ಬೆಂಗಳೂರು: ನಿರ್ದೇಶಕ, ನಿರ್ಮಾಪಕ ಗುರು ದೇಶಪಾಂಡೆ ಅವರು ‘ಲವ್ ಮಾಕ್ಟೇಲ್ 3’ (Love Mocktail 3) ಚಿತ್ರತಂಡದ ವಿರುದ್ಧ ವಾಣಿಜ್ಯ ಮಂಡಳಿಗೆ ದೂರು ನೀಡಿದ್ದಾರೆ. ಈ ಚಿತ್ರತಂಡದಿಂದ ಕೃತಿಚೌರ್ಯ ಆಗಿದೆ ಎಂದು ಅವರು ಆರೋಪಿಸಿದ್ದಾರೆ. ನಾನು ರಾಜಾಹುಲಿ, ರುದ್ರತಾಂಡವ್ ಸಿನಿಮಾವರೆಗೆ ಮಾಡಿದ್ದೀನಿ. ಪ್ರತಿಯೊಂದು ನಮ್ಮ ನೆಲದ ಕಥೆಯೇ ಇದೆ. ಅವತ್ತು ಅವಕಾಶ ನನಗೆ ಸಿಕ್ಕಿದ್ದು ಹಾಗೇ. ಡಾರ್ಲಿಂಗ್ ಕೃಷ್ಣರಿಂದ ವೈಯಕ್ತಿಕ ತೇಜೋವಧೆ ಮಾಡುತ್ತಿದ್ದಾರೆ ಎಂದು ನಿರ್ದೇಶಕ ಗುರು ದೇಶಪಾಂಡೆ ಆರೋಪಿಸಿದ್ದಾರೆ. ಪ್ರಚಾರಕ್ಕಾಗಿ ನಾವು ಇಲ್ಲಿಗೆ ಬಂದಿಲ್ಲ. ನನ್ನ ಕೋ-ರೈಟರ್ ರಾಘವೇಂದ್ರ ನಾಯ್ಕ್ ಅವರಿಗೆ ನ್ಯಾಯ ಸಿಗಬೇಕು ಎಂದಿದ್ದಾರೆ. ಇದೀಗ ʼವಿಶ್ವವಾಣಿ ನಿರೂಪಕ ಸುಜಯ್ ರಾಜ್ ಜೊತೆ ಗುರು ದೇಶಪಾಂಡೆ ಈ ಬಗ್ಗೆ ಮಾತನಾಡಿದ್ದಾರೆ.