ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Vastu Tips: ವಿದ್ಯಾಭ್ಯಾಸದಲ್ಲಿ ನಿಮ್ಮ ಮಕ್ಕಳ ಏಕಾಗ್ರತೆ ಹೆಚ್ಚಾಗಬೇಕಾ? ಹಾಗಾದ್ರೆ ಅವರ ಅಧ್ಯಯನದ ಟೇಬಲ್ ಮೇಲೆ ಈ ಒಂದು ವಸ್ತು ಇಡಿ

ಆಧುನಿಕ ಸ್ಪರ್ಧಾತ್ಮಕ ಜೀವನದಲ್ಲಿ ಪಾಲಕರ ನಿರೀಕ್ಷೆ ಮತ್ತು ಅಂಕಗಳ ಒತ್ತಡದಿಂದ ವಿದ್ಯಾರ್ಥಿಗಳು ಮಾನಸಿಕ ಒತ್ತಡ, ನಿರಾಸೆ ಹಾಗೂ ಆತ್ಮವಿಶ್ವಾಸದ ಕೊರತೆಯನ್ನು ಅನುಭವಿಸುತ್ತಿದ್ದಾರೆ. ಯಶಸ್ಸಿಗೆ ಕೇವಲ ಶ್ರಮವಲ್ಲದೆ ಓದುವ ವಾತಾವರಣ, ಏಕಾಗ್ರತೆ ಮತ್ತು ಮನಸ್ಸಿನ ಸ್ಥಿತಿಯೂ ಮುಖ್ಯವಾಗಿದ್ದು, ವಾಸ್ತು ಶಾಸ್ತ್ರವು ಮಕ್ಕಳ ಅಧ್ಯಯನ ಹಾಗೂ ಫಲಿತಾಂಶಗಳ ಮೇಲೆ ಪ್ರಭಾವ ಬೀರುತ್ತದೆ. ನಿಮ್ಮಗೂ ನಿಮ್ಮ ಮಕ್ಕಳು ಚೆನ್ನಾಗಿ ಓದಬೇಕು ಎಂಬ ಆಸೆ ಇದ್ದರೆ ಅವರ ಅಧ್ಯಯನ ಕೊಠಡಿಯನ್ನು ವಾಸ್ತು ಪ್ರಕಾರ ಹೀಗೆ ಇಡಿ

ಸಾಂದರ್ಭಿಕ ಚಿತ್ರ

ಬೆಂಗಳೂರು: ಇಂದಿನ ಆಧುನಿಕ ಮತ್ತು ಸ್ಪರ್ಧಾತ್ಮಕ ಜೀವನ ಶೈಲಿಗೆ ತುತ್ತಾಗಿರುವ ನಾವಿಂದು ಯಂತ್ರಗಳಂತೆ ಓಡುತಿದ್ದೇವೆ, ಈ ಮನಸ್ಥಿತಿ ಹಾಗೂ ಪರಿಸ್ಥಿತಿಗೆ ವಿದ್ಯಾರ್ಥಿಗಳು ಹೊರತಲ್ಲ. ಪಾಲಕರು ಅಷ್ಟೇ ತಮ್ಮ ಮಕ್ಕಳ ವಿದ್ಯಾಭ್ಯಾಸವನ್ನು ಪ್ರತಿಷ್ಠೆಯ ಮಾನದಂಡವಾಗಿ ಮಾಡಿಕೊಂಡಿದ್ದು, ರ್ಯಾಂಕ್ ಹೆಚ್ಚು ಅಂಕ ಗಳಿಸುವಂತೆ ಮಕ್ಕಳ ಮೇಲೆ ಒತ್ತಡ ಹೇರುತ್ತಿದ್ದಾರೆ. ಇದರಿಂದ ಮಕ್ಕಳು ಹೆಚ್ಚಿನ ಸಮಯವನ್ನು ಓದಿನಲ್ಲೇ ಕಳೆಯುತ್ತಿದ್ದು, ಕೆಲವರಂತೂ ದಿನವಿಡೀ ಶ್ರಮಪಟ್ಟರೂ ನಿರೀಕ್ಷಿಸಿದ ಅಂಕಗಳು ದೊರೆಯುವುದಿಲ್ಲ.. ಹೀಗೆ ಅಂದುಕೊಂಡಂತೆ ಯಶಸ್ಸು ಸಿಗದೇ ಹೋದರೆ ನಿರಾಸೆ, ಆತಂಕ ಹಾಗೂ ಆತ್ಮವಿಶ್ವಾಸದ ಕೊರತೆ ಕಾಣಿಸಿಕೊಳ್ಳುತ್ತದೆ. ಇದಕ್ಕೆ ಕೇವಲ ಓದಿನ ಕೊರತೆ ಮಾತ್ರ ಕಾರಣವಲ್ಲ, ಓದುವ ವಾತಾವರಣ, ಏಕಾಗ್ರತೆ ಹಾಗೂ ಮನಸ್ಸಿನ ಸ್ಥಿತಿಯೂ ಪ್ರಮುಖ ಪಾತ್ರ ವಹಿಸಲಿದ್ದು, ವಾಸ್ತು ಶಾಸ್ತ್ರವು(Vastu Shastra) ಮಕ್ಕಳ ಅಧ್ಯಯನದ ಮೇಲೆ ಪರಿಣಾಮ ಬೀರುತ್ತದೆ.

ಹಾಗಾದ್ರೆ ವಾಸ್ತು ಶಾಸ್ತ್ರದ ಸಲಹೆಯಂತೆ(Vastu Tips) ಓದಿನಲ್ಲಿ ಮಕ್ಕಳ ಏಕಾಗ್ರತೆ ಹೆಚ್ಚಾಗಲು ಏನು ಮಾಡಬೇಕು..? ಮಕ್ಕಳ ಅಧ್ಯಯನ ಕೊಠಡಿ ಯಾವ ರೀತಿಯಲ್ಲಿದ್ದರೆ ಉತ್ತಮ ಫಲಿತಾಂಶ ಪಡೆಯಬಹುದು..? ಎಂಬುದನ್ನು ತಿಳಿದುಕೊಳ್ಳೋಣ.

ಕಿಟಕಿ ಇದ್ದರೆ ಅಶುಭ

ಕಿಟಕಿ ಇರುವುದು ಅಶುಭವೆಂದು
ಅಧ್ಯಯನ ಕೊಠಡಿಯಲ್ಲಿ ಮಗುವಿನ ಬೆನ್ನಿನ ಹಿಂದೆ ಕಿಟಕಿ ಇರುವುದನ್ನು ಅಶುಭವೆಂದು ಪರಿಗಣಿಸಲಾಗುತ್ತದೆ. ಇದರಿಂದ ಮಕ್ಕಳಿಗೆ ಓದಿನ ಮೇಲೆ ಆಸಕ್ತಿ ಕಡಿಮೆಯಾಗಬಹುದು. ವಾಸ್ತು ದೃಷ್ಟಿಯಿಂದ ಬೆನ್ನು ಮತ್ತು ಭುಜಗಳ ಹಿಂದೆ ಬೆಳಕು ಅಥವಾ ಗಾಳಿ ಬೀಳುವುದನ್ನು ಶುಭ ಲಕ್ಷಣವೆಂದು ಪರಿಗಣಿಸಲು ಆಗುವುದಿಲ್ಲ. ಜೊತೆಗೆ ಮೂರು ಅಥವಾ ಹೆಚ್ಚಿನ ಬಾಗಿಲುಗಳು ಸರಳ ಸಾಲಿನಲ್ಲಿ ಇರಬಾರದು. ಬಾಗಿಲುಗಳ ಮಧ್ಯಭಾಗದಲ್ಲಿ ಕುಳಿತು ಓದುವುದು ಕೂಡ ಸೂಕ್ತವಲ್ಲ; ಇದರಿಂದ ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗಬಹುದು. ವಿದ್ಯಾರ್ಥಿಗಳು ಓದುವ ಸ್ಥಳದಲ್ಲೇ ನಿದ್ರೆ ಮಾಡುವುದನ್ನು ತಪ್ಪಿಸಬೇಕು. ಅಲ್ಲಿ ಮಲಗುವುದರಿಂದ ಮಾನಸಿಕ ಒತ್ತಡ ಹೆಚ್ಚಾಗುವ ಸಾಧ್ಯತೆ ಇದೆ.

Vastu Tips: ನಿಮ್ಮ ಮನೆಯ ಉತ್ತರ ದಿಕ್ಕಿನಲ್ಲಿ ಈ ವಸ್ತುಗಳನ್ನು ಇಟ್ಟಿದ್ದೀರಾ? ಇಂದೇ ತೆಗೆದುಬಿಡಿ

ಕಂಪ್ಯೂಟರ್ ಈ ದಿಕ್ಕಿಗೆ ಇಡಿ

ಅಧ್ಯಯನ ಕೊಠಡಿಯ ಗೋಡೆಗಳು ಅಥವಾ ಪರದೆಗಳಿಗೆ ತಿಳಿ ಹಳದಿ, ತಿಳಿ ಹಸಿರು ಅಥವಾ ತಿಳಿ ನೀಲಿ ಬಣ್ಣಗಳು ಶುಭಕರವೆಂದು ವಾಸ್ತು ಶಾಸ್ತ್ರ ಹೇಳುತ್ತದೆ. ಜಾತಕಕ್ಕೆ ಅನುಗುಣವಾಗಿ ಸೂಕ್ತ ಬಣ್ಣವನ್ನು ಆಯ್ಕೆ ಮಾಡಿದರೆ ಮಕ್ಕಳಿಗೆ ಹೆಚ್ಚು ಅನುಕೂಲವಾಗುತ್ತದೆ. ಓದಿಗಾಗಿ ಕಂಪ್ಯೂಟರ್ ಬಳಸುವವರು ಅದನ್ನು ದಕ್ಷಿಣ ಅಥವಾ ಪಶ್ಚಿಮ ದಿಕ್ಕಿನಲ್ಲಿ ಇಡುವುದು ಒಳಿತು. ಆದರೆ ಈಶಾನ್ಯ ಮೂಲೆಯಲ್ಲಿ ಇಡುವುದು ನಕಾರಾತ್ಮಕ ಪರಿಣಾಮಕ್ಕೆ ಕಾರಣವಾಗಬಹುದು.

ಮೇಜಿನ ಮೇಲೆ ಗ್ಲೋಬ್ ಇರಲಿ
ಮಗುವಿಗೆ ಓದಲು ಆಸಕ್ತಿ ಇಲ್ಲದಿದ್ದರೆ, ಅಧ್ಯಯನ ಮೇಜಿನ ಮೇಲೆ ಪಿರಮಿಡ್ ಇಡುವುದು ಉತ್ತಮ. ಇದರಿಂದ ಮಗುವಿನ ಓದಿನ ಏಕಾಗ್ರತೆ ಹೆಚ್ಚಾಗಿ ವಿದ್ಯಾಭ್ಯಾಸದ ಮೇಲೆ ಮನಸ್ಸು ವಾಲುತ್ತದೆ.

ಸ್ಫಟಿಕ ಕಲ್ಲು

ಉತ್ತಮ ಫಲಿತಾಂಶಕ್ಕಾಗಿ ಓದುವ ಕೊಠಡಿಯು ಉತ್ತರ ದಿಕ್ಕಿನಲ್ಲಿ ಸ್ಫಟಿಕ ಕಲ್ಲುಗಳನ್ನು ಇಡುವುದರಿಂದ ಶುಭ ಫಲ ಸಿಗುತ್ತದೆ ಎಂದು ನಂಬಲಾಗಿದೆ. ಜೊತೆಗೆ ಸ್ಟಡಿ ಟೇಬಲ್ ಮೇಲೆ ಗ್ಲೋಬ್ ಇಟ್ಟು ದಿನಕ್ಕೆ ಮೂರು ಬಾರಿ ತಿರುಗಿಸುವಂತೆ ಮಕ್ಕಳಿಗೆ ಹೇಳಬೇಕು. ಇದರಿಂದ ಅವರ ಮನಸ್ಸು ಅಧ್ಯಯನದತ್ತ ಕೇಂದ್ರೀಕರಿಸುತ್ತದೆ.

ದೃಷ್ಟಿ ತೆಗೆಯಿರಿ

ಫೆಂಗ್‌ಶೂಯಿ ಪ್ರಕಾರವೂ ಪಿರಮಿಡ್ ಮಕ್ಕಳ ಶಿಕ್ಷಣಕ್ಕೆ ಅನುಕೂಲಕರವಾಗಿದ್ದು , ಕೆಲವೊಮ್ಮೆ ಎಷ್ಟೇ ಪ್ರಯತ್ನಿಸಿದರೂ ಮಕ್ಕಳು ಓದಲು ಆಸಕ್ತಿ ತೋರದಿರಬಹುದು. ಇಂತಹ ಸಂದರ್ಭದಲ್ಲಿ 7 ಕೆಂಪು ಮೆಣಸಿನಕಾಯಿ ಮತ್ತು 1 ಟೀಸ್ಪೂನ್ ಸಾಸಿವೆ ತೆಗೆದುಕೊಂಡು ಮಗುವಿನ ತಲೆಯ ಮೇಲೆ ಏಳು ಬಾರಿ ವಿರುದ್ಧ ದಿಕ್ಕಿನಲ್ಲಿ ತಿರುಗಿಸಿ ದೃಷ್ಟಿ ತೆಗೆದು ನಂತರ ಅದನ್ನು ಬೆಂಕಿಗೆ ಹಾಕಬೇಕು. ಇದರಿಂದ ಕೆಟ್ಟ ದೃಷ್ಟಿ ನಿವಾರಣೆಯಾಗುತ್ತದೆ ಎಂಬ ನಂಬಿಕೆ ಇದೆ.
ಅಲ್ಲದೆ, ಮನೆಯ ಹೊಸ್ತಿಲಲ್ಲಿ ಮಗುವನ್ನು ಕೂರಿಸಿ ಕಪ್ಪು ಉಪ್ಪು ಹಾಗೂ ಮಣ್ಣಿನಿಂದ ಏಳು ಬಾರಿ ದೃಷ್ಟಿ ತೆಗೆದು ದಕ್ಷಿಣ ದಿಕ್ಕಿಗೆ ಎಸೆಯುವುದರಿಂದ ಮಕ್ಕಳ ಓದಿನ ಆಸಕ್ತಿ ಹೆಚ್ಚಾಗುತ್ತದೆ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ.

ಇನ್ನೂ ವಾಸ್ತು ಶಾಸ್ತ್ರದ ಪ್ರಕಾರ ಮಕ್ಕಳ ಪುಸ್ತಕದ ಕಪಾಟು ಅಥವಾ ಬುಕ್ ಸ್ಟ್ಯಾಂಡ್ ಪಶ್ಚಿಮ ದಿಕ್ಕಿನಲ್ಲಿ ಇರಬೇಕು. ಅಲ್ಲಿ ಸ್ಥಳಾವಕಾಶ ಇಲ್ಲದಿದ್ದರೆ, ದಕ್ಷಿಣ ದಿಕ್ಕಿನಲ್ಲಿ ಸ್ವಲ್ಪ ಸರಿಸಿ ಇಡಬಹುದು.
ಮಕ್ಕಳು ಓದುವಾಗ ಸಕಾರಾತ್ಮಕ ವಾತಾವರಣ ಬಹಳ ಮುಖ್ಯ. ಇದಕ್ಕಾಗಿ ಅಧ್ಯಯನ ಕೊಠಡಿಯಲ್ಲಿ ಪ್ರೇರಣಾದಾಯಕ ಪೋಸ್ಟರ್‌ಗಳು, ಮಹಾನ್ ವ್ಯಕ್ತಿಗಳ ಮಾತುಗಳು, ಅಧ್ಯಯನ ಸಂಬಂಧಿತ ಚಾರ್ಟ್‌ಗಳು ಅಥವಾ ಖ್ಯಾತ ವ್ಯಕ್ತಿಗಳು ಹಾಗೂ ಕ್ರೀಡಾಪಟುಗಳ ಫೋಟೋಗಳನ್ನು ಇಡುವುದು ಮಕ್ಕಳಿಗೆ ಉತ್ತಮ ಪ್ರೇರಣೆಯನ್ನು ನೀಡುತ್ತದೆ.