Karnataka budget session 2026: ಮೋದಿಗೆ ಥೂ ಅನ್ನಪ್ಪಾ ನೋಡಣಾ; ಶಾಸಕ ಸುನೀಲ್ ಕುಮಾರ್‌ಗೆ ಸಿಎಂ ಸವಾಲು
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸಭೆಯಲ್ಲಿ ಬಜೆಟ್ ಕುರಿತು ನಡೆದ ಚರ್ಚೆಯ ವೇಳೆ ವಿಪಕ್ಷ ನಾಯಕರ ಟೀಕೆಗಳ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ರಾಜ್ಯಕ್ಕೆ ತೆರಿಗೆ ಹಂಚಿಕೆಯಲ್ಲಿ ಕೇಂದ್ರದಿಂದ ಅನ್ಯಾಯ ಆಗುತ್ತಿದೆ. ಜಿ.ಎಸ್.ಟಿ ಪರಿಹಾರ ನೀಡುವುದನ್ನು ನಿಲ್ಲಿಸಿದ ಕಾರಣ ರಾಜ್ಯದ ರಾಜಸ್ವ ಸಂಗ್ರಹಣೆ ಕಡಿಮೆಯಾಗಿ ರಾಜಸ್ವ ಕೊರತೆಯನ್ನು ಎದುರಿಸಬೇಕಾಯಿತು ಎಂದು ಟೀಕಿಸಿದ್ದಾರೆ.
Prabhakara R
Mar 25, 2026 5:47 PM
ಬೆಂಗಳೂರು: ವಿಧಾನಸಭೆ ಕಲಾಪದಲ್ಲಿ ಮಾತನಾಡುವ ವೇಳೆ ಸಿಎಂ ಸಿದ್ದರಾಮಯ್ಯ ಅವರು, ತಾವು ಜೆಡಿಎಸ್‌ನಲ್ಲಿದ್ದ ವೇಳೆ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡರು ನನ್ನನ್ನು ಉಚ್ಚಾಟನೆ ಮಾಡಿದರು ಎಂದು ಹೇಳಿದರು. ಈ ವೇಳೆ ಪ್ರತಿಕ್ರಿಯಿಸಿದ ಶಾಸಕ ಸುನೀಲ್ ಕುಮಾರ್, ನಿಮ್ಮ ರಾಷ್ಟ್ರೀಯ ಅಧ್ಯಕ್ಷರ ಮಾತನ್ನೇ ನೀವು ಕೇಳಿಲ್ಲ, ಈಗಲೂ ನೀವು ಕಾಂಗ್ರೆಸ್ ಹೈಕಮಾಂಡ್ ಮಾತು ಕೇಳಬಾರದು, ಈ ರಾಜ್ಯದ ನಂಬರ್ ಒನ್ ನೀವು, ಥೂ ಅಂತ ಬಿಸಾಕಬೇಕು ಎಂದು ವ್ಯಂಗ್ಯವಾಡಿದರು. ಈ ವೇಳೆ ತಿರುಗೇಟು ನೀಡಿದ ಸಿಎಂ ಅವರು, ನಿನಗೆ ದಮ್ ಇದ್ದರೆ ಮೋದಿ ಅವರಿಗೆ ಥೂ ಅಂತ ಹೇಳು ನೋಡೋಣ, ದಮ್ ಇದ್ದರೆ ಮೋದಿ ಅವರ ಮಾತು ಕೇಳಲ್ಲ ಎಂದು ಹೇಳು ನೋಡೋಣ ಎಂದು ಸವಾಲು ಹಾಕಿದರು.