ಬೆಂಗಳೂರು: ಪ್ರತಿಯೊಬ್ಬ ಜೀವನದಲ್ಲಿ ವಾಸ್ತು ಶಾಸ್ತ್ರ(Vastu Shastra) ಮುಖ್ಯ ಪಾತ್ರ ವಹಿಸುತ್ತದೆ. ವಾಸ್ತು ನಿಯಮ - ಸಲಹೆಗಳನ್ನು(Vastu Tips) ಸರಿಯಾಗಿ ಪಾಲಿಸುವ ಪ್ರತಿಯೊಬ್ಬ ವ್ಯಕ್ತಿಯ ಜೀವನ ಸಂತೋಷದಿಂದ ಕೂಡಿರುತ್ತದೆ. ಅಷ್ಟೇ ಅಲ್ಲದೇ ವ್ಯಕ್ತಿಯ ಆರ್ಥಿಕ ಜೀವನವನ್ನೂ ಸುಖಮವಾಗಿರಿಸಲು ವಾಸ್ತು ಶಾಸ್ತ್ರದಲ್ಲಿ ಕೆಲ ನಿಯಮಗಳಿದ್ದು, ಅವುಗಳನ್ನು ಪಾಲಿಸಿದಲ್ಲಿ ಹಣವನ್ನು ಆಕರ್ಷಿಸಬಹುದು ಎನ್ನುತ್ತಾರೆ ವಾಸ್ತು ಶಾಸ್ತ್ರಜ್ಞರು.
ಹಣ ಎಂದರೆ ಸಾಕ್ಷಾತ್ ಲಕ್ಷ್ಮೀ ದೇವಿಯ ಸ್ವರೂಪ ಎಂದೇ ಪರಿಸಗಣಿಸಲಾಗುತ್ತದೆ. ಆದ್ದರಿಂದ ಹಣವನ್ನು ಅತ್ಯಂತ ಗೌರವದಿಂದ ಕಾಣಬೇಕು. ಹಣಕ್ಕೆ ಅವಮಾನ ಮಾಡುವ ಮನೆಯಲ್ಲಿ ಲಕ್ಷ್ಮೀ ದೇವಿ ನಿಲ್ಲುವುದಿಲ್ಲ, ಅಲ್ಲದೇ ಆ ಮನೆಗೆ ದಾರಿದ್ರ್ಯ ಅಂಟುಕೊಳ್ಳುತ್ತದೆ. ತಾಯಿ ಲಕ್ಷ್ಮೀಯ ಸ್ವರೂಪವಾದ ಹಣವನ್ನು ಇಡುವ ಸ್ಥಳದ ಬಗ್ಗೆಯೂ ವಾಸ್ತು ಶಾಸ್ತ್ರದಲ್ಲಿ ವಿವರವಾಗಿ ಹೇಳಲಾಗಿದೆ. ಕೆಲವೊಮ್ಮೆ ಅರಿಯದೇ ನಾವು ಹಣವನ್ನು ಇಡಬಾರದ ಜಾಗದಲ್ಲಿ ಇಟ್ಟು, ಅದರಿಂದ ನಾನಾ ಸಮಸ್ಯೆಗಳನ್ನು ಅನುಭವಿಸಬೇಕಾಗುತ್ತದೆ.
ಹಾಗಾದರೆ ಬನ್ನಿ, ವಾಸ್ತು ಶಾಸ್ತ್ರದ ಪ್ರಕಾರ ಯಾವ ಸ್ಥಳಗಳಲ್ಲಿ ಹಣವನ್ನು ಇಡಬಾರದು? ಅದರಿಂದಾಗುವ ಸಮಸ್ಯೆಗಳೇನು? ಅದಕ್ಕೆ ಪರಿಹಾರಗಳೇನು ಎಂದು ತಿಳಿಯೋಣ.
ಮೊಬೈಲ್ ಕವರ್‌ನಲ್ಲಿ ಹಣ ಇಡಬೇಡಿ
ಇಂದು ಸಾಕಷ್ಟು ಜನರು ಮೊಬೈಲ್ ಕವರ್‌ನಲ್ಲಿ ಹಣ ಇಡುತ್ತಾರೆ. ವಾಸ್ತು ಶಾಸ್ತ್ರದ ಪ್ರಕಾರ ಇದು ಅಶುಭ. ಸಾಮಾನ್ಯವಾಗಿ ಮೊಬೈಲ್ ಫೋನ್ ಇಡಲು ಪ್ರತ್ಯೇಕ ಸ್ಥಳಗಳಿರುವುದಿಲ್ಲ. ಕೊಳಕಾದ ಕೈಯಿಂದ ಮೊಬೈಲ್‌ಅನ್ನು ನಾವು ಸ್ಪರ್ಶಿಸಬಹುದು ಅಥವಾ ಕೊಳಕಾದ ಸ್ಥಳದಲ್ಲಿ ಇಡಬಹುದು. ಇದರಿಂದ ಹಣಕ್ಕೆ ಅಗೌರವ ತೋರಿದಂತಾಗುತ್ತದೆ. ಇದರಿಂದಾಗಿ ಮನೆಯಲ್ಲಿ ಹಣಕಾಸಿನ ಸಮಸ್ಯೆಗಳು ಎದುರಾಗಬಹುದು. ನೀವು ಅರಿಯದೇ ಈ ತಪ್ಪನ್ನು ಮಾಡುತ್ತಿದ್ದರೆ ಇದನ್ನು ಇಂದಿಗೆ ನಿಲ್ಲಿಸಿಬಿಡಿ ಮತ್ತು ಪ್ರತೀ ಶುಕ್ರವಾರ ಕುಬೇರನನ್ನು ಪೂಜಿಸಿ. ಇದರಿಂದ ಹಣಕಾಸಿ ಸಮಸ್ಯೆಗಳು ದೂರವಾಗುತ್ತವೆ.
ಸ್ನಾನದ ಕೋಣೆಯಲ್ಲಿ ಹಣ ಇಡುವುದು ಆಶುಭ
ಸಾಮಾನ್ಯವಾಗಿ ಕೆಲವರು ಸ್ನಾನಕ್ಕೆಂದು ಹೋದಾಗ ಅಲ್ಲಿಯೇ ತಮ್ಮ ಪರ್ಸ್, ಜೇಬಿನಲ್ಲಿದ್ದ ಹಣವನ್ನು ಇಟ್ಟು ಬಿಡುತ್ತಾರೆ. ವಾಸ್ತು ಶಾಸ್ತ್ರದ ಪ್ರಕಾರ ಇದನ್ನು ಹಣಕ್ಕೆ ಮಾಡುವ ಅವಮಾನ. ಕೆಲವರು ಮನೆ ನಿರ್ಮಿಸಾವಗ ಸ್ನಾನದ ಕೋಣೆಯನ್ನು ಅಶುಭ ದಿಕ್ಕಿನಲ್ಲಿ ನಿರ್ಮಿಸಿರುತ್ತಾರೆ. ಆ ಸ್ಥಳದಲ್ಲಿ ಹಣ ಇಟ್ಟರೆ, ನಿಮ್ಮ ಮನೆಯಲ್ಲಿ ಕ್ರಮೇಣ ಹಣಕಾಸಿನ ತೊಂದರೆಗಳು ಎದುರಾಗುತ್ತವೆ. ಅಲ್ಲದೇ ಇದು ಮನೆಗೆ ದಾರಿದ್ರ್ಯವನ್ನು ತರುತ್ತದೆ. ಅರಿಯದೇ ನೀವು ಈ ತಪ್ಪು ಮಾಡುತ್ತಿದ್ದರೆ ಅದನ್ನು ಇಂದಿಗೆ ನಿಲ್ಲಿಸಿ ಮತ್ತು ನಿಮ್ಮ ಈ ತಪ್ಪಿಗಾಗಿ ಪ್ರತೀ ಶುಕ್ರವಾರ ಲಕ್ಷ್ಮೀ ದೇವಿ ದೇವಸ್ಥಾನಕ್ಕೆ ತೆರಳಿ 5 ವಾರ ಪೂಜೆ ಸಲ್ಲಿಸಿ, ತಪ್ಪಿಗೆ ಕ್ಷಮೆಯಾಚಿಸಿ.
ಶೌಚಾಲಯದಲ್ಲಿ ಎಂದಿಗೂ ಹಣ ಇಡಬೇಡಿ
ಶೌಚಾಲಯದಲ್ಲೂ ಕೆಲವು ಹಣ ಇಡುವುದನ್ನು ರೂಢಿಸಿಕೊಂಡಿರುತ್ತಾರೆ. ವಾಸ್ತು ಶಾಸ್ತ್ರದ ಪ್ರಕಾರ ಇದು ಅಮಂಗಳಕರ. ಹೀಗೆ ಮಾಡುವುದರಿಂದ ಮನೆಯಲ್ಲಿ ಹಣಕಾಸಿನ ತೊಂದರೆಗಳು ಹೆಚ್ಚಾಗುತ್ತವೆ. ಉದ್ಯಮಿಗಳಿಗೆ ನಷ್ಟವಾಗಬಹುದು. ವ್ಯಾಪಾರಿಗಳಿಗೆ ಆದಾಯ ಕೈತಪ್ಪುವ ಸಾಧ್ಯತೆಗಳು ಹೆಚ್ಚು. ನೀವೂ ಈ ತಪ್ಪು ಮಾಡುತ್ತಿದ್ದರೆ ಅದನ್ನು ಇಂದೇ ನಿಲ್ಲಿಸಿ. ಮತ್ತು ಮನೆಯಲ್ಲಿ ಪೂಜೆ ಮಾಡುವಾಗ ನಾಣ್ಯಗಳನ್ನು ಅರಿಶಿಣದ ನೀರಿನಲ್ಲಿ ಸ್ವಚ್ಚಗೊಳಿಸಿ ಪೂಜಿಸಿ, ಅರಿಯದೇ ಮಾಡಿದ ತಪ್ಪಿಗೆ ಕ್ಷಮೆಯಾಚಿಸಿ. ಇದರಿಂದ ನಿಮ್ಮ ಹಣಕಾಸಿನ ಸಮಸ್ಯೆಗಳು ದೂರವಾಗುತ್ತವೆ.
ಕುಪ್ಪಸದಲ್ಲಿ ಹಣ ಇಟ್ಟುಕೊಳ್ಳುವುದು ಶುಭವಲ್ಲ
ಕೆಲ ಮಹಿಳೆಯರಿಗೆ ಕುಪ್ಪಸದಲ್ಲಿ ಹಣವನ್ನು ಇಟ್ಟುಕೊಳ್ಳುವ ಹವ್ಯಾಸ ರೂಢಿಸಿಕೊಂಡಿರುತ್ತಾರೆ. ಹಣವನ್ನು ದೇಹಕ್ಕೆ ನೇರವಾಗಿ ತಾಗುವಂತೆ ಇಟ್ಟುಕೊಳ್ಳುವುದು ಶುಭವಲ್ಲ. ದೇಹದ ಬೆವರು ಹಣಕ್ಕೆ ತಾಗುವುದರಿಂದ ಲಕ್ಷ್ಮೀ ದೇವಿಯ ಅವಕೃಪೆಗೆ ಕಾರಣವಾಗಬಹುದು. ಇದರಿಂದಾಗಿ ನೀವು ಸಾಕಷ್ಟು ಹಣಕಾಸಿನ ತೊಂದರೆಗಳನ್ನು ಅನುಭವಿಸಬೇಕಾಗಬಹುದು. ವಾಸ್ತು ಶಾಸ್ತ್ರದ ಪ್ರಕಾರ ನಮ್ಮ ದೇಹ ಎಷ್ಟೇ ಶುಭವಾಗಿದ್ದರೂ ಕೂಡ ಹಣವನ್ನು ದೇಹಕ್ಕೆ ನೇರವಾಗಿ ತಾಗುವಂತೆ ಇಟ್ಟುಕೊಳ್ಳುವುದು ಒಳ್ಳೆಯದಲ್ಲ.