ಬೆಂಗಳೂರು: ಮಕ್ಕಳ ಬೆಳವಣಿಗೆಯಲ್ಲಿ ಗಂಡು, ಹೆಣ್ಣು ಎಂಬ ವ್ಯತ್ಯಾಸವಿಲ್ಲ. ನಿಗದಿತ ಸಮಯಕ್ಕೆ ಕೆಲವೊಂದು ಬೆಳವಣಿಗೆಗಳು ಆಗಲೇಬೇಕು ಎನ್ನುತ್ತಾರೆ ಖ್ಯಾತ ಸ್ತ್ರೀ ರೋಗ ತಜ್ಞರಾದ ಡಾ. ರಶ್ಮಿ ಟಿ.ಎನ್. ವಿಶ್ವವಾಣಿ ಹೆಲ್ತ್ (Vishwavani health) ಯೂಟ್ಯೂಬ್ ಚಾನೆಲ್ ನಲ್ಲಿ ಮಾತನಾಡಿದ ಅವರು, ಯಾವುದೇ ಕಾರಣಕ್ಕೂ ಮಕ್ಕಳಿಗೆ (Children health) ಟಿವಿ, ಮೊಬೈಲ್ ಕೊಡಬೇಡಿ ಎಂದ ಅವರು ಮಕ್ಕಳ ಬೆಳವಣಿಗೆಯಲ್ಲಿ (children growth) ಗಂಡು, ಹೆಣ್ಣು ಎಂಬ ಭಿನ್ನತೆ ಇಲ್ಲ. 6- ರಿಂದ 9 ತಿಂಗಳಲ್ಲಿ ಅವರು ಕೈಯಲ್ಲಿ ಪಾಯಿಂಟ್ ಮಾಡಬೇಕು, ಕಣ್ಣಲ್ಲಿ ಕಣ್ಣಿಟ್ಟು ನೋಡಬೇಕು, ಅಮ್ಮ, ಅಪ್ಪನನ್ನು ಗುರುತಿಸಬೇಕು. ಎರಡು ವರ್ಷದಲ್ಲಿ ಮೂರು ನಾಲ್ಕು ಪದಗಳನ್ನು ಸೇರಿಸಿ ವಾಕ್ಯ ರಚನೆ ಮಾಡಬೇಕು. ಮಕ್ಕಳಿಗೆ ಟಿವಿ, ಮೊಬೈಲ್ ತೋರಿಸುವುದರಿಂದ ಅವರ ಮಾತು ವಿಳಂಬವಾಗುತ್ತದೆ. ಅಲ್ಲದೇ ನಾಲಗೆ, ಕಿವಿ ತೊಂದರೆ, ಆಟಿಸಂ ಕಾರಣದಿಂದಲೂ ಮಕ್ಕಳಲ್ಲಿ ಮಾತು ವಿಳಂಬವಾಗುತ್ತದೆ. ಮಕ್ಕಳನ್ನು ಆದಷ್ಟು ಬೇರೆ ಮಕ್ಕಳೊಂದಿಗೆ ಬೆರೆಯಲು ಬಿಡಿ. ಇದರಿಂದ ಮಕ್ಕಳು ಬೇಗ ಮಾತನಾಡಲು ಪ್ರಾರಂಭಿಸುತ್ತಾರೆ ಎಂದು ಅವರು ಹೇಳಿದರು.