ಬೆಂಗಳೂರು: ಹೆಚ್ಚಿನವರು ಮನೆಯಲ್ಲಿ (vastu tips) ರಾಮಾಯಣ, ಮಹಾಭಾರತ, ಭಗವದ್ಗೀತೆ ಸೇರಿದಂತೆ ಹಲವಾರು ಧಾರ್ಮಿಕ ಗ್ರಂಥಗಳನ್ನು (Vastu for religious books) ಇಟ್ಟುಕೊಂಡಿರುತ್ತಾರೆ. ಈ ಗ್ರಂಥಗಳನ್ನು ಎಲ್ಲಿ, ಹೇಗೆ ಇಟ್ಟುಕೊಳ್ಳಬೇಕು ಎನ್ನುವುದನ್ನು ತಿಳಿದಿರಬೇಕು. ಯಾಕೆಂದರೆ ಅತ್ಯಂತ ಪವಿತ್ರವಾದ ಈ ಗ್ರಂಥಗಳನ್ನು ಹೇಗೆ ಇಟ್ಟುಕೊಳ್ಳಬೇಕು ಎನ್ನುವುದು ಹೆಚ್ಚಿನವರಿಗೆ ಗೊತ್ತಿರುವುದಿಲ್ಲ. ಹೀಗಾಗಿ ಕೆಲವೊಂದು ಸಮಸ್ಯೆಗಳನ್ನು ಆಹ್ವಾನಿಸಿಕೊಳ್ಳುತ್ತಾರೆ. ಮನೆಯ ಪೂಜಾ ಕೊಠಡಿ ಅಥವಾ ದೇವಾಲಯದಲ್ಲಿ ಧಾರ್ಮಿಕ ಗ್ರಂಥಗಳನ್ನು (Religious books) ಸರಿಯಾದ ದಿಕ್ಕಿನಲ್ಲಿ ಇಡುವುದು ಬಹುಮುಖ್ಯ ಎನ್ನುತ್ತಾರೆ ವಾಸ್ತು ತಜ್ಞರು.
ಧಾರ್ಮಿಕ ಗ್ರಂಥಗಳನ್ನು ಮನೆಯ ದೇವರ ಕೋಣೆಯಲ್ಲಿ ಇಡುವುದು ವಿಶೇಷ ಪ್ರಾಮುಖ್ಯತೆಯನ್ನು ಹೊಂದಿದೆ. ವಾಸ್ತು ಶಾಸ್ತ್ರದ ಪ್ರಕಾರ ಈ ಧಾರ್ಮಿಕ ಗ್ರಂಥಗಳನ್ನು ಈಶಾನ್ಯ ಅಥವಾ ಪೂರ್ವ ದಿಕ್ಕಿನಲ್ಲಿ ಇರಿಸಬೇಕು. ಇದು ಮನೆಯಲ್ಲಿ ಸಕಾರಾತ್ಮಕ ಶಕ್ತಿಯ ಹರಿವನ್ನು ಆಹ್ವಾನಿಸುತ್ತದೆ.
ಧಾರ್ಮಿಕ ಗ್ರಂಥಗಳನ್ನು ಮನೆಯ ದೇವರ ಕೊಠಡಿಯಲ್ಲಿ ಈಶಾನ್ಯ ಅಥವಾ ಪೂರ್ವ ದಿಕ್ಕಿನಲ್ಲಿ ಇರಿಸಿದರೆ ಮನೆಯ ವಾತಾವರಣ ಪವಿತ್ರವಾಗಿರುತ್ತದೆ. ಇದು ನಂಬಿಕೆಯನ್ನು ಆಳಗೊಳಿಸುವುದಲ್ಲದೆ ಮನೆಯ ಸದಸ್ಯರ ಮಾನಸಿಕ ಶಾಂತಿಯನ್ನು ಉತ್ತೇಜಿಸುತ್ತದೆ. ಮನೆಯಲ್ಲಿ ಆಧ್ಯಾತ್ಮಿಕ ಬೆಳವಣಿಗೆಯನ್ನು ವೃದ್ಧಿಸುತ್ತದೆ.

ವಾಸ್ತು ಶಾಸ್ತ್ರದ ಪ್ರಕಾರ ಈಶಾನ್ಯ ದಿಕ್ಕನ್ನು ದೇವರ ಸ್ಥಳವೆಂದು ಪರಿಗಣಿಸಲಾಗುತ್ತದೆ. ಈ ಕಾರಣಕ್ಕಾಗಿ ಪೂಜಾ ಸ್ಥಳ ಮತ್ತು ಧಾರ್ಮಿಕ ಗ್ರಂಥಗಳನ್ನು ಈ ದಿಕ್ಕಿನಲ್ಲಿ ಇಡಲು ಸೂಚಿಸಲಾಗುತ್ತದೆ.
ಪೂರ್ವ ದಿಕ್ಕನ್ನು ಸೂರ್ಯನ ದಿಕ್ಕು ಎಂದು ಪರಿಗಣಿಸಲಾಗುತ್ತದೆ. ಇದು ಜ್ಞಾನ ಮತ್ತು ಶಕ್ತಿಯ ಸಂಕೇತವಾಗಿದೆ. ಧಾರ್ಮಿಕ ಪುಸ್ತಕಗಳನ್ನು ಪೂರ್ವ ದಿಕ್ಕಿನಲ್ಲಿ ಇಡುವುದರಿಂದ ಮನೆಯಲ್ಲಿ ಸಕಾರಾತ್ಮಕತೆ ಹೆಚ್ಚಾಗುತ್ತದೆ. ಕುಟುಂಬ ಸದಸ್ಯರಲ್ಲಿ ಜ್ಞಾನ ವೃದ್ಧಿಯಾಗುತ್ತದೆ. ಈ ದಿಕ್ಕು ಮಾನಸಿಕ ಏಕಾಗ್ರತೆಯನ್ನು ಬಲಪಡಿಸುತ್ತದೆ. ಪೂಜೆ ಮತ್ತು ಧ್ಯಾನದಲ್ಲಿ ಹೆಚ್ಚಿನ ಶಾಂತಿ ಕಾಪಾಡಲು ಸಹಾಯ ಮಾಡುತ್ತದೆ.
ಇದನ್ನೂ ಓದಿ: Vastu Tips: ಮನೆಯ ಈ ಭಾಗದಲ್ಲಿರಲಿ ಗೀಸರ್, ಮೈಕ್ರೋವೇವ್
ಧಾರ್ಮಿಕ ಪುಸ್ತಕಗಳನ್ನು ಯಾವಾಗಲೂ ಸ್ವಚ್ಛವಾದ ಸ್ಥಳದಲ್ಲಿ ಇರಿಸಬೇಕು. ಪೂಜಾ ಕೋಣೆಯಲ್ಲಿ ನೆಲದ ಮೇಲೆ ಇಡುವ ಬದಲು ಮರದ ಕಪಾಟು ಅಥವಾ ಸ್ಟೂಲ್ ಮೇಲೆ ಇದನ್ನು ಇಡುವುದು ಸೂಕ್ತವಾಗಿದೆ.
ಧಾರ್ಮಿಕ ಪುಸ್ತಕಗಳನ್ನು ಭಕ್ತಿ ಮತ್ತು ಗೌರವದಿಂದ ಇರಿಸಬೇಕು. ಹಾಗಿದ್ದರೆ ಮಾತ್ರ ಮನೆಯಲ್ಲಿ ಸಾಮರಸ್ಯ, ಶಾಂತಿ ಮತ್ತು ಧಾರ್ಮಿಕ ನಂಬಿಕೆ ವೃದ್ಧಿಯಾಗುತ್ತದೆ ಎನ್ನುತ್ತಾರೆ ವಾಸ್ತು ತಜ್ಞರು.