ಬೆಂಗಳೂರು: ಹೊಸ ಮನೆ ಕಟ್ಟುವಾಗ ಅಥವಾ ಹೊಸ ಮನೆ ಖರೀದಿಸುವಾಗ ವಾಸ್ತು ನಿಯಮಗಳನ್ನು ಪಾಲಿಸುವುದು ಅತೀ ಮುಖ್ಯ. ಏಕೆಂದರೆ ಇದು ಮನೆಯಲ್ಲಿ ಸಕಾರಾತ್ಮಕ ಶಕ್ತಿ, ಶಾಂತಿ, ಸಮೃದ್ಧಿ ಮತ್ತು ಉತ್ತಮ ಆರೋಗ್ಯವನ್ನು ತರುತ್ತದೆ, ನಕಾರಾತ್ಮಕತೆಯನ್ನು ಕಡಿಮೆ ಮಾಡಿ ಕುಟುಂಬ ಸದಸ್ಯರ ನಡುವೆ ಸಾಮರಸ್ಯ ಮೂಡಿಸುತ್ತದೆ. ಆದ್ದರಿಂದ ಹೊಸ ಮನೆ ಖರೀದಿಸಲು ಯೋಜಿಸುತ್ತಿದ್ದರೆ ಅಥವಾ ಹೊಸ ಮನೆ ಕಟ್ಟುತ್ತಿದ್ದರೆ ತಪ್ಪದೇ ಈ ವಾಸ್ತು ನಿಯಮಗಳನ್ನು (Vastu Tips)ಪಾಲಿಸಿ
ಮನೆಯ ದಿಕ್ಕು
ಉತ್ತರ, ಪೂರ್ವ ಅಥವಾ ಈಶಾನ್ಯ ದಿಕ್ಕಿಗೆ ಮುಖವಾಗಿ ಮನೆಯ ದ್ವಾರ ಇರಲಿ. ವಾಸ್ತು ಶಾಸ್ತ್ರದ ಪ್ರಕಾರ, ಮನೆಯ ಪ್ರವೇಶವು ಜನರಿಗೆ ಮಾತ್ರವಲ್ಲದೇ, ಶಕ್ತಿಯ ಪ್ರವೇಶಕ್ಕೂ ಆಗಿರುತ್ತದೆ. ಮುಖ್ಯ ಬಾಗಿಲಿನ ಮೂಲಕವೇ ಸಂಚಾರ ವಿರುತ್ತದೆ. ಮುಖ್ಯ ದ್ವಾರವನ್ನು ಹೊಂದಲು ಅನುಕೂಲಕರವಾದ ದಿಕ್ಕುಗಳು ಉತ್ತರ, ಪೂರ್ವ ಅಥವಾ ಈಶಾನ್ಯ. ನಿಮ್ಮ ಹೊಸ ಮನೆಯನ್ನು ಖರೀದಿಸುವ ಮೊದಲು ಇದನ್ನು ಪರಿಶೀಲಿಸಿ, ಸರಿಯಾಗಿದೆ ಎಂದು ಖಚಿತಪಡಿಸಿಕೊಳ್ಳಿ.
ಕೋಣೆಗಳ ದಿಕ್ಕು
ವಾಸ್ತು ಪ್ರಕಾರ ಮನೆಯ ಪ್ರತಿಯೊಂದು ಕೋಣೆಯನ್ನೂ ನಿರ್ದಿಷ್ಟ ದಿಕ್ಕಿನಲ್ಲಿ ನಿರ್ಮಿಸಬೇಕು. ನಿಮ್ಮ ಮನೆಯನ್ನು ಖರೀದಿಸುವಾಗ ಮನೆಯ ದಿಕ್ಕುಗಳಿಗಾಗಿ ಈ ವಾಸ್ತುವನ್ನು ಪರಿಗಣನೆಗೆ ತೆಗೆದುಕೊಳ್ಳುವುದು ಉತ್ತಮ. ಅಡುಗೆ ಮನೆಯು ಮನೆಯ ಆಗ್ನೇಯ ದಿಕ್ಕಿನಲ್ಲಿ ಇರಬೇಕು. ಉತ್ತರ ದಿಕ್ಕಿನಲ್ಲಿ ಅಡುಗೆ ಮನೆ ನಿರ್ಮಿಸಿರುವ ಮನೆಯನ್ನು ಎಂದಿಗೂ ಖರೀದಿಸಬೇಡಿ. ಮಾಸ್ಟರ್ ಬೆಡ್‌ರೂಮ್ ಅಥವಾ ನಿಮ್ಮ ಮಕ್ಕಳ ಕೋಣೆಯು ಮನೆಯ ನೈಋತ್ಯ ದಿಕ್ಕಿನಲ್ಲಿ ಇರಬೇಕು. ಮನಸ್ಸಿನ ಶಾಂತಿಗಾಗಿ ನಿಮ್ಮ ಮಕ್ಕಳು ದಕ್ಷಿಣ ಅಥವಾ ಪೂರ್ವಕ್ಕೆ ತಲೆಯಿಟ್ಟು ಮಲಗುವಂತೆ ನೋಡಿಕೊಳ್ಳಿ. ಮನೆಗೆ ವಾಸ್ತು ಪ್ರಕಾರ, ಶೌಚಾಲಯ / ಸ್ನಾನಗೃಹವು ಪಶ್ಚಿಮ ಅಥವಾ ವಾಯುವ್ಯ ದಿಕ್ಕಿನಲ್ಲಿರಬೇಕು.
ಕೋಣೆಯ ಆಕಾರ
ವಾಸ್ತು ತಜ್ಞರು ಪ್ರಕಾರ ಮನೆಯಲ್ಲಿರುವ ಕೋಣೆಗಳಿಗೆ ನಿರ್ದಿಷ್ಟ ಮೂಲೆಗಳಿರಬೇಕು. ವೃತ್ತಾಕಾರದ ಕೋಣೆಗಳು ಹೆಚ್ಚು ಸ್ಟೈಲಿಶ್ ಮತ್ತು ಟ್ರೆಂಡಿಯಾಗಿ ಕಾಣುತ್ತವೆಯಾದರೂ, ಅವು ಮನೆಯ ವಾಸ್ತುವನ್ನು ಒಳಗೊಂಡಿರುವುದಿಲ್ಲ. ನಿಮ್ಮ ಕೊಠಡಿಗಳು ಸರಳ ರೇಖೆಗಳನ್ನು ಅನುಸರಿಸುತ್ತವೆ ಮತ್ತು ಚದರ ಅಥವಾ ಆಯತಾಕಾರದಲ್ಲಿರುವುದು ಅವಶ್ಯಕ.
Vastu Tips: ನಿಮ್ಮ ಮನೆಯ ಉತ್ತರ ದಿಕ್ಕಿನಲ್ಲಿ ಈ ವಸ್ತುಗಳನ್ನು ಇಟ್ಟಿದ್ದೀರಾ? ಇಂದೇ ತೆಗೆದುಬಿಡಿ
ಓವರ್ ಹೆಡ್ ವಾಟರ್ ಟ್ಯಾಂಕ್ ಅನ್ನು ಇಲ್ಲಿ ಅಳವಡಿಸಿ
ನೀವು ಓವರಹೆಡ್ ಟ್ಯಾಂಕ್ ಅನ್ನು ಮನೆಯ ಪಶ್ಚಿಮ ಅಥವಾ ನೈಋತ್ಯ ದಿಕ್ಕಿನಲ್ಲಿ ಇರಿಸಬೇಕು. ನೀವು ಅದನ್ನು ನೈಋತ್ಯ ದಿಕ್ಕಿನಲ್ಲಿ ಇರಿಸಿದ್ದರೆ, ಅದು ಮನೆಯ ಮೇಲ್ಭಾಗದ ಚಪ್ಪಡಿಗಿಂತ ಎರಡು ಅಡಿ ಮೇಲಕ್ಕೆ ಇರಿಸಿದ್ದೀರಾ ಎಂಬುದನ್ನು ಖಚಿತಪಡಿಸಿಕೊಳ್ಳಿ.
ವಾತಾಯನವನ್ನು ಮರೆಯಬೇಡಿ
ವಾಸ್ತು ಪ್ರಕಾರ ಮನೆಯಲ್ಲಿ ಧನಾತ್ಮಕ ಶಕ್ತಿ ನೆಲೆಸಬೇಕೆಂದರೆ ವಾತಾಯನ, ಅಂದರೆ ವೆಂಟಿಲೇಷನ್ ಬಹಳ ಮುಖ್ಯ. ವಾಸ್ತು ಶಾಸ್ತ್ರದ ಪ್ರಕಾರ ಮನೆಗೆ ಸರಿಯಾದ ಗಾಳಿ ಮತ್ತು ಸಾಕಷ್ಟು ಸೂರ್ಯನ ಬೆಳಕು ಅತ್ಯಗತ್ಯ. ಇವು ಮನೆಗೆ ಧನಾತ್ಮಕ ಶಕ್ತಿಯನ್ನು ತರುವುದಲ್ಲದೇ, ಹಣದ ಒಳಹರಿವನ್ನು ಸಹ ಸುಗಮಗೊಳಿಸುತ್ತದೆ.
ಸೆಪ್ಟಿಕ್ ಟ್ಯಾಂಕ್
ಸೆಪ್ಟಿಕ್ ಟ್ಯಾಂಕ್ ಅಡುಗೆಮನೆ ಮತ್ತು ಸ್ನಾನಗೃಹದ ತ್ಯಾಜ್ಯವನ್ನು ಹಿಡಿದಿಟ್ಟುಕೊಳ್ಳುತ್ತದೆ. ಸೆಪ್ಟಿಕ್ ಟ್ಯಾಂಕ್ ಅನ್ನು ತಪ್ಪಾದ ದಿಕ್ಕಿನಲ್ಲಿ ಇರಿಸಿದರೆ, ಮನೆಯಲ್ಲಿ ವಾಸಿಸುವ ಜನರ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು. ಮನೆಯ ವಾಸ್ತು ಶಾಸ್ತ್ರದ ಪ್ರಕಾರ, ಸೆಪ್ಟಿಕ್ ಟ್ಯಾಂಕ್ ನಿಮ್ಮ ಮನೆಯ ವಾಯುವ್ಯ ದಿಕ್ಕಿನಲ್ಲಿ ಮಾತ್ರ ಇರಬೇಕು. ಯಾವುದೇ ಕಾರಣಕ್ಕೂ ಕಾಂಪೌಂಡ್ ಗೋಡೆಗೆ ತಾಗದಂತೆ ನೋಡಿಕೊಳ್ಳಿ.
ನಿಮ್ಮ ಹೊಸ ಮನೆಯನ್ನು ನಿರ್ಮಿಸುವಾಗ ಅಥವಾ ಹೊಸ ಮನೆ ಖರೀದಿಸುವಾಗ ಈ ವಾಸ್ತು ನಿಯಮಗಳನ್ನು ಅನುಸರಿಸಿದರೆ, ಮನೆಯಲ್ಲಿ ಋಣಾತ್ಮಕ ಶಕ್ತಿಗಳು ದೂರವಾಗಿ, ಧನಾತ್ಮಕ ಶಕ್ತಿ ಹೆಚ್ಚುತ್ತದೆ. ಅಲ್ಲದೇ ಶಾಂತಿ ಸಮೃದ್ಧಿ ನೆಲೆಸುತ್ತದೆ.