ಹಲವು ವರ್ಷಗಳಿಂದ ಆಶಿತಾ ಸಿನಿಮಾಗಳಿಂದ ಸಂಪೂರ್ಣವಾಗಿ ದೂರ ಉಳಿದಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುವ ಆಶಿತಾ ಅಭಿಮಾನಿಗಳಿಗೆ ಹೆಚ್ಚು ಕನೆಕ್ಟ್ ಆಗಿದ್ದಾರೆ. ಇದೀಗ ನಟಿ ಸಿನಿ ರಂಗದ ಬಗ್ಗೆಯೂ ಹಲವಾರು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಈ ವೇಳೆ ನಟ ದರ್ಶನ್ ಕುರಿತಾಗಿ ಮಾತನಾಡಿದರು. ದರ್ಶನ್ ಅವರ ಜೊತೆ ದುಬೈನಲ್ಲಿ ಒಂದು ಶೋ ಮಾಡಿದ್ವಿ. ತುಂಬಾ down to earth ವ್ಯಕ್ತಿ. ದರ್ಶನ್ ಅವರು ಇವತ್ತಿಗೂ ಫೇಸ್ ಮಾಡೋ ಸಂದರ್ಭ ನೋಡಿದ್ರೆ ಬೇಸರವಾಗುತ್ತೆ. ಈಗ ನೋಡಿದ್ರೆ ನಮ್ಮ ಕನ್ನಡ ಚಿತ್ರರಂಗದಲ್ಲಿ ಹೀರೋಗಳೇ ಇಲ್ಲವಾಗಿದ್ದಾರೆ ಎಂದರು. ಇದೀಗ ʼವಿಶ್ವವಾಣಿ ನಿರೂಪಕ ಸುಜಯ್ ರಾಜ್ ನಟಿಯನ್ನು ಸಂದರ್ಶನ ಮಾಡಿದ್ದಾರೆ. ನಟಿ ಏನೆಲ್ಲ ಹೇಳಿದ್ರು?