ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಎಐ ಮೂಲಕ ಡಯಾಬಿಟಿಸ್ ನಿಯಂತ್ರಣ: ಇದು ಮಧುಮೇಹ ತಜ್ಞರ ಮಹ್ವತದ ಸಲಹೆ

ವೇಗದ ಜೀವನಶೈಲಿ, ಅಸಮರ್ಪಕ ಆಹಾರ ಪದ್ಧತಿ ಮತ್ತು ವ್ಯಾಯಾಮದ ಕೊರತೆಯಿಂದ ಮಧುಮೇಹ ಹೆಚ್ಚುತ್ತಿದೆ. ಆದರೆ ಸರಿಯಾದ ಆಹಾರ ಮತ್ತು ತಂತ್ರಜ್ಞಾನ ಬಳಕೆ ಮೂಲಕ ಇದನ್ನು ನಿಯಂತ್ರಿಸಬಹುದು. ಎಐ ಸಹಾಯದಿಂದ ರಕ್ತದ ಸಕ್ಕರೆ ಮಟ್ಟವನ್ನು ಗಮನಿಸಿ ಉತ್ತಮ ಆರೋಗ್ಯ ನಿರ್ವಹಣೆ ಸಾಧ್ಯ ಎಂದು ಮಧುಮೇಹ ತಜ್ಞ ಡಾ. ಸುಮನ್ ತಿಳಿಸಿದ್ದಾರೆ.

ಮಧುಮೇಹ ತಜ್ಞ ಡಾ. ಸುಮನ್

ಬೆಂಗಳೂರು, ಏ. 30: ಇಂದಿನ ವೇಗದ ಜೀವನಶೈಲಿ, ಅಸಮರ್ಪಕ ಆಹಾರ ಪದ್ಧತಿ ಮತ್ತು ವ್ಯಾಯಾಮದ ಕೊರತೆಯಿಂದ ಪ್ರಪಂಚದಾದ್ಯಂತ ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತಿರುವ ಆರೋಗ್ಯ ಸಮಸ್ಯೆಗಳಲ್ಲಿ ಮಧುಮೇಹ ಕೂಡ ಒಂದು. ಈ ಕಾಯಿಲೆ ಕಾಣಿಸಿಕೊಂಡರೆ ದೇಹದಲ್ಲಿನ ಸಕ್ಕರೆ ಪ್ರಮಾಣ ಹೆಚ್ಚಾಗಿ, ಇನ್ಸುಲಿನ್ ಸರಿಯಾಗಿ ಕಾರ್ಯನಿರ್ವಹಿಸಲು ಅಡಚಣೆ ಉಂಟಾಗಿ ಆರೋಗ್ಯ ಸಮಸ್ಯೆ ಹೆಚ್ಚಾಗುತ್ತದೆ. ಆದರೆ ನಿಯಮಿತ ಆಹಾರ ಸೇವಿಸುವುದರಿಂದ ಸಕ್ಕರೆ ಕಾಯಿಲೆಯ ನಿರ್ವಹಣೆ ಬಹಳ ಸುಲಭ. ಸದ್ಯ ಇಡೀ ವಿಶ್ವವನ್ನೇ ತನ್ನ ಹಿಡಿತಕ್ಕೆ ತೆಗೆದುಕೊಂಡಿರುವ ಎಐ (AI) ಮೂಲಕವೂ ಡಯಾಬಿಟಿಸ್ ಅನ್ನು ಕಂಟ್ರೋಲ್ ಮಾಡಬಹುದು ಎಂದು ಮಧುಮೇಹ ತಜ್ಞ ಡಾ. ಸುಮನ್ ʼವಿಶ್ವವಾಣಿಗ ಹೆಲ್ತʼ ಯೂಟ್ಯೂಬ್‌ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ವಿವರಿಸಿದ್ದಾರೆ.