ಬೆಂಗಳೂರು, ಏ. 18: 2026ರ ಏಪ್ರಿಲ್‌ನಲ್ಲಿ ಕುಂಭ ರಾಶಿಯವರ ಜಾತಕದಲ್ಲಿ ಚಂದ್ರ–ರಾಹು ಸಂಯೋಗದಿಂದ ಗ್ರಹಣ ಯೋಗ ಉಂಟಾಗಲಿದ್ದು, ಇದು ಮನಸ್ಸಿನ ಶಾಂತಿಯನ್ನು ಕುಂದಿಸಿ, ಅನಾವಶ್ಯಕ ಚಿಂತನೆಗಳು, ಭಾವನಾತ್ಮಕ ಏರಿಳಿತ ಹಾಗೂ ನಿರ್ಧಾರಗಳಲ್ಲಿ ಗೊಂದಲವನ್ನು ಉಂಟುಮಾಡುವ ಸಾಧ್ಯತೆಯಿದೆ. ಕೆಲ ಸಂದರ್ಭಗಳಲ್ಲಿ ಅನುಮಾನ, ಅಶಾಂತಿ ಮತ್ತು ಒತ್ತಡ ಹೆಚ್ಚಾಗಬಹುದು. ಚಂದ್ರನು 6ನೇ ಮನೆಯ ಅಧಿಪತಿಯಾಗಿರುವುದರಿಂದ, ಆರೋಗ್ಯದ ವಿಚಾರದಲ್ಲಿ ವಿಶೇಷ ಜಾಗ್ರತೆ ಅಗತ್ಯ. ವಿಶೇಷವಾಗಿ ನಿದ್ರೆ ಕೊರತೆ, ಮಾನಸಿಕ ದಣಿವು ಅಥವಾ ಸಣ್ಣ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ದಿನನಿತ್ಯದ ಜೀವನದಲ್ಲಿ ಧ್ಯಾನ ಅಥವಾ ವಿಶ್ರಾಂತಿ ಕ್ರಮ ಸಹಾಯಕವಾಗುತ್ತವೆ. ಒಟ್ಟಾರೆ, ಈ ಅವಧಿಯಲ್ಲಿ ಫಲಿತಾಂಶಗಳು ಮಿಶ್ರವಾಗಿದ್ದು, ಎಚ್ಚರಿಕೆಯಿಂದ ಮುಂದುವರಿದರೆ ಸವಾಲುಗಳನ್ನು ಸಮರ್ಥವಾಗಿ ನಿಭಾಯಿಸಲು ಸಾಧ್ಯವಾಗುತ್ತದೆ ಎಂದು ಭಾರತೀಯ ಜ್ಯೋತಿಷ ವಿಜ್ಞಾನ ಸಂಶೋಧಕ ಮಹಾಬಲ ಮೂರ್ತಿ ಕೊಡ್ಲೆಕೆರೆ ತಿಳಿಸಿದ್ದಾರೆ.