ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಡಿಟಾಕ್ಸ್ ಮಾಡುವುದಕ್ಕೂ ಮುನ್ನ ವೈದ್ಯರ ಸಲಹೆ ಪಡೆಯಲೇಬೇಕು: ಡಾ. ಅನಿತಾ

ದೇಹದ ಶುದ್ದೀಕರಣ ಮಾಡುವುದನ್ನು ಡಿಟಾಕ್ಸ್ ಎನ್ನುತ್ತೇವೆ. ಇದು ಆರೋಗ್ಯವಂತರಲ್ಲಿ ನೈಸರ್ಗಿಕವಾಗಿ ನಡೆಯುತ್ತದೆ. ಇದಕ್ಕಾಗಿ ಹೆಚ್ಚು ಖರ್ಚು ಮಾಡಬೇಕಾದ ಅಗತ್ಯವಿಲ್ಲ ಎನ್ನುತ್ತಾರೆ ಡಯಟೀಷಿಯನ್ ಡಾ. ಅನಿತಾ. ಯಾವುದಕ್ಕೂ ಮನೆಯಲ್ಲೇ ಡಿಟಾಕ್ಸ್ ಪ್ರಯೋಗ ಮಾಡಲು ಹೋಗುವ ಮುನ್ನ ವೈದ್ಯರ ಸಲಹೆ ಪಡೆಯಬೇಕು ಎನ್ನುತ್ತಾರೆ ಅವರು.

ಸಂಗ್ರಹ ಚಿತ್ರ

ಬೆಂಗಳೂರು: ಡಿಟಾಕ್ಸ್ (detoxing) ಅಥವಾ ದೇಹದ ಶುದ್ದೀಕರಣಕ್ಕೆ ಅನಗತ್ಯವಾಗಿ ಖರ್ಚು ಮಾಡಬೇಕಿಲ್ಲ. ಆರೋಗ್ಯವಂತರಲ್ಲಿ ಇದು ನೈಸರ್ಗಿಕವಾಗಿ ನಡೆಯುತ್ತದೆ ಎನ್ನುತ್ತಾರೆ ಡಯಟೀಷಿಯನ್ ಡಾ. ಅನಿತಾ (Dr. Anita) . ʼವಿಶ್ವವಾಣಿ ಹೆಲ್ತ್‌ʼ (Vishwavani health) ಯೂಟ್ಯೂಬ್‌ ಚಾನೆಲ್‌ನಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ದೇಹದ ತೂಕ ಹೆಚ್ಚಾಗುವುದು, ಸುಸ್ತು ಕಾಡುವುದು, ಬಿಪಿ ವ್ಯತ್ಯಯವಾಗುವುದು ಕಂಡು ಬಂದರೆ ಡಿಟಾಕ್ಸ್ ಅಗತ್ಯವಿರುತ್ತದೆ. ಇದಕ್ಕಾಗಿ ನಿತ್ಯದ ದಿನಚರಿಯಲ್ಲಿ ರೆಡಿ ಟು ಇಟ್ ಆಹಾರವನ್ನು ತ್ಯಜಿಸಬೇಕು, ದುಶ್ಚಟಗಳಿಂದ ದೂರವಿರಬೇಕು, ಡಿಟಾಕ್ಸ್ ಪಾನೀಯಗಳನ್ನು ಸೇವಿಸುವುದಾದರೆ ವೈದ್ಯರ ಸಲಹೆಯನ್ನು ಪಡೆಯಲೇಬೇಕು ಎನ್ನುತ್ತಾರೆ ಅವರು. ಫೈಬರ್ ಅಧಿಕವಿರುವ ತರಕಾರಿ, ಹಣ್ಣು, ವಿವಿಧ ರೀತಿಯ ಬಣ್ಣದ ತರಕಾರಿಗಳು ಆಹಾರದಲ್ಲಿರಬೇಕು. ಅತ್ಯಧಿಕ ಪ್ರಮಾಣದಲ್ಲಿ ನೀರು ಸೇವನೆ ಮಾಡಬೇಕು. ದಿನಕ್ಕೆ ಕನಿಷ್ಠ 15- 20 ವಾಕಿಂಗ್, 10 ಮೆಡಿಟೇಶನ್ ಮಾಡಲೇಬೇಕು. ಮಾನಸಿಕ ಒತ್ತಡವು ಡಿಟಾಕ್ಸ್ ಮೇಲೆ ಪರಿಣಾಮ ಬೀರುತ್ತದೆ. ಯೂಟ್ಯೂಬ್ ನೋಡಿ ಜ್ಯೂಸ್ ಮಾಡಿ ನಿತ್ಯ ಸೇವನೆ ಮಾಡುವುದಕ್ಕೂ ಮೊದಲು ವೈದ್ಯರ ಸಲಹೆ ಪಡೆಯಬೇಕು ಎಂದು ಅವರು ತಿಳಿಸಿದರು.

ವಿದ್ಯಾ ಇರ್ವತ್ತೂರು

View all posts by this author