ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vastu tips: ಮಲಗುವ ಕೋಣೆಯಲ್ಲಿ ಈ ಒಂದು ಮೂರ್ತಿ ಇಟ್ಟರೆ ದಾಂಪತ್ಯ ಜೀವನ ಸುಖಕರವಾಗುತ್ತದೆ

ವಾಸ್ತು ಪ್ರಬಲನಾಗಲು ಮನೆಯ ವಾಸ್ತು ಸರಿ ಇರಬೇಕು. ಮನೆಯ ಯಾವ ಯಾವ ದಿಕ್ಕಿನಲ್ಲಿ ಏನೇನಿದ್ದರೆ ಮನೆಯ ವಾಸ್ತು ಬಲವಾಗಿರುತ್ತದೆ...? ವಾಸ್ತು ಸಲಹೆ ಪ್ರಕಾರ ಮನೆಯಲ್ಲಿ ಯಾವ ವಸ್ತುಗಳನ್ನು ಇಟ್ಟರೆ ಅಭಿವೃದ್ಧಿ ಆಗುತ್ತದೆ? ಎಂಬುದನ್ನು ತಿಳಿದುಕೊಳ್ಳೋಣ.

ಸಾಂದರ್ಭಿಕ ಚಿತ್ರ

ಬೆಂಗಳೂರು: ವಾಸ್ತು ಶಾಸ್ತ್ರದ(Vastu Shastra) ಪ್ರಕಾರ, ಮನೆಯಲ್ಲಿ ಕೆಲವು ವಿಶೇಷ ವಸ್ತುಗಳನ್ನು ಸರಿಯಾದ ದಿಕ್ಕಿನಲ್ಲಿ ಇರಿಸುವುದರಿಂದ ಮನೆಗೆ ಸಕಾರಾತ್ಮಕ ಶಕ್ತಿ ಹರಿದುಬರುತ್ತದೆ. ಇದರಿಂದ ಕೇವಲ ಮನಸ್ಸಿಗೆ ಶಾಂತಿ ಸಿಗುವುದಷ್ಟೇ ಅಲ್ಲ, ಸಂಪತ್ತು, ಸಂತೋಷ ಮತ್ತು ಕುಟು ಬದ ಸುಖಸಮೃದ್ಧಿಯೂ ಹೆಚ್ಚಾಗುತ್ತದೆ. ಅಲ್ಲದೇ ಮನೆಯ ಎಲ್ಲ ಸದಸ್ಯರೂ ಆರೋಗ್ಯವಂತರಾಗಿ, ವಿದ್ಯಾವಂತರಾಗಿ ಹಾಗೂ ಆರ್ಥಿಕವಾಗಿಯೂ ಪ್ರಬಲರಾಗಿರುತ್ತಾರೆ. ವಾಸ್ತು ಪ್ರಬಲನಾಗಲು ಮನೆಯ ವಾಸ್ತು ಸರಿ ಇರಬೇಕು. ಮನೆಯ ಯಾವ ಯಾವ ದಿಕ್ಕಿನಲ್ಲಿ ಏನೇನಿದ್ದರೆ ಮನೆಯ ವಾಸ್ತು ಬಲವಾಗಿರುತ್ತದೆ...? ವಾಸ್ತು ಪ್ರಕಾರ(Vastu Tips) ಮನೆಯಲ್ಲಿ ಯಾವ ವಸ್ತುಗಳನ್ನು ಇಡಬೇಕು? ಎಂಬುದನ್ನು ತಿಳಿದುಕೊಳ್ಳೋಣ.

ಕುಬೇರನ ಮೂರ್ತಿ ಅಥವಾ ಚಿತ್ರ:


ವಾಸ್ತು ಶಾಸ್ತ್ರದಲ್ಲಿ ಉತ್ತರ ದಿಕ್ಕನ್ನು ಸಂಪತ್ತಿನ ದಿಕ್ಕು ಎಂದು ಕರೆಯಲಾಗುತ್ತದೆ. ಈ ದಿಕ್ಕಿನ ಅಧಿಪತಿ ಸಂಪತ್ತಿನ ದೇವರಾದ ಕುಬೇರನು. ಆರ್ಥಿಕ ಸಂಕಷ್ಟಗಳು ಎದುರಾಗುತ್ತಿದ್ದರೆ ಅಥವಾ ಆದಾಯ ಹೆಚ್ಚಳವನ್ನು ಬಯಸುತ್ತಿದ್ದರೆ, ಮನೆಯ ಉತ್ತರ ದಿಕ್ಕಿನಲ್ಲಿ ಕುಬೇರನ ಮೂರ್ತಿ ಅಥವಾ ಚಿತ್ರವನ್ನು ಇಡುವುದು ಶುಭಕರ. ಇದರಿಂದ ಹಣಕಾಸಿನ ಅಡಚಣೆಗಳು ಕಡಿಮೆಯಾಗುತ್ತವೆ ಮತ್ತು ವ್ಯಾಪಾರ-ಉದ್ಯೋಗದಲ್ಲಿ ಅಬಿವೃದ್ಧಿ ದೊರೆಯುತ್ತವೆ ಎಂಬ ನಂಬಿಕೆ ಇದೆ.

Vastu Tips: ನಿಮ್ಮ ಮನೆಯ ಕಿಟಕಿ-ಬಾಗಿಲು ಈ ದಿಕ್ಕಿನಲ್ಲಿದೆಯೇ? ಹಾಗಾದರೆ ಕಂಟಕ ತಪ್ಪಿದ್ದಲ್ಲ!


ಶ್ರೀ ಯಂತ್ರ:

ವಾಸ್ತು ಮತ್ತು ಜ್ಯೋತಿಷ್ಯ ಎರಡರಲ್ಲೂ ಶ್ರೀ ಯಂತ್ರಕ್ಕೆ ಅಪಾರ ಮಹತ್ವವಿದೆ. ಇದು ಲಕ್ಷ್ಮೀ ದೇವಿಯ ಶಕ್ತಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಮನೆಯಲ್ಲಿ ಶ್ರೀ ಯಂತ್ರವನ್ನು ದೇವರ ಕೋಣೆಯಲ್ಲಿ ಅಥವಾ ಉತ್ತರ ದಿಕ್ಕಿನಲ್ಲಿ ಸ್ಥಾಪಿಸಿದರೆ, ಸಕಾರಾತ್ಮಕ ಶಕ್ತಿ ಹೆಚ್ಚುತ್ತದೆ ಮತ್ತು ಆರ್ಥಿಕ ಸ್ಥಿರತೆ ಲಭಿಸುತ್ತದೆ. ಪ್ರತಿದಿನ ನಿಯಮಿತವಾಗಿ ಪೂಜೆ ಮಾಡಿದರೆ, ಅದರ ಫಲಿತಾಂಶ ಇನ್ನಷ್ಟು ಪರಿಣಾಮಕಾರಿಯಾಗಿರುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.

ಆನೆಯ ಮೂರ್ತಿ:

ಆನೆ ಸಂಪತ್ತು, ಬುದ್ಧಿ ಮತ್ತು ಸಮೃದ್ಧಿಯ ಸಂಕೇತವಾಗಿದೆ. ವಾಸ್ತು ಪ್ರಕಾರ, ಹಿತ್ತಾಳೆ, ತಾಮ್ರ ಅಥವಾ ಬೆಳ್ಳಿಯಿಂದ ಮಾಡಿದ ಆನೆಯ ಮೂರ್ತಿಯನ್ನು ಮನೆಯಲ್ಲಿ ಇಡುವುದು ಅತ್ಯಂತ ಶುಭಕರ. ಇದರಿಂದ ಮನೆಗೆ ಧನಲಾಭ ಆಗಲಿದ್ದು, ಸಕಾರಾತ್ಮಕ ವಾತಾವರಣ ನಿರ್ಮವಾಗುತ್ತದೆ. ವಿಶೇಷವಾಗಿ ಮಲಗುವ ಕೋಣೆಯಲ್ಲಿ ಬೆಳ್ಳಿ ಆನೆಯ ಮೂರ್ತಿಯನ್ನು ಇಟ್ಟರೆ, ದಾಂಪತ್ಯ ಜೀವನ ಸುಖಕರವಾಗುತ್ತದೆ ಮತ್ತು ರಾಹು ಸಂಬಂಧಿತ ದುಷ್ಪರಿಣಾಮಗಳು ಕಡಿಮೆಯಾಗುತ್ತವೆ ಎಂದು ನಂಬಲಾಗಿದೆ.

ತುಳಸಿ ಗಿಡ:

ತುಳಸಿ ಗಿಡವು ಧಾರ್ಮಿಕ ಹಾಗೂ ವಾಸ್ತು ದೃಷ್ಟಿಯಿಂದ ಬಹಳ ಪವಿತ್ರವಾಗಿದೆ. ಇದು ಮನೆಯ ವಾತಾವರಣವನ್ನು ಶುದ್ಧಗೊಳಿಸಿ, ನಕಾರಾತ್ಮಕ ಶಕ್ತಿಯನ್ನು ದೂರ ಮಾಡುತ್ತದೆ. ಮನೆಯ ಉತ್ತರ ಅಥವಾ ಪೂರ್ವ ದಿಕ್ಕಿನಲ್ಲಿ ತುಳಸಿಯನ್ನು ನೆಟ್ಟರೆ, ಕುಟುಂಬದಲ್ಲಿ ಶಾಂತಿ, ಪ್ರೀತಿ ಮತ್ತು ಸಮೃದ್ಧಿ ವೃದ್ಧಿಯಾಗುತ್ತದೆ. ತುಳಸಿಯನ್ನು ಲಕ್ಷ್ಮೀ ದೇವಿಯ ವಾಸಸ್ಥಾನವೆಂದು ನಂಬಲಾಗಿರುವುದರಿಂದ, ಇದರ ಉಪಸ್ಥಿತಿ ಮನೆಯಲ್ಲಿ ಐಶ್ವರ್ಯವನ್ನು ಆಕರ್ಷಿಸುತ್ತದೆ.