ಬೆಂಗಳೂರು, ಮೇ 26: ಗುರುವಿನ (Guru) ಬದಲಾವಣೆಯು ಮಿಥುನ ರಾಶಿಯವರ (Gemini) ಮೇಲೆ ಸಕಾರಾತ್ಮಕ ಪರಿಣಾಮವನ್ನು ಬೀರಲಿದೆ. ಈವರೆಗೆ ರಾಶಿಯಲ್ಲೇ (horoscope) ಇದ್ದ ಗುರು ಇನ್ನು ಕರ್ಕಾಟಕ ರಾಶಿ ಪ್ರವೇಶಿಸಲಿದ್ದಾನೆ. ಆದರೂ ಮಿಥುನ ರಾಶಿಯವರಿಗೆ ಪೂರ್ಣವಾದ ಗುರು ಬಲ ಈಗ ಸಿಕ್ಕಿದೆ. ಹೀಗಾಗಿ ಅವರ ಸುವರ್ಣ ಸಮಯವಿದು. ಇನ್ನು ಒಂದು ವರ್ಷ ಮಿಥುನ ರಾಶಿಯವರು ಮುಟ್ಟಿದ್ದೆಲ್ಲ ಚಿನ್ನವಾಗಲಿದೆ. ಯಾವುದೇ ಕೆಲಸ ಕಾರ್ಯಗಳಾಗಲಿ, ಯೋಜನೆಗಳಾಗಲಿ ಎಲ್ಲವೂ ಕೈಗೂಡುವ ಸಮಯವಿದು. ವ್ಯಾಪಾರ, ವ್ಯವಹಾರ, ಉದ್ಯೋಗದಲ್ಲಿ ಉನ್ನತ ಸ್ಥಾನಮಾನ ಸಿಗಲಿದೆ. ಎಲ್ಲಿ ಹೋದರೂ ಗೌರವ ಪ್ರಾಪ್ತವಾಗಲಿದೆ. ಈ ನಡುವೆ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ತೋರುವಂತಿಲ್ಲ. ರೋಗಗಳು ಕಾಡುವ ಸಾಧ್ಯತೆ ಇರುವುದರಿಂದ ಎಚ್ಚರಿಕೆ ಅತ್ಯಗತ್ಯವಾಗಿದೆ. ವಾಹನ ಚಲಾಯಿಸುವಾಗ ಎಚ್ಚರಿಕೆ ವಹಿಸಲೇಬೇಕು. ಸಣ್ಣಪುಟ್ಟ ಅಪಘಾತಗಳು ಆಗುವ ಸಾಧ್ಯತೆ ಇದೆ. ಉದ್ಯೋಗದಲ್ಲಿ ಸ್ಥಿರತೆ, ಬುಧನ ವಿಶೇಷ ಪ್ರಭಾವದಿಂದ ಎಲ್ಲ ಕೆಲಸ ಜಾಣ್ಮೆಯಿಂದ ನಿರ್ವಹಿಸುವಲ್ಲಿ ಮಿಥುನ ರಾಶಿಯವರು ಯಶಸ್ವಿಯಾಗುವರು ಎನ್ನುತ್ತಾರೆ ಖ್ಯಾತ ಜ್ಯೋತಿಷ್ಯರಾದ ಶ್ರೀ ದೇವದತ್ತ ಶರ್ಮ ಗುರೂಜಿ.