ಬೆಂಗಳೂರು: ಮನೆಯಲ್ಲಿ ಮೀನುಗಳನ್ನು (Vastu about fish) ಸಾಕುವುದೆಂದರೆ ಅದೃಷ್ಟವನ್ನು ಆಹ್ವಾನಿಸಿದಂತೆ ಎನ್ನುತ್ತದೆ ವಾಸ್ತು (Vastu tips) ಶಾಸ್ತ್ರ. ಅದರಲ್ಲೂ ನಾವು ಅಕ್ವೇರಿಯಂನಲ್ಲಿ (Vastu for Aquarium) ಮೀನುಗಳನ್ನು ಇಡುವಾಗ ಕೆಲವೊಂದು ಅಂಶಗಳನ್ನು ಪರಿಗಣಿಸಿದರೆ ಅದು ಸಕಾರಾತ್ಮಕ ಶಕ್ತಿಗೆ ಅಹ್ವಾನ ನೀಡುತ್ತದೆ. ಇದರಿಂದ ಮನೆಯಲ್ಲಿ ಸುಖ, ಶಾಂತಿ, ಸಮೃದ್ಧಿಯಾಗುತ್ತದೆ. ಅದೃಷ್ಟ ಮತ್ತು ಸಕಾರಾತ್ಮಕ ಶಕ್ತಿಯ ಸಂಕೇತವಾಗಿ ಗೋಲ್ಡ್ ಫಿಷ್ (gold fish) ಅನ್ನು ಪರಿಗಣಿಸಲಾಗುತ್ತದೆ. ಇದನ್ನು ಅಕ್ವೇರಿಯಂನಲ್ಲಿ ಇಡುವುದರಿಂದ ಸಮೃದ್ಧಿ ಮತ್ತು ಸಂತೋಷದ ಜೊತೆಗೆ ಪರಿಸರವೂ ಶುದ್ಧವಾಗುತ್ತದೆ. ಮಾನಸಿಕ ಶಾಂತಿ ಮತ್ತು ಸಕಾರಾತ್ಮಕ ಶಕ್ತಿಯೂ ವೃದ್ಧಿಯಾಗುತ್ತದೆ ಎನ್ನುತ್ತಾರೆ ವಾಸ್ತು ತಜ್ಞರು.
ಮನೆಯ ಅಕ್ವೇರಿಯಂನಲ್ಲಿ ಮೀನುಗಳನ್ನು ಇಡುವಾಗ 9 ಚಿನ್ನದ ವರ್ಣದ ಮೀನು ಮತ್ತು ಒಂದು ಕಪ್ಪು ಮೀನನ್ನು ಇಡುವುದು ಶುಭವೆಂದು ಪರಿಗಣಿಸಲಾಗಿದೆ. ಫೆಂಗ್ ಶೂಯಿ ಪ್ರಕಾರ ಈ ರೀತಿಯಾಗಿ ಮೀನುಗಳನ್ನು ಮನೆಯ ಅಕ್ವೇರಿಯಂನಲ್ಲಿ ಇರಿಸಿದರೆ ಇದು ಅತ್ಯಂತ ಶುಭವೆಂದು ಪರಿಗಣಿಸಲಾಗುತ್ತದೆ.
ಗೋಲ್ಡ್ ಫಿಷ್ ಸಂಪತ್ತು, ಯಶಸ್ಸು ಮತ್ತು ಅದೃಷ್ಟದ ಸಂಕೇತವಾದರೆ ಬ್ಲ್ಯಾಕ್ ಫಿಷ್ ನಕಾರಾತ್ಮಕ ಶಕ್ತಿಯನ್ನು ಹೀರಿಕೊಳ್ಳಲು ಕೆಲಸ ಮಾಡುತ್ತದೆ. ಈ ಸಂಯೋಜನೆಯು ಮನೆಯ ಶಕ್ತಿಗಳಲ್ಲಿ ಸಮತೋಲನವನ್ನು ಸಾಧಿಸಿ ಸಾಮರಸ್ಯವನ್ನು ವೃದ್ಧಿಗೊಳಿಸಲು ಸಹಾಯ ಮಾಡುತ್ತದೆ. ಮನೆಗೆ ಪ್ರವೇಶಿಸುವ ನಕಾರಾತ್ಮಕ ಶಕ್ತಿಯನ್ನು ತೊಡೆದುಹಾಕಲು ಬ್ಲ್ಯಾಕ್ ಫಿಷ್ ಸಹಾಯಕವಾಗಿದೆ. ಒಂದು ವೇಳೆ ಇದ್ದಕ್ಕಿದ್ದಂತೆ ಅಕ್ವೇರಿಯಂನಲ್ಲಿರುವ ಬ್ಲ್ಯಾಕ್ ಫಿಷ್ ಸತ್ತರೆ ಅದು ಮನೆಯ ಸದಸ್ಯರ ಮೇಲೆ ಬರುವ ವಿಪತ್ತನ್ನು ತನ್ನ ಮೇಲೆ ತೆಗೆದುಕೊಂಡಂತೆ ಎನ್ನುತ್ತದೆ ವಾಸ್ತು ಶಾಸ್ತ್ರ.
ಮನೆಯಲ್ಲಿ ಅಕ್ವೇರಿಯಂ ಅನ್ನು ಉತ್ತರ ಅಥವಾ ಪೂರ್ವ ದಿಕ್ಕಿನಲ್ಲಿ ಇಡುವುದು ಶುಭವಾಗಿದೆ. ಇದರಿಂದ ಕುಟುಂಬದಲ್ಲಿ ಸಂಪತ್ತಿನ ವೃದ್ಧಿಯಾಗುತ್ತದೆ. ಅಕ್ವೇರಿಯಂನಲ್ಲಿರುವ ಮೀನುಗಳನ್ನು ನೋಡುತ್ತಿದ್ದರೆ ಮಾನಸಿಕ ಒತ್ತಡ ಕಡಿಮೆಯಾಗುತ್ತದೆ. ಇದು ಕುಟುಂಬ ಸದಸ್ಯರಲ್ಲಿ ಸಕಾರಾತ್ಮಕತೆಯ ಭಾವನೆಯನ್ನು ಉತ್ತೇಜಿಸುತ್ತದೆ.

ಅದೃಷ್ಟಕ್ಕೆ ಅಹ್ವಾನ ಕೊಡುವ ಮೀನುಗಳು
ಡ್ರ್ಯಾಗನ್ ಮೀನು ಎಂದೇ ಕರೆಯಲ್ಪಡುವ ಅರೋವಾನಾ ಸಂಪತ್ತು, ಶಕ್ತಿ ಮತ್ತು ಅದೃಷ್ಟವನ್ನು ಸಂಕೇತಿಸುತ್ತದೆ. ಕೋಯಿ ಮೀನು ಅದೃಷ್ಟ, ಪರಿಶ್ರಮ ಮತ್ತು ಶಕ್ತಿಯ ಸಂಕೇತವಾಗಿದೆ. ಫ್ಲವರ್‌ಹಾರ್ನ್ ಇದು ಅದೃಷ್ಟ ಮತ್ತು ಪ್ರೀತಿಯನ್ನು ತರುತ್ತದೆ ಮಾತ್ರವಲ್ಲ ಸಂಪತ್ತನ್ನು ಆಕರ್ಷಿಸುತ್ತದೆ ಎನ್ನಲಾಗುತ್ತದೆ.
ಇದನ್ನೂ ಓದಿ: Vastu Tips: ಹೊಸ ಫ್ಲಾಟ್ ಖರೀದಿ ಯೋಚನೆಯೇ? ಹಾಗಿದ್ದರೆ ಇವು ತಿಳಿದಿರಲಿ
ನಕಾರಾತ್ಮಕ ಶಕ್ತಿಯನ್ನು ಹೀರಿಕೊಳ್ಳುವ ಬ್ಲ್ಯಾಕ್‌ಮೂರ್ ಅನ್ನು ಅದೃಷ್ಟದ ರಕ್ಷಕ ಎಂದು ಪರಿಗಣಿಸಲಾಗುತ್ತದೆ. ಡಿಸ್ಕಸ್ ಮೀನು ಶಕ್ತಿ ಮತ್ತು ಅದೃಷ್ಟದ ಸಂಕೇತವಾಗಿದ್ದು, ಇದು ಶಾಂತಿ ಮತ್ತು ಸಕಾರಾತ್ಮಕತೆಯನ್ನು ತರುತ್ತದೆ. ಪ್ಯಾರಡೈಸ್ ಮೀನು ಶಾಂತಿ ಮತ್ತು ಸಾಮರಸ್ಯ, ಗಪ್ಪಿ, ಏಂಜಲ್ ಮೀನು ಶಾಂತಿ ಮತ್ತು ಸಮೃದ್ಧಿಗೆ ಅಹ್ವಾನ ನೀಡುತ್ತದೆ. ಕ್ಲೌನ್ ಲೋಚ್‌ಗಳು ಸಂತೋಷ ಮತ್ತು ಸಕಾರಾತ್ಮಕತೆಯನ್ನು ಆಹ್ವಾನಿಸಿದರೆ ಕೋರಿ ಕ್ಯಾಟ್‌ಫಿಶ್ ಸ್ಥಿರತೆಯನ್ನು ಆಹ್ವಾನಿಸುತ್ತದೆ ಎನ್ನುತ್ತದೆ ವಾಸ್ತು ಶಾಸ್ತ್ರ.