ಬೆಂಗಳೂರು: ಗೃಹ ಸಾಲವನ್ನು (Home loanb) ಆದಷ್ಟು ಬೇಗ ಮುಕ್ತಾಯಗೊಳಿಸುವುದರಿಂದ ಸಾಕಷ್ಟು ಪ್ರಯೋಜನವಿದೆ. ಇದರಲ್ಲಿ ಮುಖ್ಯವಾಗಿ ಹೆಚ್ಚಿನ ಬಡ್ಡಿ ಮೊತ್ತವನ್ನು ಉಳಿತಾಯ ಮಾಡಬಹುದು ಎನ್ನುತ್ತಾರೆ ಕೇಶವ ಪ್ರಸಾದ್. ಈ ಕುರಿತು 'ವಿಶ್ವವಾಣಿ ಮನಿ' (Vishwavani money) ಯುಟ್ಯೂಬ್ ಚಾನೆಲ್‌ನಲ್ಲಿ ಮಾಹಿತಿ ಹಂಚಿಕೊಂಡ ಅವರು 50 ಲಕ್ಷ ರೂ. ಗೃಹ ಸಾಲವನ್ನು 20 ವರ್ಷದ ಬದಲಿಗೆ 10 ವರ್ಷಕ್ಕೆ ಮರು ಪಾವತಿ ಮಾಡಿದರೆ ಬರೋಬ್ಬರಿ 30 ಲಕ್ಷ ರೂಪಾಯಿ ಉಳಿತಾಯ ಮಾಡಬಹುದು. 50 ಲಕ್ಷರೂ. ಗೆ ಶೇ. 8.50ಬಡ್ಡಿ ಲೆಕ್ಕಾಚಾರದಲ್ಲಿ 20 ವರ್ಷಕ್ಕೆ ಕೇವಲ ಬಡ್ಡಿ ಮೊತ್ತವೇ 54,13,879 ರೂ. ಆಗುವುದು. ಇದನ್ನು 10 ವರ್ಷದೊಳಗೆ ಮರು ಪಾವತಿ ಮಾಡಿದರೆ ಸುಮಾರು 29.75 ಲಕ್ಷ ರೂ. ಉಳಿತಾಯ ಮಾಡಬಹುದಾಗಿದೆ. ಇಎಂಐ ಹೊರೆಯಾಗುವುದಾದರೆ ಅದಕ್ಕೆ ತಕ್ಕುನಾದ ಯೋಜನೆಗಳನ್ನು ಹಾಕಿಕೊಳ್ಳಬೇಕು. ಹತ್ತು ವರ್ಷಗಳಲ್ಲಿ ಸಾಲ ಮರುಪಾವತಿ ಮಾಡುವುದರಿಂದ ಮತ್ತು ಹೆಚ್ಚಿನ ಬಡ್ಡಿ ಮೊತ್ತವನ್ನು ಉಳಿತಾಯ ಮಾಡುವುದರಿಂದ ಮಾನಸಿಕ ನೆಮ್ಮದಿ ಪಡೆಯಬಹುದಾಗಿದೆ. ಇದನ್ನು ಭವಿಷ್ಯದ ದೊಡ್ಡ ಗುರಿಗಳಿಗಾಗಿ ಬಳಸಿಕೊಳ್ಳಬಹುದು ಎನ್ನುತ್ತಾರೆ ಕೇಶವ್ ಪ್ರಸಾದ್.