ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಇಪಿಎಫ್, ಷೇರು ಮಾರುಕಟ್ಟೆ; ನಿವೃತ್ತಿ ಯೋಜನೆಗೆ ಯಾವುದು ಬೆಸ್ಟ್?

Vishwavani money: ನಿವೃತ್ತಿ ಯೋಜನೆ ಮಾಡುವಾಗ ಇಪಿಎಫ್ ಉತ್ತಮವೋ, ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದು ಒಳ್ಳೆಯದೋ ಎನ್ನುವ ಗೊಂದಲ ಕಾಡುವುದು ಸಹಜ. ಇಪಿಎಫ್ ತನ್ನದೇ ಆದ ಪ್ರಯೋಜನವನ್ನು ಹೊಂದಿದ್ದರೆ ಷೇರು ಮಾರುಕಟ್ಟೆಯಲ್ಲಿ ಹೂಡಿಕೆಯು ಅದರದ್ದೇ ಆದ ಲಾಭವನ್ನು ಕೊಡುತ್ತದೆ. ಯಾವುದನ್ನು ಆಯ್ಕೆ ಮಾಡಬೇಕು ಎನ್ನುವ ಗೊಂದಲದಲ್ಲಿ ನೀವಿದ್ದರೆ ಇಲ್ಲಿದೆ ಬೇಕಾದ ಸೂಕ್ತ ಮಾಹಿತಿ.

ವಿಶ್ವವಾಣಿ ಮನಿ

ಬೆಂಗಳೂರು: ಜೀವನ ವೆಚ್ಚ ಹೆಚ್ಚಾಗಿರುವ ಈ ಸಂದರ್ಭದಲ್ಲೇ ನಿವೃತ್ತಿ ಕಾಲಕ್ಕೆ ಹಣಕಾಸು ಭದ್ರತೆ ಮಾಡಿಕೊಳ್ಳುವುದು ಅನಿವಾರ್ಯ ಎಂಬಂತಾಗಿದೆ. ಆದರೆ ಇಪಿಎಫ್ (EPF) ಅಥವಾ ಷೇರು ಮಾರುಕಟ್ಟೆಯಲ್ಲಿ (Stock Market) ಹೂಡಿಕೆ ಈ ಎರಡರಲ್ಲಿ ಯಾವುದು ಒಳ್ಳೆಯದು ಎನ್ನುವ ಗೊಂದಲ ಸದಾ ಕಾಡುತ್ತಲೇ ಇರುತ್ತದೆ. ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದರಿಂದ ಕಡಿಮೆ ಅವಧಿಯಲ್ಲಿ ಹೆಚ್ಚು ಲಾಭ ನೀಡುವ ಭರವಸೆ ನೀಡಿದರೆ ಇಪಿಎಫ್ ದೀರ್ಘಾವಧಿ ಹೂಡಿಕೆಯನ್ನು ಉತ್ತೇಜಿಸಿ ದೊಡ್ಡ ಮೊತ್ತದ ಭದ್ರವಾದ ಠೇವಣಿ ಸಂಗ್ರಹಿಸಲು ಪ್ರೋತ್ಸಾಹಿಸುತ್ತದೆ. ಹೀಗಾಗಿ ಯಾವುದು ಒಳ್ಳೆಯದು ಎನ್ನುವ ಕುರಿತು 'ವಿಶ್ವವಾಣಿ ಮನಿ' (Vishwavani money) ಯುಟ್ಯೂಬ್‌ ಚಾನೆಲ್‌ನಲ್ಲಿ ಕೇಶವ್ ಪ್ರಸಾದ್ ಅವರು ನೀಡಿರುವ ಮಾಹಿತಿ ಇಲ್ಲಿದೆ. ನಿವೃತ್ತಿ ಕಾಲಕ್ಕೆ ಸಂಪತ್ತು ನಿರ್ಮಾಣಕ್ಕೆ ಇಪಿಎಫ್, ಷೇರು ಮಾರುಕಟ್ಟೆ ಎರಡು ಕೂಡ ಸಹಾಯ ಮಾಡುತ್ತದೆ. ಇಪಿಎಫ್ ನಿಯಮಿತ ಉಳಿತಾಯ ಮತ್ತು ಭದ್ರವಾದ ಫಂಡ್ ನಿರ್ಮಾಣಕ್ಕೆ ಸಹಾಯ ಮಾಡಿದರೆ ಷೇರುಗಳು ಮಾರುಕಟ್ಟೆ ಕಾರ್ಯಕ್ಷಮತೆ ಆಧಾರದಲ್ಲಿ ಲಾಭವನ್ನು ತಂದುಕೊಡುತ್ತದೆ. ಇಲ್ಲಿ ಅಪಾಯ ಹೆಚ್ಚಾಗಿದ್ದರೂ ದೀರ್ಘಾವಧಿ ಹೂಡಿಕೆಯಿಂದ ಲಾಭ ಮತ್ತು ಹೆಚ್ಚಿನ ಆದಾಯವನ್ನು ನಿರೀಕ್ಷಿಸಬಹುದು. ಇಪಿಎಫ್ ನಲ್ಲಿ ಉದ್ಯೋಗಿ, ಉದ್ಯೋಗದಾತರ ಇಬ್ಬರ ಪಾಲು ಇರುತ್ತದೆ. ಜೊತೆಗೆ ಹೂಡಿಕೆಗೆ ಭದ್ರತೆಯು ಇರುತ್ತದೆ. ಇದು ಸ್ಥಿರ, ಸುರಕ್ಷಿತ, ವಿಶ್ವಾಸಾರ್ಹವಾಗಿ ಗುರುತಿಸಲ್ಪಟ್ಟಿದೆ. ಇನ್ನು ಷೇರು ಮಾರುಕಟ್ಟೆಯು ಮಾರುಕಟ್ಟೆ ಅಪಾಯವನ್ನು ಹೊಂದಿದೆ. ಇಲ್ಲಿ ಲಾಭದ ಗ್ಯಾರಂಟಿ ಇರುವುದಿಲ್ಲ ಎನ್ನುತ್ತಾರೆ ಮಾರುಕಟ್ಟೆ ತಜ್ಞರು.

ವಿದ್ಯಾ ಇರ್ವತ್ತೂರು

View all posts by this author