸರಿಯಾದ ಸ್ಥಳದಲ್ಲಿ ಅಥವಾ ಸರಿಯಾದ ದಿಕ್ಕಿನಲ್ಲಿ ಇಡದಿದ್ದರೆ ಅದು ವಾಸ್ತು ದೋಷಕ್ಕೆ ಕಾರಣವಾಗಬಹುದು. ಇದರಿಂದ ವಾಸಸ್ಥಳದಲ್ಲಿ ವಾಸ್ತು ದೋಷ ಉಂಟಾಗಿ, ಅದು ಸಂಪತ್ತು, ಆರೋಗ್ಯ, ಮದುವೆ ಸಂಬಂಧಿತ ಸಮಸ್ಯೆಗಳಿಗೆ ಕಾರಣವಾಗಬಹುದು.

ಹಾಗಾದರೆ ಯಾವ ದಿಕ್ಕಿನಲ್ಲಿ ಕಸದ ಬುಟ್ಟಿಗಳನ್ನು ಇರಿಸಬೇಕು..? ಎಲ್ಲಿ ಇಡಬಾರದು...? ಇಲ್ಲಿದೆ ಮಾಹಿತಿ

ನಾವು ಪ್ರತಿದಿನ ಮನೆಯನ್ನು ಸ್ವಚ್ಛವಾಗಿಡುವ ಕಸದ ಬುಟ್ಟಿಗೂ ಈ ಸಂಬಂಧಿಸಿದಂತೆ ಕೂಡಾ ಕೆಲವೊಂದು ವಾಸ್ತು ನಿಯಮವನ್ನು ಅನುಸರಿಸಬೇಕಾಗುತ್ತದೆ. ಡಸ್ಟ್ ಬಿನ್ ಅನ್ನು ಎ ಲ್ಲೆಂದರಲ್ಲಿ ಬಿಸಾಡಿದರೆ ಲಕ್ಷ್ಮಿ ದೇವಿ ಕೋಪಗೊಂಡು ಮನೆ ಬಿಡುತ್ತಾಳೆ ಎಂಬ ನಂಬಿಕೆ ಇದೆ. ಇದರಿಂದ ನಿಮಗೆ ಆರ್ಥಿಬಿನ್ಕ ಸಮಸ್ಯೆ ಎದುರಾಗಬಹುದು. ಆದ್ದರಿಂದ ಪೊರಕೆ ವಿಷಯದಲ್ಲಿ ನೀವು ಇಲ್ಲಿ ತಿಳಿಸಿರುವ ಕೆಲವೊಂದು ನಿಯಮಗಳನ್ನು ಅನುಸರಿಸಬೇಕಿದೆ.


ಈ ದಿಕ್ಕು ಸೂಕ್ತ


ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿರುವ ಕಸದ ಬುಟ್ಟಿಯು ಸರಿಯಾದ ದಿಕ್ಕಿನಲ್ಲಿರಬೇಕು, ಇಲ್ಲದಿದ್ದರೆ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ತಿಳಿಸಿದೆ. ಹಾಗಾಗಿ ವಾಸ್ತು ಶಾಸ್ತ್ರದ ಪ್ರಕಾರ ಕಸದ ಬುಟ್ಟಿಯನ್ನು ದಕ್ಷಿಣ ಅಥವಾ ನೈಋತ್ಯ ದಿಕ್ಕಿನಲ್ಲಿ ಇಡುವುದು ಉತ್ತಮ.


ಈ ಸುದ್ದಿಯನ್ನು ಓದಿ: Vastu Tips: ಬಾಡಿಗೆ ಮನೆಯಲ್ಲಿ ಮಾಡುವ ಈ ತಪ್ಪುಗಳಿಂದಲೂ ಉಂಟಾಗುತ್ತದೆ ವಾಸ್ತು ಸಮಸ್ಯೆ


ಈ ದಿಕ್ಕುಗಳಲ್ಲಿ ಇಡಬೇಡಿ

ಈಶಾನ್ಯ ದಿಕ್ಕು


ವಾಸ್ತು ಪ್ರಕಾರ ಈ ದಿಕ್ಕು ದೇವ ಶಕ್ತಿ ಮತ್ತು ಜ್ಞಾನಶಕ್ತಿಯ ಕ್ಷೇತ್ರ. ಇಲ್ಲಿ ಡಸ್ಟ್‌ಬಿನ್ ಇಡುವುದರಿಂದ ನಕಾರಾತ್ಮಕ ಶಕ್ತಿ ಹೆಚ್ಚಾಗಿ ಮನಸ್ಸಿನಲ್ಲಿ ಅಶಾಂತಿ, ಆತಂಕ ಮತ್ತು ಒತ್ತಡ ಮೂಡುತ್ತದೆ.

ಆಗ್ನೇಯ ದಿಕ್ಕು

ಕಸದ ಬುಟ್ಟಿಯನ್ನು ಈ ಭಾಗದಲ್ಲಿ ಇಡುವುದರಿಂದ ಆರ್ಥಿಕ ತೊಂದರೆಗಳು ಎದುರಾಗಬಹುದು. ಹಣದ ಸಮಸ್ಯೆ, ಅನಗತ್ಯ ಖರ್ಚು, ಹಾಗೂ ಕುಟುಂಬದಲ್ಲಿ ಕಲಹಗಳು ಹೆಚ್ಚಾಗುವ ಸಾಧ್ಯತೆ ಇದೆ.

ಪೂರ್ವ ದಿಕ್ಕು :

ಈ ದಿಕ್ಕು ಬೆಳಕು, ಅಭಿವೃದ್ಧಿ ಮತ್ತು ಹೊಸ ಅವಕಾಶಗಳ ಸಂಕೇತ. ಇಲ್ಲಿ ಡಸ್ಟ್‌ಬಿನ್ ಇಡುವುದರಿಂದ ವ್ಯಕ್ತಿಯ ಆತ್ಮವಿಶ್ವಾಸ ಕುಸಿಯಬಹುದು, ಒಂಟಿತನ ಹೆಚ್ಚಬಹುದು ಮತ್ತು ಜೀವನದಲ್ಲಿ ಅಭಿವೃದ್ಧಿ ದೂರಾಗಬಹುದು.

ಉತ್ತರ ದಿಕ್ಕು

ಈ ದಿಕ್ಕು ಸಂಪತ್ತು ಮತ್ತು ವೃತ್ತಿಜೀವನಕ್ಕೆ ಸಂಬಂಧಿಸಿದೆ. ಇಲ್ಲಿ ಕಸದ ಬುಟ್ಟಿಯನ್ನು ಇಟ್ಟರೆ ವೃತ್ತಿಜೀವನದಲ್ಲಿ ಹಿನ್ನಡೆ ಉಂಟಾಗಬಹುದು, ಉದ್ಯೋಗ ಅವಕಾಶಗಳು ಕಡಿಮೆಯಾಗಬಹುದು ಮತ್ತು ವ್ಯಾಪಾರದಲ್ಲಿ ನಷ್ಟ ಸಂಭವಿಸಬಹುದು.

ದಕ್ಷಿಣ ದಿಕ್ಕು

ಈ ದಿಕ್ಕು ಸ್ಥಿರತೆ ಮತ್ತು ಧೃಢತೆಯ ಸಂಕೇತ. ಡಸ್ಟ್‌ಬಿನ್ ಅನ್ನು ಈ ಭಾಗದಲ್ಲಿ ಇಟ್ಟರೆ ಮನೆಯಲ್ಲಿ ಭಿನ್ನಾಭಿಪ್ರಾಯ ಮೂಡಲಿದ್ದು, ಇದು ನಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ.