ಬೆಂಗಳೂರು: ಮನೆಯಲ್ಲಿರುವ (Vastu for home) ಗಡಿಯಾರ (vastu for clock) ನಮ್ಮ ನಿಮ್ಮೆಲ್ಲರ ಜೀವನದ ಮೇಲೆ ಪರಿಣಾಮ ಬೀರುತ್ತದೆ ಎಂಬುದು ನಿಮಗೆ ಗೊತ್ತಿದೆಯೇ? ವಾಸ್ತು ಶಾಸ್ತ್ರದ (Vastu shastra) ಪ್ರಕಾರ ಮನೆಯ ಗಡಿಯಾರವು ಮನೆಯೊಳಗೆ ಸಕಾರಾತ್ಮಕತೆಯನ್ನು ಆಹ್ವಾನಿಸುವ, ನಕಾರಾತ್ಮಕತೆಯನ್ನು ವೃದ್ಧಿಗೊಳಿಸುವ ಶಕ್ತಿ ಹೊಂದಿದೆ. ಇದು ಮನೆಯ ವಾಸ್ತುವಿನ ಮೇಲೆ ಪ್ರಮುಖವಾಗಿ ಐದು ರೀತಿಯ ಪರಿಣಾಮಗಳನ್ನು ಬೀರುತ್ತದೆ ಎನ್ನುತ್ತದೆ ವಾಸ್ತು ಶಾಸ್ತ್ರ. ಗಡಿಯಾರವು ಮನೆಯೊಳಗೆ ಶಕ್ತಿಯ ಚಲನೆ, ಬೆಳವಣಿಗೆ ಮತ್ತು ಸಕಾರಾತ್ಮಕತೆಯ ಮೇಲೂ ಪರಿಣಾಮ ಬೀರುತ್ತದೆ. ಇದು ನೇರವಾಗಿ ಮನೆ ಮಂದಿಯ ಭವಿಷ್ಯದ ಮೇಲೆ ಪ್ರಭಾವ ಬಿರುವುದು.
ಮನೆಯಲ್ಲಿರುವ ಪ್ರತಿಯೊಂದು ವಸ್ತುವು ಒಂದು ರೀತಿಯ ಶಕ್ತಿಯನ್ನು ಹೊಂದಿರುತ್ತದೆ. ಅದರಲ್ಲಿ ಗಡಿಯಾರಗಳೂ ಸೇರಿವೆ. ಅದು ಕೈಗಡಿಯಾರವಾಗಲಿ ಅಥವಾ ಅಲಂಕಾರಿಕ ಗೋಡೆ ಗಡಿಯಾರವಾಗಲಿ. ಇವುಗಳ ಚಲನೆಯು ಪ್ರಗತಿಯ ಸಂಕೇತಗಳಾಗಿವೆ. ಸರಿಯಾಗಿ ಕಾರ್ಯ ನಿರ್ವಹಿಸದಿದ್ದರೆ ಇದರಿಂದ ನಮ್ಮ ಜೀವನದಲ್ಲೂ ಹಲವು ಸಮಸ್ಯೆಗಳು ಎದುರಾಗಬಹುದು. ಮನೆಯಲ್ಲಿ ಗಡಿಯಾರ ಇಡುವ ಸ್ಥಾನವು ಕೂಡ ಮನೆಯ ವಾಸ್ತುವಿನ ಮೇಲೆ ಪರಿಣಾಮ ಬೀರುತ್ತದೆ. ಈ ಕುರಿತು ತಜ್ಞರಾದ ಪೂಜಾ ಸೇಠ್ ವಿವರಿಸುವುದು ಹೀಗೆ..
- ಚಲಿಸುವ ಗಡಿಯಾರವು ಪ್ರಗತಿಯ ಸಂಕೇತವಾಗಿದೆ. ಇದು ಚಲನೆ, ಸಮಯೋಚಿತ ನಿರ್ಧಾರಗಳು ಮತ್ತು ಸಮತೋಲಿತ ಜೀವನಶೈಲಿಗೆ ಪ್ರೇರಣೆಯನ್ನು ನೀಡುತ್ತದೆ. ವೃತ್ತಿ ಬದುಕು ಮತ್ತು ಹಣಕಾಸಿನಲ್ಲಿ ಹೊಸ ಅವಕಾಶಗಳನ್ನು ಆಕರ್ಷಿಸಲು ಸಹಾಯ ಮಾಡುತ್ತದೆ.
- ಮುರಿದ ಗಡಿಯಾರ ನಕಾರಾತ್ಮಕ ಶಕ್ತಿಯನ್ನು ಆಹ್ವಾನಿಸುತ್ತದೆ. ಇದು ಕೆಲಸದಲ್ಲಿ ವಿಳಂಬ, ನಷ್ಟ ಮತ್ತು ದುಃಖಕ್ಕೆ ಕಾರಣವಾಗುತ್ತದೆ. ಇಂತಹ ಗಡಿಯಾರಗಳನ್ನು ತ್ವರಿತವಾಗಿ ದುರಸ್ತಿ ಮಾಡುವುದು ಅಥವಾ ಅವುಗಳನ್ನು ಮನೆಯಿಂದ ತೆಗೆದು ಹೊರಹಾಕುವುದು ಒಳ್ಳೆಯದು.
- ಗಡಿಯಾರವು ಕೆಲಸ ಮಾಡುತ್ತಿಲ್ಲವೆಂದಾದರೆ ಅವುಗಳನ್ನು ಮಲಗುವ ಕೋಣೆಯಲ್ಲಿ ಎಂದಿಗೂ ಇಡಬೇಡಿ. ಅದರಲ್ಲೂ ಮುಖ್ಯವಾಗಿ ತಲೆಯ ಹತ್ತಿರ ಅಥವಾ ದಿಂಬಿನ ಕೆಳಗೆ ಇಡಬಾರದು. ವಾಸ್ತು ಪ್ರಕಾರ ಇದು ನಿದ್ರೆಗೆ ಭಂಗ ಉಂಟು ಮಾಡುತ್ತದೆ. ವೈಯಕ್ತಿಕ ಬೆಳವಣಿಗೆ ಮತ್ತು ಸಂಬಂಧಗಳ ಮೇಲೆ ಪರಿಣಾಮ ಬೀರುತ್ತದೆ.
- ಬಳಸದ ಗಡಿಯಾರಗಳು ಜೀವನದಲ್ಲಿ ಪ್ರಗತಿಗೆ ಅಡ್ಡಿ ಉಂಟು ಮಾಡುತ್ತದೆ. ಅದನ್ನು ಮತ್ತೆ ಧರಿಸುವುದಿಲ್ಲವಾದರೆ ಯಾರಿಗಾದರೂ ದಾನ ಮಾಡುವುದು ಒಳ್ಳೆಯದು. ಮನೆಯಲ್ಲಿ ಆದಷ್ಟು ಬಳಸದ ವಸ್ತುಗಳನ್ನು ಇಡದೇ ಇರುವುದು ಒಳ್ಳೆಯದು.
- ಗಡಿಯಾರವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು. ಅಚ್ಚುಕಟ್ಟಾದ ಮತ್ತು ಹೆಚ್ಚು ಬೆಳಕು ಬೀಳುವ ಸ್ಥಳದಲ್ಲಿ ಇರಿಸಬೇಕು. ಇದರಿಂದ ಮನೆ ಮಂದಿಯ ಬದುಕಿನಲ್ಲೂ ಉತ್ತಮ ಸಮಯವನ್ನು ಆಹ್ವಾನಿಸುತ್ತದೆ. ಯಾರಾದರೂ ಉಡುಗೊರೆಯಾಗಿ ಗಡಿಯಾರವನ್ನು ಕೊಟ್ಟರೆ ಸ್ವೀಕರಿಸಿ. ಇದು ಅದೃಷ್ಟವನ್ನು ತರುತ್ತದೆ ಎನ್ನುತ್ತದೆ ಎಂದು ವಾಸ್ತು.
ಇದನ್ನೂ ಓದಿ: Vastu Tips: ಸಕಾರಾತ್ಮಕತೆಯನ್ನು ಹೆಚ್ಚಿಸಲು ಅಧ್ಯಯನ ಕೊಠಡಿಯಲ್ಲಿ ಇರಲಿ ಈ ವಸ್ತುಗಳು