ಬೆಂಗಳೂರು: ಬೇಸಗೆಯಲ್ಲಿ ಅಸ್ತಮಾ (Asthama), ಚರ್ಮದ ತೊಂದರೆಗಳು ಹೆಚ್ಚಾಗುತ್ತದೆ. ಇದಕ್ಕೆ ಮುಖ್ಯ ಕಾರಣ ಚಳಿಗಾಲದಲ್ಲಿ ನಾವು ಪಾಲಿಸಿದ ದಿನಚರಿಯೇ (helth tips) ಆಗಿರುತ್ತದೆ ಎನ್ನುತ್ತಾರೆ ಆಯುರ್ವೇದ ತಜ್ಞರಾದ ಡಾ. ಮಲ್ಲಿಕಾರ್ಜುನ ಡಂಬಳ. ವಿಶ್ವವಾಣಿ ಹೆಲ್ತ್ (Vishwavani Health) ನಲ್ಲಿ ಮಾತನಾಡಿರುವ ಅವರು, ದೀರ್ಘಾವಧಿಯ ಆರೋಗ್ಯ ಸಮಸ್ಯೆಗಳು ಕಾಡದಂತೆ ತಡೆಯಲು ನಾವು ನಮ್ಮ ಆರೋಗ್ಯದ ತೊಂದರೆಗಳನ್ನು ಗುರುತಿಸಿ, ಅದನ್ನು ಶಮನ ಮಾಡಬೇಕು ಅಥವಾ ಅದರ ಪರಿವರ್ತನೆ ಮಾಡಬೇಕು ಎಂದು ಹೇಳಿದರು. ಹೆಚ್ಚಿನ ನಿದ್ದೆ ಮತ್ತು ಆಹಾರ ಸೇವನೆಯಿಂದ ಚಳಿಗಾಲದಲ್ಲಿ ದೇಹದಲ್ಲಿ ಕೂಡಿದ ಶಕ್ತಿ ಬೇಸಗೆಯಲ್ಲೇ ಅಸ್ತಮವಾಗಿ ಕಾಡಲು ಪ್ರಾರಂಭವಾಗುತ್ತದೆ. ಒಂದು ರೀತಿಯಲ್ಲಿ ಇದು ಮಂಜುಗಡ್ಡೆಗಳು ಬೇಸಗೆಯಲ್ಲಿ ಕರಗಿ ನಿರದಂತೆ ದೇಹದಲ್ಲಿದ್ದ ಶಕ್ತಿ ಕರಗಿ ಕಫ ರೂಪದಲ್ಲಿ ಹೊರಬರುವುದು. ಇದರಿಂದ ಬೇಸಗೆಯಲ್ಲೇ ಅಸ್ತಮಾ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ ಎನ್ನುತ್ತಾರೆ ಅವರು.